ಐಪಿಎಲ್; ಕಪ್ ಗೆಲ್ಲುತ್ತ ಕೊಹ್ಲಿ ಪಡೆ


ಪ್ರತಿ ಬಾರಿ ಐಪಿಎಲ್ ಬರುತ್ತೆ ಹೋಗುತ್ತೆ. ಆದ್ರೆ ಈ ಬಾರಿ ಕಪ್ ನಮ್ದೆ ಅಂತಾ ಅಭಿಮಾನಿಗಳು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ಹುರಿದುಂಬಿಸತ್ತಲೇ ಬರುತ್ತಿದ್ದಾರೆ. ಆದರೆ ಇದುವರೆಗೆ ಕಪ್ ಮಾತ್ರ ನಮ್ಮದಾಗಲೇ ಇಲ್ಲ. ಅದೇಕೊ ತಂಡದ ಸಾರಥ್ಯವಹಿಸಿರುವ ವಿರಾಟ್ ಕೊಹ್ಲಿಗೆ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಅಥವಾ ಅದೃಷ್ಟ ಒಲಿದು ಬಂದಿಲ್ಲವೊ ಎಂಬ ಅನುಮಾನ ಕಾಡುವುದು ಸಹಜ.
ಕೊಹ್ಲಿ ಭಾರತೀಯ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಏಕೆ ಮೈದಾನದಲ್ಲಿ ತಂಡವನ್ನು ಹುರಿದುಂಬಿಸುವ ಶೈಲಿ, ಅಂಗಳಕ್ಕಿಳಿದರೆ ಎದುರಾಳಿ ಬೌಲರ್ ಗಳನ್ನು ದಂಡಿಸಿ ರೀತಿ ಮನಮೋಹಕ ಬೌಂಡರಿ, ಸಿಕ್ಸರ್ ಗಳ ಸುರಿಮಳೆಯಾಗುವುದಂತು ನಿಶ್ಚಿತ.
ಇವೆಲ್ಲ ಅಂಶಗಳು ಇತ್ತೀಚೆಗಷ್ಟೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ಅಭೂತಪೂರ್ವ ಗೆಲುವಿನ ಸಿಂಚನವೇ ಇದಕ್ಕೆ ಸಾಕ್ಷಿ.ಜತೆಗೆ ಇದೇ ಮೊದಲ ಬಾರಿಗೆ ವಿಶ್ವಕಪ್ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಫೈನಲ್‌ಗೆ ಲಗ್ಗೆ ಹಾಕಿದೆ. ನ್ಯೂಜಿಲೆಂಡ್ ವಿರುದ್ಧ ಸೆಣಸಲು ಸಜ್ಜಾಗಿದೆ.
ಆದರೆ,ಐಪಿಎಲ್ ನಲ್ಲಿ ಕೊಹ್ಲಿ ಸತತವಾಗಿ ವೈಫಲ್ಯ ಅನುಭವಿಸುತ್ತಿರುವುದು ಆರ್ ಸಿಬಿ ಅಭಿಮಾನಿ ಗಳಿಗೆ ನಿರಾಸೆ ಇನ್ನಿಲ್ಲದಂತೆ ಕಾಡುತ್ತಿದೆ. ಒಂದಲ್ಲ ಎರಡಲ್ಲ ಇದುವರೆಗೆ ೧೩ ಐಪಿಎಲ್ ಟೂರ್ನಿಗಳು ನಡೆದಿವೆ. ಈಗ ೧೪ನೇ ಆವೃತ್ತಿಗೆ ವೇದಿಕೆ ಸಜ್ಜುಗೊಂಡಿದೆ. ಈ ಬಾರಿಯಾದರೂ ಕಪ್ ನಮ್ದಾಗುತ್ತ ಎಂಬ ಅಭಿಮಾನಿಗಳ ಆಸೆ ಈಡೇರಿಸುವುದನ್ನೇ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಆದರೆ ಈ ಬಾರಿಯಾದರೂ ಶತಾಯ ಗತಾಯ ಕಪ್ ಗೆಲ್ಲಲೇಬೇಕೆಂಬ ಬಗ್ಗೆ ಹಠಕ್ಕೆ ಬಿದ್ದಿರುವ ಆರ್ ಸಿಬಿ ಮಾಲೀಕರು ಆಟಗಾರರ ಖರೀದಿಗೆ ಹೆಚ್ಚು ಹಣ ವ್ಯಯ ಮಾಡಿದ್ದಾರೆ. ೧೫.೨ ಕೋಟಿ ಬಿಡ್ ಮಾಡಿ ನ್ಯೂಜಿಲೆಂಡ್ ನ ಬ್ಯಾಟ್ಸ್‌ಮನ್ಕೈಲ್ ಜಾಮಿಸನ್ ಅವರನ್ನು ಖರೀದಿ ಮಾಡಿದೆ. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ೧೪.೨೫ ಕೋಟಿ ರೂ ಗಳಿಗೆ ಖರೀದಿಸಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ-೨೦ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಲಯ ಕಂಡುಕೊಂಡಿ ದ್ದಾರೆ.ಅಲ್ಲದೆ ಈ ಬಾರಿಯ ಐಪಿಎಲ್ ನಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲು ಮುಂದಾಗುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.ಕೊಹ್ಲಿ ಜತೆಗೆ ಕೈಲ್ ಜಾಮಿಸನ್ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ತಂಡಕ್ಕೆ ಬಂದಿರುವುದು ಆರ್ ಸಿಬಿ ಬ್ಯಾಟಿಂಗ್ ಗೆ ಆನೆ ಬಲ ಬಂದಂತಾಗಿದೆ.
ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ದ ಸೆಣಸಲಿದೆ.ಆರಂಭಿಕ ಪಂದ್ಯವೇ ಕೊಹ್ಲಿ ಪಡೆಗೆ ಸವಾಲು. ದೇವದತ್ ಪಡಿಕಲ್ ಗೆ ಸೋಂಕು ತಗುಲಿದ್ದು, ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಎಬಿಡಿ ಹಾಗೂ ಕೊಹ್ಲಿ ಮೇಲೆ ಭಾರ ಕಡಿಮೆಯಾಗಿಲ್ಲ.
ಕಳೆದ ಬಾರಿ ಆರ್ ಸಿಬಿ ಪ್ಲೇ ಆಫ್ ಹಂತಕ್ಕೆ ತಲುಪಿತ್ತು. ಪ್ರಶಸ್ತಿ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿರುವ ಆರ್ ಸಿಬಿ, ತಜ್ಞರನ್ನು ನೇಮಕ ಮಾಡಿಕೊಂಡು ಮೊದಲ ಪ್ರಶಸ್ತಿ ಪಡೆಯುವ ಉತ್ಸಾಹ ತಂಡದಲ್ಲಿ ಮನೆ ಮಾಡಿದೆ.
ಆರ್ ಸಿಬಿ ಬ್ಯಾಟಿಂಗ್ ನಲ್ಲಿ ಬಲಿಷ್ಠವಾಗಿದೆ. ಪಡಿಕ್ಕಲ್,ಎಬಿಡಿ ಹಾಗೂ ಕೊಹ್ಲಿ ತಂಡದ ಮೊದಲ ಮೂರು ಕ್ರಮಾಂಕಗಳಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. ಮ್ಯಾಕ್ಸ್ ವೆಲ್, ಡೇನಿಯಲ್ ಕ್ರಿಶ್ಚಿಯನ್, ಮೊಹ್ಮದ್ ಅಜರುದ್ದೀನ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ವಾಷಿಂಗ್ಟನ್ ಸುಂದರ್ ಮೇಲೂ ತಂಡ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ.
ಯಾವುದೇ ತಂಡವಿರಲಿ ದೌರ್ಬಲ್ಯವಿರುವುದು ಸಹಜ.ಮೊಹ್ಮದ್ ಸಿರಾಜ್ ಸೈನಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರಬಹುದು. ಆದರೆ ಟಿ-೨೦ ಕ್ರಿಕೆಟ್ ನಲ್ಲಿ ಹೆಚ್ಚಿನ ಅನುಭವ ಹೊಂದಿಲ್ಲ. ಇವರಿಬ್ಬರ ಜತೆ ಹರ್ಷಲ್ ಪಟೇಲ್ ನಿರೀಕ್ಷೆಯಲ್ಲಿದ್ದಾರೆ. ಈ ಮೂವರು ಬೌಲರ್‌ಗಳು ದುಬಾರಿಯಾಗುವ ಸಾಧ್ಯತೆ ತಳ್ಳಿಹಾಕಲಾಗದು.ಜೇಮಿಸನ್ , ಕೇನ್ ರಿಚರ್ಡ್ ಸನ್ ಅಥವಾ ಡೇನಿಯಲ್ ಸ್ಯಾಮ್ಸ್ ಗೆ ಅವಕಾಶ ಲಭಿಸಬಹುದು. ಲೆಗ್ ಸ್ಪಿನ್ನರ್ ಚಹಲ್ ಪ್ರಮುಖ ಪಾತ್ರ ವಹಿಸಬಹುದು.
ಇವೆಲ್ಲ ಲೆಕ್ಕಾಚಾರಗಳು ಏನೇ ಇರಬಹುದು. ಆಟಗಾರರು ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಆರ್ ಸಿಬಿ ಪಂದ್ಯಗಳು
ಏ. ೯ ಮುಂಬೈ ಇಂಡಿಯನ್ಸ್
ಏ. ೧೪ ಸನ್ ರೈಸರ್ಸ್ ಹೈದರಾಬಾದ್
ಏ. ೧೮ ಕೊಲ್ಕತ್ತಾ ನೈಟ್ ರೈಡರ್ಸ್
ಏ. ೨೨ ರಾಜಸ್ಥಾನ ರಾಯಲ್ಸ್
ಏ. ೨೫ ಚೆನ್ನೈ ಸೂಪರ್ ಕಿಂಗ್ಸ್
ಏ. ೨೭ ಡೆಲ್ಲಿ ಡೇರ್ ಡೆವಿಲ್ಸ್
ಏ. ೩೦ ಪಂಜಾಬ್
ಮೇ ೩ ಕೊಲ್ಕತ್ತಾ ನೈಟ್ ರೈಡರ್ಸ್
ಮೇ ೬ ಪಂಜಾಬ್
ಮೇ ೯ ಸನ್ ರೈಸರ್ಸ್ ಹೈದರಾಬಾದ್
ಮೇ ೧೪ ಡೆಲ್ಲಿ ಡೇರ್ ಡೆವಿಲ್ಸ್
ಮೇ ೧೬ ರಾಜಸ್ಥಾನ ರಾಯಲ್ಸ್
ಮೇ ೨೦ ಮುಂಬೈ ಇಂಡಿಯನ್ಸ್
ಮೇ ೨೩ ಚೆನ್ನೈ ಸೂಪರ್ ಕಿಂಗ್ಸ್