ಐಪಿಎಲ್: ಆರ್ ಸಿಬಿ ವಿರುದ್ಧ ಹೈದ್ರಾಬಾದ್ ಗೆ 5 ವಿಕೆಟ್ ಗಳ ಜಯ

ಶಾರ್ಜಾ: ಜೇಸನ್ ಹೋಲ್ಡರ್ ಆಲ್ರೌಂಡರ್ ಪ್ರದರ್ಶನ ದ ನೆರವಿನಿಂದ ಸನ್ ರೈಸರ್ಸ್ ಹೈದ್ರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಇಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ 5 ವಿಕೆಟ್ ಗಳ ಗೆಲುವು ಸಾಧಿಸಿತು.‌ ಈ ಜಯದೊಂದಿಗೆ ಹೈದ್ರಾಬಾದ್ ಪ್ಲೇ ಆಫ್ ‌ಆಸೆಯನ್ನು ಜೀವಂತ ಇರಿಸಿಕೊಂಡಿದೆ. ‌


ಇಂಡಿಯನ್ ಪ್ರೀಮಿಯರ್ ಲೀಗ್ 13 ನೇ ಆವೃತ್ತಿಯಲ್ಲಿ ಹೈದ್ರಾಬಾದ್ ‌6ನೇ ಗೆಲುವು ದಾಖಲಿಸಿದ್ದು, 12 ಅಂಕಗಳಿಂದ ‌4ನೇ ಸ್ಥಾನದಲ್ಲಿದೆ.

ಅಬ್ಬರಿಸಿದ ಹೋಲ್ಡರ್:


121 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಹೈದ್ರಾಬಾದ್ ಆರಂಭದಲ್ಲೇ ನಾಯಕ ವಾರ್ನರ್ (8) ರನ್ನು ಕಳೆದುಕೊಂಡಿತು. 2ನೇ ವಿಕೆಟ್ ಗೆ ವೃದ್ಧಿಮಾನ್‌ ಸಾಹ ಹಾಗೂ ಮನೀಶ್ ಪಾಂಡೆ ಚೇತರಿಕೆ ನೀಡಿದರು. ಈ ಜೋಡಿ 50 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಮನೀಶ್ ಪಾಂಡೆ 19 ಎಸೆತಗಳಲ್ಲಿ 26 ರನ್‌ಗಳಿಸಿದರು. ನಿಧಾನಗತಿಯ ಬ್ಯಾಟಿಂಗ್ ನಡೆಸಿದರೂ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ ಸಾಹ (39) ಕಾಣಿಕೆ ನೀಡಿ ಚಹಲ್ ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರದ 5 ರನ್‌ಗಳಿಸುವಲ್ಲಿ ಕೇನ್ ವಿಲಿಯಮ್ಸನ್ (8) ನಿರ್ಗಮಿಸಿದರು. ಈ ವೇಳೆ ಕ್ರೀಸ್ ಗೆ ಇಳಿದ ಹೋಲ್ಡರ್, ಆರ್ ಸಿಬಿ ಬೌಲರ್ ಗಳನ್ನು ದಂಡಿಸಿದರು. ಹೋಲ್ಡರ್ ಕೇವಲ 10 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ನೊಂದಿಗೆ 26 ರನ್ ಗಳಿಸಿ ಅಜೇಯರಾಗುಳಿದರು. ಹೈದ್ರಾಬಾದ್ 14.1 ಓವರಲ್ಲಿ 5 ವಿಕೆಟ್‌ ಗೆ 121 ರನ್ ಗಳಿಸಿ ಗೆಲುವಿನ ನಗೆ ಬೀರಿತು.


ಸಂದೀಪ್ ಮಾರಕ ಬೌಲಿಂಗ್:


ಇದಕ್ಕೂ ಮುನ್ನ ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಟ್ಟ ಆರಂಭ ಪಡೆಯಿತು. ತಂಡದ ಮೊತ್ತ 28 ರನ್ ಗಳಿಸುವಷ್ಟರಲ್ಲಿ ದೇವದತ್ ಪಡಿಕ್ಕಲ್ (5), ವಿರಾಟ್ ಕೊಹ್ಲಿ (7) ನಿರ್ಗಮಿಸಿದರು. ಬಳಿಕ ಡಿವಿಲಿಯರ್ಸ್ ಹಾಗೂ ಜೋಶ್ವಾ ಫಿಲಿಪ್ಪೆ ಚೇತರಿಕೆ ನೀಡಿದರು. ಆದರೆ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಡಿವಿಲಿಯರ್ಸ್ (24), ಫಿಲಿಪ್ಪೆ (32) ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಸುಂದರ್ (21), ಗುರುಕೀರತ್ (15*) ರನ್ ಗಳಿಸಿದರು. ಆರ್ ಆರ್ ಸಿಬಿ 20 ಓವರಲ್ಲಿ 7 ವಿಕೆಟ್ ಗೆ 120 ರನ್ ಗಳ ಸಾಧಾರಣ ಮೊತ್ತ ದಾಖಲಿಸಿತು. ವೇಗಿ ಸಂದೀಪ್ ಶರ್ಮಾ, ಜೇಸನ್ ಹೋಲ್ಡರ್ ತಲಾ 2 ವಿಕೆಟ್ ಪಡೆದರು.


ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರಲ್ಲಿ 120/7
ಫಿಲಿಪ್ಪೆ ಸಿ ಮನೀಶ್ ಬಿ ರಶೀದ್ 32(31)
ಪಡಿಕ್ಕಲ್ ಬಿ ಸಂದೀಪ್ 05(08)
ಕೊಹ್ಲಿ ಸಿ ವಿಲಿಯಮ್ಸನ್ ಬಿ ಸಂದೀಪ್ 07(07)
ಡಿವಿಲಿಯರ್ಸ್ ಸಿ ವಿಲಿಯಮ್ಸನ್ ಬಿ ನದೀಮ್ 24(24)
ಸುಂದರ್ ಸಿ ಮತ್ತು ಬಿ ನಟರಾಜನ್ 21(18)
ಗುರುಕೀರತ್ ಅಜೇಯ 15(24)
ಮೋರಿಸ್ ಸಿ ವಾರ್ನರ್ ಬಿ ಹೋಲ್ಡರ್ 03(04)
ಉದಾನ ಸಿ ವಿಲಿಯಮ್ಸನ್ ಬಿ ಹೋಲ್ಡರ್ 00(01)
ಸಿರಾಜ್ ಅಜೇಯ 02(03)
ಇತರೆ: 11(ಬೈ 01, ಲೆಗ್ ಬೈ 02, ವೈಡ್ 08)

ವಿಕೆಟ್‌ ಪತನ: 1-13(ಪಡಿಕ್ಕಲ್), 2-28(ಕೊಹ್ಲಿ), 3-71(ಡಿವಿಲಿಯರ್ಸ್), 4-76(ಫಿಲಿಪ್ಪೆ), 5-106(ಸುಂದರ್), 6-113(ಮೋರಿಸ್), 7-114(ಉದಾನ)

ಬೌಲಿಂಗ್: ಸಂದೀಪ್ 4-0-20-2, ಹೋಲ್ಡರ್ 4-0-27-2, ನಟರಾಜನ್ 4-0-11-1, ನದೀಮ್ 4-0-35-1, ರಶೀದ್ 4-0-24-1

ಸನ್ ರೈಸರ್ಸ್ ಹೈದ್ರಾಬಾದ್ 14.1 ಓವರಲ್ಲಿ 121/5
ವಾರ್ನರ್ ಸಿ ಉದಾನ ಬಿ ಸುಂದರ್ 08(05)
ಸಾಹ ಸ್ಟಂಪ್ ಡಿವಿಲಿಯರ್ಸ್ ಬಿ ಚಹಲ್ 39(32)
ಮನೀಶ್ ಸಿ ಮೋರಿಸ್ ಬಿ ಚಹಲ್ 26(19)
ವಿಲಿಯಮ್ಸನ್ ಸಿ ಕೊಹ್ಲಿ ಬಿ ಉದಾನ 08(14)
ಅಭಿಷೇಕ್ ಸಿ ಗುರುಕೀರತ್ ಬಿ ಸೈನಿ 08(05)
ಹೋಲ್ಡರ್ ಅಜೇಯ 26(10)
ಅಬ್ದುಲ್‌ ಸಮದ್ ಅಜೇಯ 00(00)
ಇತರೆ: 06(ವೈಡ್ 06)
ವಿಕೆಟ್ ಪತನ: 1-10(ವಾರ್ನರ್), 2-60(ಮನೀಶ್), 3-82(ಸಾಹ), 4-87(ವಿಲಿಯಮ್ಸನ್), 5-115(ಅಭಿಷೇಕ್)

ಬೌಲಿಂಗ್: ಮೋರಿಸ್ 2-0-19-0, ಸುಂದರ್ 3-0-21-1, ಸೈನಿ 2-0-30-1, ಸಿರಾಜ್ 1-0-12-0, ಚಹಲ್ 3.1-19-2, ಉದಾನ 3-0-20-1

ಪಂದ್ಯ ಶ್ರೇಷ್ಠ : ಸಂದೀಪ್ ಶರ್ಮಾ