ಐಪಿಎಲ್: ಆರ್‌ಸಿಬಿ ಕನಸು ನುಚ್ಚುನೂರು, ಕ್ವಾಲಿಫೈಯರ್ ಪ್ರವೇಶಿಸಿದ ಹೈದ್ರಾಬಾದ್

ಅಬುಧಾಬಿ: ಕೇನ್ ವಿಲಿಯಮ್ಸನ್ (50) ಆಕರ್ಷಕ ಅರ್ಧಶತಕ ಹಾಗೂ ಜೇಸನ್ ಹೋಲ್ಡರ್ (3-25) ಮತ್ತು (24) ಅತ್ಯದ್ಭುತ ಬ್ಯಾಟಿಂಗ್ ನಿಂದಾಗಿ ಸನ್ ರೈಸರ್ಸ್ ಹೈದ್ರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿತು.
ಈ ಜಯದೊಂದಿಗೆ ಹೈದ್ರಾಬಾದ್ 2 ನೇ ಕ್ವಾಲಿಫೈಯರ್ ಗೆ ಪ್ರವೇಶಿಸಿತು. ಸೋತ ಆರ್ ಸಿಬಿ ಟೂರ್ನಿಯಿಂದ ಹೊರಬಿತ್ತು.

ವಿಲಿಯಮ್ಸನ್ ಅರ್ಧಶತಕ:


132 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ ಹೈದ್ರಾಬಾದ್ ಆರಂಭದಲ್ಲಿ ಶ್ರೀವತ್ಸ್ ಗೋಸ್ವಾಮಿ (0) ಇನ್ನಿಂಗ್ಸ್ ನ 4 ನೇ ಎಸೆತದಲ್ಲಿ ಔಟಾದರು. ಸಿರಾಜ್, ಹೈದ್ರಾಬಾದ್ ಗೆ ಆಘಾತ ನೀಡಿದರು. ‌ವಾರ್ನರ್ (17) ಹೆಚ್ಚು ಹೊತ್ತು ನಿಲ್ಲಲಿಲ್ಲ. ಭರವಸೆ ಮೂಡಿಸಿದ್ದ ಮನೀಶ್ ಪಾಂಡೆ (24) ಜಂಪಾಗೆ ವಿಕೆಟ್‌ ಒಪ್ಪಿಸಿ ಹೊರನಡೆದರು. ಗರ್ಗ್ (7) ಮತ್ತೆ ನಿರಾಸೆ ಮೂಡಿಸಿದರು.

ಮುರಿಯದ 5 ನೇ ವಿಕೆಟ್ ಗೆ ವಿಲಿಯಮ್ಸನ್ ಜೊತೆಯಾದ ಹೋಲ್ಡರ್, ಆರ್ ಸಿಬಿ ಬೌಲರ್ ಗಳನ್ನು ಕಾಡಿದರು. 65 ರನ್ ಗಳ ಜೊತೆಯಾಟ ದ ಕಾಣಿಕೆ ನೀಡಿದ ಈ ಜೋಡಿ, ಹೈದ್ರಾಬಾದ್ ಗೆ ಜಯ ತಂದುಕೊಟ್ಟಿತು. ಹೈದ್ರಾಬಾದ್ 19.4 ಓವರಲ್ಲಿ 4 ವಿಕೆಟ್ ಗೆ 132 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಹೋಲ್ಡರ್ ಮಾರಕ‌ ದಾಳಿ:


ಇದಕ್ಕೂ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ಕೇವಲ 15 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕೊಹ್ಲಿ (6) ದೇವದತ್ ಪಡಿಕ್ಕಲ್ (1) ಹೋಲ್ಡರ್ ದಾಳಿ ಎದುರಿಸಲಾಗದೆ ವಿಕೆಟ್‌ ಒಪ್ಪಿಸಿ ಹೊರನಡೆದರು.
ಬಳಿಕ ಫಿಂಚ್‌ (32) ಹಾಗೂ ಡಿವಿಲಿಯರ್ಸ್ (56) ಹೊರತುಪಡಿಸಿದರೆ, ಇನ್ನುಳಿದ ಬ್ಯಾಟ್ಸ್‌ಮನ್ ಗಳ ನೀರಸ ಪ್ರದರ್ಶನ ತಂಡಕ್ಕೆ ಮಾರಕವಾಯಿತು‌. ಮೋಯಿನ್ ಅಲಿ (0), ಶಿವಂ ದುಬೆ (8), ವಾಷಿಂಗ್ಟನ್ ಸುಂದರ್ (5)
ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿದರು. ಆರ್ ಸಿಬಿ 20 ಓವರಲ್ಲಿ 7 ವಿಕೆಟ್‌ ಗೆ 131 ರನ್ ಗಳಿಸಿತು. ಹೈದ್ರಾಬಾದ್ ಪರ ಹೋಲ್ಡರ್ 3, ನಟರಾಜನ್ 2 ವಿಕೆಟ್ ಪಡೆದರು.

ಸ್ಕೋರ್ ವಿವರ:
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರಲ್ಲಿ 131/7
ಕೊಹ್ಲಿ ಸಿ ಗೋಸ್ವಾಮಿ ಬಿ ಹೋಲ್ಡರ್ 06(07)
ಪಡಿಕ್ಕಲ್ ಸಿ ಗರ್ಗ್ ಬಿ ಹೋಲ್ಡರ್ 01(06)
ಫಿಂಚ್‌ ಸಿ ಸಮದ್ ಬಿ ನದೀಮ್ 32(30)
ಡಿವಿಲಿಯರ್ಸ್ ಬಿ ನಟರಾಜನ್ 56(43)
ಮೋಯಿನ್ ರನೌಟ್ (ರಶೀದ್) 00(01)
ದುಬೆ ಸಿ ವಾರ್ನರ್ ಬಿ ಹೋಲ್ಡರ್ 08(13)
ಸುಂದರ್ ಸಿ ಸಮದ್ ಬಿ ನಟರಾಜನ್ 05(06)
ಸೈನಿ ಅಜೇಯ 09(08)
ಸಿರಾಜ್ ಅಜೇಯ 10(07)
ಇತರೆ: 04(ವೈಡ್ 03, ನೋಬಾಲ್ 01)

ವಿಕೆಟ್‌ ಪತನ: 1-7(ಕೊಹ್ಲಿ), 2-15(ಪಡಿಕ್ಕಲ್), 3-56(ಫಿಂಚ್‌), 4-62(ಮೋಯಿನ್), 5-99(ದುಬೆ), 6-111(ಸುಂದರ್), 7-113(ಡಿವಿಲಿಯರ್ಸ್)

ಬೌಲಿಂಗ್: ಸಂದೀಪ್ 4-0-21-0, ಹೋಲ್ಡರ್ 4-0-25-3, ನಟರಾಜನ್ 4-0-33-2, ನದೀಮ್ 4-0-30-1, ರಶೀದ್ 4-0-22-0

ಸನ್ ರೈಸರ್ಸ್ ಹೈದ್ರಾಬಾದ್ 19.4 ಓವರಲ್ಲಿ 132/4
ವಾರ್ನರ್ ಸಿ ಡಿವಿಲಿಯರ್ಸ್ ಬಿ ಸಿರಾಜ್ 17(17)
ಗೋಸ್ವಾಮಿ ಸಿ ಡಿವಿಲಿಯರ್ಸ್ ಬಿ ಸಿರಾಜ್ 00(03)
ಮನೀಶ್ ಸಿ ಡಿವಿಲಿಯರ್ಸ್ ಬಿ ಜಂಪಾ 24(21)
ವಿಲಿಯಮ್ಸನ್ ಅಜೇಯ 50(44)
ಗರ್ಗ್ ಸಿ ಜಂಪಾ ಬಿ ಚಹಲ್ 07(14)
ಹೋಲ್ಡರ್ ಅಜೇಯ 24(20)
ಇತರೆ: 10(ಲೆಗ್ ಬೈ 05, ವೈಡ್ 04, ನೋಬಾಲ್ 01)

ವಿಕೆಟ್‌ ಪತನ: 1-2(ಗೋಸ್ವಾಮಿ), 2-43(ವಾರ್ನರ್), 3-55(ಮನೀಶ್), 4-67(ಗರ್ಗ್)

ಬೌಲಿಂಗ್: ಸಿರಾಜ್ 4-0-28-2, ಸೈನಿ 3.4-0-31-0, ಸುಂದರ್ 2-0-21-0, ಜಂಪಾ 4-0-12-1, ಚಹಲ್ 4-0-24-1, ಮೋಯಿನ್ 1-0-4-0, ದುಬೆ 1-0-7-0

ಪಂದ್ಯ ಶ್ರೇಷ್ಠ : ಕೇನ್ ವಿಲಿಯಮ್ಸನ್