ಐಪಿಎಲ್‌ಅನ್ನು ಭಾರತದಲ್ಲೇ ಆಯೋಜಿಸಿ- ಆದಿತ್ಯ ವರ್ಮ

ನವದೆಹಲಿ, ಆ ೨- ಕ್ರಿಕೆಟ್‌ ಪ್ರೇಮಿಗಳ ಹಬ್ಬವಾದ ಐಪಿಎಲ್‌ಗೆ ಯುಎಇನಲ್ಲಿ ಕೂಡ ಸುರಕ್ಷಿತವಲ್, ಹಾಗಾಗಿ ಭಾರತದಲ್ಲೇ ಆಯೋಜಿಸಿ ಎಂದು ಆದಿತ್ಯ ವರ್ಮ ಅವರು ಐಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಪತ್ರ ಬರೆದಿದ್ದಾರೆ.

ಆದಿತ್ಯ ವರ್ಮ ಐಪಿಎಲ್ ಸ್ಪಾಟ್‌ ಫಿಕ್ಸಿಂಗ್ ಪ್ರಕರಣದಲ ಮೂಲ ಅರ್ಜಿದಾರ ಆಗಿದ್ದಾರೆ. ಈ ಬಾರಿಯ ಐಪಿಎಲ್‌ಅನ್ನು ಸೆಪ್ಟಂಬರ್ 19 ರಿಂದ ಆಯೋಜಿಸಲು ನಿರ್ಧರಿಸಲಾಗಿದ್ದು ಐಪಿಎಲ್ ಆಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಬಿಸಿಸಿಐ ಕಾಯುತ್ತಿದೆ. ಈ ಮಧ್ಯೆ ಭಾರತದಲ್ಲೇ ಯಾಕೆ ಐಪಿಎಲ್ ನಡೆಯಬೇಕೆಂದು ಆದಿತ್ಯ ವರ್ಮ ಕೆಲ ಕಾರಣಗಳನ್ನು ಮುಂದಿಟ್ಟು ಪತ್ರ ಬರೆದಿದ್ದಾರೆ.

ಯುಎಇನ ಅತಿ ದೊಡ್ಡ ಕ್ರೀಡಾಕೂಟವಾದ ದುಬೈ ರಗ್ಬಿ ಸೆವೆನ್ಸ್ ನವೆಂಬರ್‌ನಲ್ಲಿ ಆಯೋಜನೆಗೆ ನಿಗದಿಯಾಗಿತ್ತು. ಆದರೆ ಕೊರೊನ ಆವೈರಸ್‌ನ ಕಾರಣದಿಂದಾಗಿ ಅದನ್ನು ಮುಂದೂಡಲಾಗಿದೆ. ಹೀಗಿದ್ದಾಗ ಅದಕ್ಕೂ ಮುನ್ನವೇ ಐಪಿಎಲ್‌ಅನ್ನು ಅಲ್ಲಿ ಆಯೋಜಿಸಲು ಹೇಗೆ ಸಾಧ್ಯವಾಗುತ್ತದೆ. ಇದಕ್ಕಾಗಿ ಗಂಗೂಲಿಗೆ ಪತ್ರವನ್ನು ಬರೆದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಭಾರತದಲ್ಲಿ ಐದು ಲಕ್ಷದಷ್ಟು ಸಕ್ರಿಯ ಕೊರೊನ ವೈರಸ್ ಪ್ರಕರಣಗಳು ಹಾಗೂ 36000ದಷ್ಟು ಸಾವುನೋವುಗಳು ಸಂಭವಿಸಿದೆ. ಈ ಮಧ್ಯೆಯೂ ಯುಎಇನ ಮೂರು ವಿಭಿನ್ನ ಕ್ರೀಡಾಂಗಣಗಳಲ್ಲಿ ಐಪಿಎಲ್‌ಗಿಂತ ಮುಂಬೈನಲ್ಲಿ ಜೈವಿಕ ಸುರಕ್ಷಿತಾ ವಲಯವನ್ನು ನಿರ್ಮಾಣ ಮಾಡಿ ಐಪಿಎಲ್ ನಡೆಸುವುದು ಸೂಕ್ತ ಎಂದು ಒತ್ತಾಯಿಸಿದ್ದಾರೆ.

ಮುಂಬೈನಲ್ಲೇ ಐಪಿಎಲ್ ಆಯೋಜಿಸುವ ಬಗ್ಗೆ ಅವರು ಗರಿಷ್ಠ ಪ್ರಯತ್ನನ್ನು ಮಾಡಬಹುದಾಗಿತ್ತು ಎಂದು ವರ್ಮ ಹೇಳಿದ್ದಾರೆ. ಇನ್ನು ಭಾರತದಲ್ಲೇ ನಡೆದರೆ ವಿದೇಶಿ ಆಟಗಾರರು ಪಾಲ್ಗೊಳ್ಳಲು ಹಿಂಜರಿಯಬಹುದು ಎಂಬುದಕ್ಕೆ 60 ವಿದೇಶಿ ಆಟಗಾರರ ಬದಲಿಗೆ ಭಾರತೀಯ ಆಟಗಾರರನ್ನೇ ಬಳಸಿಕೊಂಡು ಈ ಟೂರ್ನಿಯನ್ನು ನಡೆಸಬಹುದು ಎಂದು ಅವರು ಹೇಳಿದ್ದಾರೆ.