ಐಪಿಎಲ್‌ನಿಂದ ಮುಂಬೈ ಔಟ್

ಮುಂಬೈ.ಮೇ.೯-ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ.
ಟೂರ್ನಿಯಿಂದ ಹೊರಬಿದ್ದ ಮೊದಲ ತಂಡವಾಗಿದೆ.
ನಿನ್ನೆ ಸನ್‌ರೈಸರ್‍ಸ್ ವಿರುದ್ಧ ಲಕ್ನೊ ಸೂಪರ್ ಜೈಂಟ್ಸ್ ತಂಡ ಸೋಲು ಕಂಡಿತು. ಒಂದು ವೇಳೆ ಲಕ್ನೊ ಗೆದ್ದಿದ್ದರೆ ಮುಂಬೈ ತಂಡಕ್ಕೆ ಪ್ಲೇಆಫ್‌ಗೇರಲು
ಇನ್ನು ಅವಕಾಶ ಇರುತ್ತಿತ್ತು.
ಅಂಕಪಟ್ಟಿಯಲ್ಲಿ ೯ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ೧೨ ಪಂದ್ಯಗಳಿಂದ ೮ರಲ್ಲಿ ಸೋತು ೪ರಲ್ಲಿ ಗೆದ್ದುಕೊಂಡಿದೆ. ಹೀಗಾಗಿ ಮುಂದಿನ ಸುತ್ತಿಗೆ ಹೋಗುವ
ಅರ್ಹತೆಯನ್ನು ಕಳೆದುಕೊಂಡಿದೆ. ಹಾರ್ದಿಕ್ ಪಡೆಗೆ ಇನ್ನು ಪಂದ್ಯಗಳಿವೆ. ಕೋಲ್ಕತ್ತಾ ಮತ್ತು ಲಕ್ನೊ ವಿರುದ್ಧ ಗೆದ್ದರೂ ೧೨ ಅಂಕಗಳನಷ್ಟೆ ಸಂಪಾದಿಸಬಹುದಾಗಿದೆ.