ಐನಾಪೂರ, ಬೆನಕೆಪಳ್ಳಿಯಲ್ಲಿ ಹುಚ್ಚುನಾಯಿ ಕಚ್ಚಿ 13 ಜನರಿಗೆ ಗಾಯ

ಚಿಂಚೋಳಿ,ಸೆ.10-ತಾಲೂಕಿನ ಬೆನಕೆಪಳ್ಳಿ ಹಾಗೂ ಐನಾಪೂರದಲ್ಲಿ ಹುಚ್ಚು ನಾಯಿ 13 ಜನರಿಗೆ ಕಡಿದು ಹುಚ್ಚಾಟ ಮೆರೆದಿದ ಘಟನೆ ಶನಿವಾರ ತಡ ರಾತ್ರಿ ಜರುಗಿದೆ.
ಬೆನಕೆಪಳ್ಳಿ ಗ್ರಾಮದ ಹೊಲದಲ್ಲಿ ಓರ್ವ ವ್ಯಕ್ತಿಗೆ ಕುಡಿದು ಐನಾಪೂರಕ್ಕೆ ಧಾವಿಸಿ 12 ಜನರಿಗೆ ಕಚ್ಚಿ ಹುಚ್ಚಾಟ ಮೆರೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಹುಚ್ಚು ನಾಯಿ ಕಡಿತಕ್ಕೆ ಒಳಗಾದವರು ತಕ್ಷಣವೇ ಐನಾಪೂರದ ಪ್ರಾಥಮಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದು, ಡಾ.ಜುಬೇರ್ ಹಾಗೂ ಸಿಬ್ಬಂದಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ತೆರಳುವಂತೆ ಸೂಚಿಸಿದ್ದಾರೆ. ತಡರಾತ್ರಿ ನಡೆದ ಘಟನೆಯಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಸುಮಾರು 2ಗಂಟೆಗೂ ಅಧಿಕ ಕಾಲ ಅಂಬುಲೆನ್ಸ್ ಬರುವಿಕೆಗಾಗಿ ಪರದಾಡಿದ್ದಾರೆ. ನಂತರ ಕೆಲವರು ಅಂಬುಲೆನ್ಸ್‍ನಲ್ಲಿ ತೆರಳಿದರೆ, ಇನ್ನೂ ಕೆಲವರು ಖಾಸಗಿ ವಾಹನಗಳಲ್ಲಿ ಕಲಬುರ್ಗಿ ಜಿಮ್ಸ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.