ಐನಾಪೂರ: ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ

ಚಿಂಚೋಳಿ,ಸೆ.10- ತಾಲೂಕ ಮಟ್ಟದ ಕ್ರೀಡಾ ಕೂಟದ 200 ಮೀಟರ್ ಓಟದಲ್ಲಿ ಐನಾಪೂರ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ವಿನೋದ ತಂದೆ ರಾಜು 2 ಸ್ಥಾನವನ್ನು ಪಡೆದು ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಯ ಸಾಧನೆಗೆ ಮುಖ್ಯ ಗುರುಗಳಾದ ರಾವಸಾಬ ಭಜಂತ್ರಿ, ಸಿಬ್ಬಂದಿ ವರ್ಗ, Sಆಒಅ ಅದ್ಯಕ್ಷರಾದ ಸಿದ್ದಪ್ಪ ಗಾರಪಂಳ್ಳಿ, ಸದಸ್ಯರು ಮತ್ತು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ
ಐನಾಪೂರ ಸರಕಾರಿ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಕ ಇಲ್ಲದ ಕಾರಣ ಇನ್ನ ಅನೇಕ ವಿದ್ಯಾರ್ಥಿಗಳು ಆಟ ವಂಚಿತರಾಗುತ್ತಿತ್ತು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಐನಾಪೂರ ಸರಕಾರಿ ಪ್ರೌಢಶಾಲೆಗೆ ದೈಹಿಕ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಐನಾಪೂರ ಗ್ರಾಮಸ್ಥರು ಒತ್ತಾಯಿಸಿದ್ದಾರೆ