ಐನಾಪುರ ಶೀಮಠದ ಶ್ರಾವಣ ಪುರಾಣ ಪ್ರವಚನಕ್ಕೆ ಚಾಲನೆ

ಚಿಂಚೋಳಿ,ಜು.30- ತಾಲೂಕಿನ ಐನಾಪುರ ಗ್ರಾಮದ ಶೀಮಠದಲ್ಲಿ ಆಯೋಜಿಸಿದ ಶ್ರಾವಣ ಮಾಸದÀ ಒಂದು ತಿಂಗಳ ಪೂರಾಣ ಪ್ರವಚನ ಕಾರ್ಯಕ್ರಮಕ್ಕೆ ಮಾಜಿ ತಾಲೂಕ ಪಂಚಾಯತ್ ಸದಸ್ಯ ಬನಶೀಲಾಲ್ ಚಿನ್ನ ರಾಠೋಡ, ಅವರುÀ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಅವರು, ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹೀರೆಮಠದ ಕಿರಿಯ ಶ್ರೀಗಳಾದ ಪೂಜ್ಯ ಪಂಚಾಕ್ಷರ ದೇವರು ಸ್ವಲ್ಪ ಸಮಯದಲ್ಲೇ ಅಪಾರ ಭಕ್ತರನ್ನು ಸಂಪಾದಿಸಿದ್ದಾರೆ ಇವರ ಮಹಿಮೆ ಮುಂಬರುವ ದಿನಗಳಲ್ಲಿ ನಾಡಿನ ತುಂಬಾ ಪ್ರಾಸಾರ ವಾಗುವದರಲ್ಲಿ ಅನುಮಾನವೇ ಇಲ್ಲ. ಎಂದರು,
ಇಂತಹ ಪೂಜ್ಯರಿಗೆ ಪಡೆದ ಭಕ್ತಸಮುದಾಯವಾದ ನಾವೆಲ್ಲ ಧನ್ಯರು ಎಂದು ಬನಶೀಲಾಲ್ ಚಿನ್ನ ರಾಠೋಡ, ಹೇಳಿದರು ಒಂದು ತಿಂಗಳ ಶ್ರಾವಣ ಮಾಸ ಅಂಗವಾಗಿ ಶ್ರೀಶೈಲ್ ಶಾಸ್ತ್ರಿ ಮತ್ತು ವೇ.ಮೂ.ವೀರಯ್ಯ ಸ್ವಾಮಿ ಮಠಪತಿ ಒಂದು ತಿಂಗಳ ಪಯರ್ಂತರ ಶ್ರೀ ಶರಣ ಬಸವೇಶ್ವರರ ಪೂರಾಣವನ್ನು ನಡೆಸಿಕೊಡಲಿದ್ದು ಅವರ ಜೊತೆಗೆ ಬಾಬುರಾವ್ ಕೋಟಗಾ, ಮಡೆಪ್ಪ. ಒಂದು ತಿಂಗಳ ಕಾಲ ನೃತ್ಯ ಪ್ರವಚನ ಜರಗಲಿದೆ ಎಂದು ಶ್ರೀ ಮಠದ ಭಕ್ತಾದಿಗಳು ತಿಳಿಸಿದರು ಕಾರ್ಯಕ್ರಮದಲ್ಲಿ ಐನಾಪೂರ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಉಮಾಲಿಬಾಯಿ ಬಿ ಚಿನ್ನರಾಥೋಡ್, ಚಿಂಚೋಳಿ ಮಾಜಿ ಎಪಿಎಂಸಿ ಅಧ್ಯಕ್ಷರಾದ ಅಶೋಕ್ ಪದಶೆಟ್ಟಿ , ಐನಾಪುರದ ಪಿಕೆಪಿಎಸ್ ಅಧ್ಯಕ್ಷ ರೇವಪ್ಪ ಉಪ್ಪಿನ, ಐನಾಪುರ ಹಾಲು ಉತ್ಪದಕರ ಸಹಕಾರ ಸಂಘದ ಅಧ್ಯಕ್ಷರಾದ ನಾಗಶೆಟ್ಟಿ ಮಾಲಿ ಪಾಟೀಲ್, ಉಪಾಧ್ಯಕ್ಷ ಶಿವರಾಜ್ ಮೇತ್ರಿ, ನಾಗಶೆಟ್ಟಿ ಕಾಳಗಿ, ರಮೇಶ್ ಪದಶೆಟ್ಟಿ,ನಾಗರಾಜ್ ಕೋರಿ,ಗುಂಡಪ್ಪ ಕೋತ್ತಮುರಿ, ಬಸಪ್ಪ ಬ್ಯಾಲಳ್ಳಿ, ಸಂಗಪ್ಪ ವಾಡೆದ ,ರವಿಕಾಂತ್ ಮಠಪತಿ, ವೈಜಿನಾಥ ಕೊಠಾರ, ಗ್ರಾಮ ಪಂಚಾಯತ್ ಸದಸ್ಯರು, ಪಿಕೆಪಿಎಸ್ ನ ಸದಸ್ಯರು, ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಮುಂತಾದ ಅಪಾರ ಭಕ್ತರು ಇದ್ದರು. ತಾಲೂಕ ಕರವೇ ಅಧ್ಯಕ್ಷರಾದ ವೀರಶೆಟ್ಟಿ ಹಳ್ಳಿ ಐನಾಪುರ ಕಾರ್ಯಕ್ರಮ ನಿರೂಪಿಸಿದರು, ಭದ್ರಪ್ಪ ಸಲ್ಗರ್ ಸ್ವಾಗತಿಸಿದರು.