ಐನಾಪುರ :ಕೊರೋನಾ ಕುರಿತು ಸಭೆ

ಚಿಂಚೋಳಿ ಎ. 26: ತಾಲೂಕಿನ ಐನಾಪುರ ಗ್ರಾಮ ಪಂಚಾಯತನಲ್ಲಿ ಕೋವಿಡ್ 19. ಸೋಂಕು ಕುರಿತು ಸಭೆ ಜರಗಿತು.ಸಭೆ ಉದ್ದೇಶಿಸಿ ಚಿಂಚೋಳಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಕೋವಿಡ್ 19. ನೋಡಲ್ ಅಧಿಕಾರಿ ಪ್ರಭುಲಿಂಗ ವಾಲಿ ಅವರು ಮಾತನಾಡಿ ಐನಾಪೂರ ಗ್ರಾಮದ ವ್ಯಾಪ್ತಿಯ ಜನರು ಕಡ್ಡಾಯವಾಗಿ ಮಾಸ್ಕ್, ಮತ್ತು ಸ್ಯಾನಿಟೈಜರ್ ಉಪಯೋಗ ಮಾಡಬೇಕು. ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗೆ ಗ್ರಾಹಕರು ಬಂದರೆ ಸಾಮಾಜಿಕ ಅಂತರ ಕಾಪಾಡಬೇಕು.ಗ್ರಾಮದ ಜನರು ಅವಶ್ಯಕತೆ ಇದ್ದರೆ ಮಾತ್ರ ಹೊರಗಡೆ ಬರಬೇಕು.ಐನಾಪೂರ ಗ್ರಾಮವನ್ನು ಕೊರೋನಾ ಮುಕ್ತ ಗ್ರಾಮ ಮಾಡಬೇಕೆಂದು ಅವರು ಹೇಳಿದರು.ಸಭೆಯಲ್ಲಿ. ಐನಾಪೂರ ತಾಲೂಕ ಪಂಚಾಯತ ಸದಸ್ಯ ಪ್ರೇಮಸಿಂಗ ಜಾಧವ್. ಐನಾಪೂರ ಉಪ ತಹಸೀಲ್ದಾರ್ ರಮೇಶ್ ಕೋಳಿ.ಐನಾಪೂರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಗೋವಿಂದರೆಡ್ಡಿ. ಐನಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೈಲಜಾ. ಗ್ರಾಮ ಪಂಚಾಯತ ಉಪಾಧ್ಯಕ್ಷ ಸಂಜು ಕುಮಾರ ಖಾನಾಪುರ್. ಗ್ರಾಮ ಪಂಚಾಯತ ಸದಸ್ಯ ರಾಜಕುಮಾರ. ಮತ್ತು ಗ್ರಾಮ ಪಂಚಾಯತ ಹಲವು ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಭಾಗಿಯಾದರು