ಐನಾಕ್ ಚಿತ್ರ ಮಂದಿರ : ಹೆಚ್ಚಿನ ದರ – ಕಾನೂನು ಬಾಹೀರ ಪ್ರದರ್ಶನ

ರಾಯಚೂರು.ಏ.೦೩- ನಗರದ ಮಿರಾಜ್ ಸಿನಿಮಾ ಐ-ನಾಕ್‌ನಲ್ಲಿ ಕನ್ನಡ ಯುವರತ್ನ ಚಿತ್ರಕ್ಕೆ ಎಲ್ಲಾ ವರ್ಗಗಳಿಗೂ ಒಂದೇ ದರ ನಿಗದಿ ಪಡಿಸಿ, ಪ್ರೇಕ್ಷಕರನ್ನು ಕೊಳ್ಳೆ ಹೊಡೆಯಲಾಗುತ್ತಿದೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ.
ನಾಲ್ಕು ಚಿತ್ರಮಂದಿರಗಳಲ್ಲಿ ದಿನಕ್ಕೆ ೧೪ ಪ್ರದರ್ಶನ ನಡೆಸಬೇಕು. ಆದರೆ, ಈ ನಿಯಮ ಉಲ್ಲಂಘಿಸಿ, ೨೦ ಚಿತ್ರ ಪ್ರದರ್ಶನಗಳನ್ನು ನಿರ್ವಹಿಸಲಾಗಿದೆ. ಅಲ್ಲದೇ, ದೊಡ್ಡ ಸ್ಟಾರ್‌ಗಳ ಚಿತ್ರಗಳು ಮಾತ್ರ ಪ್ರದರ್ಶಿಸಲಾಗುತ್ತದೆ. ಸಣ್ಣ ಪುಟ್ಟ ಚಿತ್ರ ಪ್ರದರ್ಶನ ಹಾಗೂ ತೆಲುಗು, ಆಂಗ್ಲ ಭಾಷೆ ಚಿತ್ರಗಳಿಗೆ ಆದ್ಯತೆ ನೀಡಲಾಗುತ್ತದೆ. ಶೇ.೬೦ ರಷ್ಟು ಕನ್ನಡೀಕರಣವಾಗಬೇಕೆಂದು ಆದೇಶವಿದ್ದರೂ, ಇದನ್ನು ಉಲ್ಲಂಘಿಸಲಾಗಿದೆ. ಅಲ್ಲದೇ, ಚಿತ್ರ ಟಿಕೆಟ್‌ಗಳ ದರವೂ ೨೦೦ ರೂ. ನಿಗದಿ ಪಡಿಸಲಾಗಿದೆ. ಈ ರೀತಿ ಕನ್ನಡಕ್ಕೆ ಅನ್ಯಾಯ ಮತ್ತು ಪ್ರೇಕ್ಷಕರಿಗೆ ವಂಚಿಸಲಾಗುತ್ತಿದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಒತ್ತಾಯಿಸಿದೆ.
ಈ ಪ್ರತಿಭಟನೆಯಲ್ಲಿ ಕೆ.ಗೋವಿಂದ ರಾಜ್, ಆಸೀಫ್, ಸಂಜಯ್, ವೈಷ್ಣವ್, ನಾಗರಾಜ, ಸುಭಾಷ, ಅಜೀಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.