ಐದೇ ವರ್ಷದಲ್ಲಿ ಬದುಕು ಹಸನು: ಕುಮಾರಸ್ವಾಮಿ

ಬೀದರ್:ಜ.6: ಪೂರ್ಣ ಬಹುಮತದೊಂದಿಗೆ ಅಡಳಿತ ನಡೆಸಲು ರಾಜ್ಯದ ಜನತೆ ಅವಕಾಶ ನೀಡಿದರೆ ಕೇವಲ ಐದು ವರ್ಷದಲ್ಲಿ ಬಡವರ, ರೈತರ, ಮಹಿಳೆಯರ ಬದುಕು ಹಸನಾಗಿರುವೆ. ನುಡಿದಂತೆ ನಡೆಯದಿದ್ದಲ್ಲಿ ಪತ್ರವನ್ನು ವಿಸರ್ಜನೆ ಮಾಡುವೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಂಚರತ್ನ, ರಥಯಾತ್ರೆ ನಿಮಿತ್ತ ಗಣೇಶ ಮೈದಾನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿ, ನಾನು ಯಾವ ಪಕ್ಷದ ಬಗ್ಗೆ ಮಾತನಾಡುವುದಿಲ್ಲ, ಜನರ ಬಳಿ ಹೋಗಿ ಸಮಸ್ಯೆ ಅಲಿಸಿ ಉತ್ತಮ ಅಡಳಿತ ನೀಡುವ ಭರವಸೆ ನೀಡುತ್ತಿರುವೆ, ಒಂದು ಬಾರಿ ಪೂರ್ಣಬಹುಮತ ನೀಡಿದರೆ ರಾಜ್ಯವನ್ನು ಕಲ್ಯಾಣ ಮಾಡುವೆ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ, ಪಂಚೆ ಯೋಜನೆ ಜಾರಿ ಮಾಡಲಾಗುವುದು, ಬಡವ, ಶ್ರೀಮಂಶ ತಾರತಮ್ಯ ಇಲ್ಲದೆ ರಾಜ್ಯದ ಎಲ್ಲ ಮಕ್ಕಳಿಗೆ 1ರಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು. ಇದಕ್ಕಾಗಿ ರಾಜ್ಯದ ಗ್ರಾಮ ಪಂಚಾಯಿತಿಗೊಂದು ಕನ್ನಡ ಮತ್ತು ಅಂಗ್ಲ ಮಾಧ್ಯಮದ ಹೈಟೆಕ್ ಶಾಲೆ ಆರಂಭಿಸಲಾಗುವುದು,
ಆರೋಗ್ಯ ಕ್ಷೇತ್ರದ ಅನುಕೂಲಕ್ಕಾಗಿ ಗ್ರಾಪಂಗೆ ಒಂದು 30 ಹಾಸಿಗೆ ಆಸ್ಪತ್ರೆ ನಿರ್ಮಿಸುವ ಯೋಜನೆ ಹೊಂದಿರುವೆ. ರೈತರಿಗಾಗಿ ನೀರಾವರಿ, ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಕ್ಕೆ ನೆರವು, ಸ್ತ್ರೀ ಶಕ್ತಿ ಗುಂಪುಗಳ ಸಾಲ ಮನ್ನಾ ಸೇರಿ ನಾನಾ ಯೋಜನೆಗಳನ್ನು ಜಾರಿ ಮಾಡುವೆ ಎಂದು ಭರವಸೆ ನೀಡಿದರು.
ನಾನು ಅಧಿಕಾರದಲ್ಲಿ ಇದ್ದಾಗ ಜನರ ಅನುಕೂಲಕ್ಕಾಗಿ ಅನೇಕ ಜನಪರ ಕಾರ್ಯಕ್ರಮ ನೀಡಿರುವ ಮೈತ್ರಿ ಸರ್ಕಾರದ ಪತನದ ಬಳಿಕ ಕರೋನಾ ವಕ್ಕರಿಸಿತು. ಮಹಾಮಾರಿಗೆ ಬಹಳಷ್ಟು ಜನ ಬಲಿಯಾದರು. ಬಿಜೆಪಿ ಸರ್ಕಾರ ಆರೋಗ್ಯ ವ್ಯವಸ್ಥೆ ಸುಧಾರಿಸುವ ಕೆಲನೆ ಮಾಡಲಿಲ್ಲ: ಕರೊನಾದಿಂದ ಮೃತಪಟ್ಟವರು ಹಾಗೂ ಅತಿವೃಷ್ಟಿಯಿಂದ ಮಳೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಇದು ಕೇವಲ ಘೋಷಣೆ ಸರ್ಕಾರ ಎಂದು ಕಿಡಿಕಾರಿದ್ದರು.

ಒಂದೆಡೆ ನಿರುದ್ಯೋಗ ಸಮಸ್ಯೆ ಇದ್ದರೆ, ಮತ್ತೊಂದೆಡೆ ಬಡತನ ಅವರಿಸಿದೆ. ರೈತರಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಅನ್ನದಾತರು ಮತ್ತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇವೆಲ್ಲವನ್ನು ನಾನು ಗಮನಿಸಿದ್ದೇನೆ. ರೈತರ, ಬಡವರ, ಶ್ರಮಿಕರ ಪರವಾಗಿ ನಾವು ಕೆಲಸ ಮಾಡಲು ವಂಚ ಯೋಜನೆ ರೂಪಿಸಿರುವೆ ಎಂದರು.

ನಾಡಿನ ಗ್ರಾಮೀಣ, ನಗರ ಭಾಗದ ಹೆಣ್ಣುಮಕ್ಕಳಿಗೆ ಸರ್ಕಾರದಿಂದಲೇ ಆರ್ಥಿಕ ನೆರವು ನೀಡುವುದು ಕೂಡ ನಮ್ಮ ಉದ್ದೇಶ, ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಕನ್ನಡ ಪಕ್ಷಕ್ಕೆ ಒಮ್ಮೆ ಸ್ವತಂತ್ರವಾಗಿ ಅಡಳಿತ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು,

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿ ಸಭೆ ಉದ್ದೇಶಿಸಿ ಮಾತನಾಡಿ, ಹಸಿವು ಮುಕ್ತ ಕರ್ನಾಟಕ ಜೆಡಿಎಸ್ ಗುರಿ

‘ಹಸಿವು ಮುಕ್ತ ಕರ್ನಾಟಕ ಜೆಡಿಎಸ್ ಗುರಿಯಾಗಿದೆ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ ಇಬ್ರಾಹಿಂ ನುಡಿದರು.
ಜಾತ್ಯತೀತ ಜನತಾ ದಳದ ಪಂಚರತ್ನ ಯಾತ್ರೆ ಪ್ರಯುಕ್ತ ಇಲ್ಲಿಯ ಗಣೇಶ ಮೈದಾನದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ರಾಜ್ಯದ ಆರೂವರೆ ಕೋಟಿ ಜನ ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು. ಅದನ್ನು ಕಣ್ಣಾರೆ ನೋಡಬೇಕು ಎನ್ನುವುದೇ ನಮ್ಮ ಆಸೆ’ ಎಂದು ಹೇಳಿದರು.
‘ರಾಜ್ಯದ ಎಲ್ಲ ಮಕ್ಕಳಿಗೂ ಶಿಕ್ಷಣ ದೊರಕಬೇಕು. ಪ್ರತಿಯೊಬ್ಬರಿಗೂ ಮನೆ ಕಟ್ಟಿಸಿಕೊಡಬೇಕು. ಬಡವರು, ರೈತರಿಗೆ ಸಹಾಯ ಮಾಡಬೇಕು ಎನ್ನುವುದು ಎಚ್.ಡಿ. ಕುಮಾರಸ್ವಾಮಿ ಅವರ ಮಹಾದಾಸೆಯಾಗಿದೆ .ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರು ಮೋದಿ, ಯೋಗಿ ಜಪ ಮಾಡುತ್ತಿದ್ದಾರೆ. ಆದರೆ, ಸಂಸಾರ ಇಲ್ಲದವರ ಕೈಗೆ ರಾಜ್ಯ ಕೊಡಬಾರದು. ಯೋಗಿಗೆ ಪ್ರೀತಿ ಎಂದರೇನು ಗೊತ್ತಿಲ್ಲ’ ಎಂದು ವ್ಯಂಗ್ಯವಾಗಿ ಹೇಳಿದರು.
‘ಬಸವಣ್ಣ, ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ ಸೇರಿದಂತೆ ಮಹಾ ಪುರುಷರ ಅನುಯಾಯಿಗಳು ಈ ಬಾರಿ ಪಕ್ಷದ ಕೈಹಿಡಿಯಲಿದ್ದಾರೆ’ ಎಂದು ತಿಳಿಸಿದರು.

ರಾಷ್ಟ್ರೀಯ ಪಕ್ಷಗಳಿಂದ ಸುಳ್ಳು ಭರವಸೆ:

‘ರಾಷ್ಟ್ರೀಯ ಪಕ್ಷಗಳು ಜನತೆಗೆ ಸುಳ್ಳು ಭರವಸೆ ಕೊಡುವುದರಲ್ಲೇ ಇವೆ. ಭರವಸೆ ಕೊಡುವುದರಲ್ಲೇ ಇವೆ. ರಾಜ್ಯದಲ್ಲಿ ಜೆಡಿಎಸ್ ಪರವಾದ ದೊಡ್ಡ ಅಲೆ ಎದ್ದಿದೆ. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ’ ಎಂದು ವಿಧಾನಸಭೆಯ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪುರ ಹೇಳಿದರು.

‘ಪಕ್ಷ ಹಮ್ಮಿಕೊಂಡಿರುವ ಪಂಚರತ್ನ ಯಾತ್ರೆಗೆ ರಾಜ್ಯದೆಲ್ಲೆಡೆ ಭಾರಿ ಜನಬೆಂಬಲ ವ್ಯಕ್ತವಾಗುತ್ತಿದೆ’ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ರಮೇಶ ಗೌಡ, ವಿಧಾನಸಭೆ ಚುನಾವಣೆಯ ಬೀದರ್ ಕ್ಷೇತ್ರದ ಘೋಷಿತ ಅಭ್ಯರ್ಥಿ ರಮೇಶ ಪಾಟೀಲ ಸೋಲಪುರ, ಮುಖಂಡರಾದ ಒಬೆದುಲ್ಲಾ, ಸುರೇಶ ಮಹಾಗಾಂವ್, ಅಶೋಕಕುಮಾರ ಕರಂಜಿ, ದೇವೇಂದ್ರ ಸೋನಿ, ಬಸವರಾಜ ಪಾಟೀಲ ಹಾರೂರಗೇರಿ, ಐಲಿ???ಜಾನ್ ಮಠಪತಿ, ಮಾರುತಿ ಬೌದ್ಧೆ, ರಾಜು ಕಡ್ಯಾಳ್, ಸಜ್ಜದ್ ಸಾಹೇಬ, ಸೋಮನಾಥ, ಅಸದೊದ್ದಿನ್, ಶಿವರಾಜ ಹುಲಿ ಇದ್ದರು.