ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆ ಹಬ್ಬಕ್ಕೆ ಎಲ್ಲರು ಬಂದು ನಿರ್ಭಯದಿಂದ ಮಾತ ಹಾಕಿ : ಜಿಲ್ಲಾಧಿಕಾರಿ ಸ್ನೇಹಲ್ ಆರ್

ಗುರುಮಠಕಲ್:ಮೇ.1: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಗೆ ನ್ಯಾಯ ಸಮ್ಮತವಾದ ಮತದಾನ ಮಾಡಲು ಎಲ್ಲಾ ಅರ್ಹ ಮತದಾರರು ಯಾವುದೇ ಹೆದರಿಕೆ.ಅಂಜಿಕೆ. ನಿರ್ಭಯ ನಿರ್ಭೀತಿಯಿಂದ ಆಶೆ ಆಮಿಷಗಳಿಗೆ ಒಳಗಾಗದೆ ತಮ್ಮ ಹೆಸರು ನೋಂದಾವಣೆ ಯಾಗಿರುವ ಹತ್ತಿರದ ಮತದಾನದ ಘಟ್ಟಗೆ ಹೋಗಿ ಮತದಾನ ಹಾಕಬೇಕು. ಐದು ವರ್ಷಗಳಿಗೊಮ್ಮೆ ಬರುವ ಪ್ರಜಾಪ್ರಭುತ್ವದ ಹಬ್ಬವನ್ನು ಮತಹಾಕುವ ಅರ್ಹತಾ ಹೊಂದಿರುವ ತಮ್ಮ ತಮ್ಮ ಕುಟುಂಬಗಳಲ್ಲಿ ದೂರದ ಪಟ್ಟಣಗಳಿಗೆ ಗುಳೆ ಹೋಗಿರುವ ತಮ್ಮ ತಮ್ಮ ಸಹೋದರ ಸಹೋದರಿಯರನ್ನು ಈ ಮಹಾ ಮತದಾನದ ಹಬ್ಬಕ್ಕೆ ಎಲ್ಲಾರನ್ನು ತಾವು ಕರೆಯಿಸಿಕೊಳ್ಳುವ ಮುಖಾಂತರ ಗುರುಮಠಕಲ್ ಮತಕ್ಷೇತ್ರದ ಮತ ಸಂಖ್ಯೆ ಹೆಚ್ಚು ಮಾಡುವ ಮೂಲಕ ಪಕ್ಷದ ಅಭ್ಯರ್ಥಿಗಳು ಯಾರೆ ಇರಲಿ ತಾವು ಮತವನ್ನು ಯಾರಿಗಾದರೂ ಹಾಕಿ ಯೋಚನೆ ಮಾಡಿ ತಮ್ಮ ಅಮೂಲ್ಯ ವಾದ ಮತವನ್ನು ತಪ್ಪದೆ ಹಾಕಬೇಕೆಂದು ಜಿಲ್ಲಾಧಿಕಾರಿ ಶ್ರೀ ಮತಿ ಸ್ನೇಹಲ್ ಆರ್ ಹೇಳಿದರು. ತಾಲೂಕಿನ ಕಂದಕೂರ ಮತ್ತು ಕೊಂಕಲ್ ಗ್ರಾಮದಲ್ಲಿ ಜಿಲ್ಲಾ ಆಡಳಿತ. ಜಿಲ್ಲಾ ಸ್ವೀಪ್ ಸಮಿತಿ ಮತ್ತು ಗ್ರಾಮ ಪಂಚಾಯಿತಿ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮತದಾನ ನಮ್ಮ ಪವಿತ್ರ ಹಕ್ಕು ಇದನ್ನು ನಾವು ಮಾರಾಟ ಮಾಡಿಕೊಳ್ಳದೆ ಯಾವುದೇ ಆಶೆ ಆಮಿಷಗಳಿಗೆ ಒಳಗಾಗದೆ ಉತ್ತಮ ಸರ್ಕಾರ ರಚನೆಗೆ ಮತ ಹಾಕಿ ಚುನಾವಣೆ ಹಿನ್ನಲೆಯಲ್ಲಿ ಆಕ್ರಮ ಕಂಡುಬಂದಲ್ಲಿ ಸಿ ವಿಜಿಲ್ ಯಾಪ್ ನ ಮೂಲಕ ಅಥವಾ 1950 ಗೆ ಕಾಲ್ ಮಾಡುವ ಮೂಲಕ ಕರೆ ನೀಡಬಹುದು ಎಂದು ಅವರು ಹೇಳಿದರು. ಇದೇ ವೇಳೆ ಎಸ್ ಪಿ ವೇದಮೂರ್ತಿ ಅವರು ನೆರೆದಿರುವ ಸಾರ್ವಜನಿಕರಿಗು ಮತದಾನದ ಪ್ರತಿಜ್ಞಾ ವಿಧಿ ಬೋಧಿಸುವ ಮುಖಾಂತರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಶೆ ಆಮಿಷಗಳಿಗೆ ಒಳಗಾಗದೆ ಮತವನ್ನು ತಪ್ಪದೆ ಹಾಕಬೇಕೆಂದು ಹೇಳಿದರು. ಪಿ ಐ ಅಂಬರಾಯ ಕಾಮನಮನಿ. ಸಿ ಆರ್. ಎಪ್ ತಂಡದವರು. ಪೆÇೀಲಿಸ್ ಸಿಬ್ಬಂದಿಯವರು ಇದ್ದರು.