ಐದು ದಿನಗಳ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವಕ್ಕೆ ತೆರೆ

ಹನೂರು: ಜ.11:- ಕ್ಷೇತ್ರದ ಇತಿಹಾಸ ಪ್ರಸಿದ್ಧ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಜಾತ್ರೆಯ ಐದು ದಿನಗಳ ವಿಶೇಷ ಪೂಜೆ ಕೈಂಕರ್ಯಗಳು ಮುತ್ತತ್ತಿರಾಯನ ಸೇವೆಯನ್ನು ಸಲ್ಲಿಸುವ ಮೂಲಕ ಜಾತ್ರೆಗೆ ವಿದ್ಯುಕ್ತ ತೆರೆ ಬಿದ್ದಿದೆ.
ಜನವರಿ ನಾಲ್ಕರಂದು ಪ್ರಾರಂಭವಾದ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಚಂದ್ರಮಂಡಲ ಉತ್ಸವ ಕಾರ್ಯಕ್ರಮಗಳು ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಜರುಗಿತು.
ಪ್ರತಿ ವರ್ಷಕ್ಕೊಮ್ಮೆ ನಡೆಯುವ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಚಂದ್ರಮಂಡಲ ಉತ್ಸವ, ಪಂಕ್ತಿ ಸೇವೆ, ಮುಡಿ ಸೇವೆ, ಮುತ್ತತ್ತಿರಾಯನ ಸೇವೆ ಸೇರಿದಂತೆ ಹಲವು ವಿಶೇಷ ಪೂಜಾ ಸೇವ ಕಾರ್ಯಗಳು ಸಾಂಪ್ರದಾಯಕವಾಗಿ ಜರುಗಿತು.
ಪ್ರಾಣಿಬಲಿ ನಿಷೇಧ ಅಕ್ರಮ ಮಧ್ಯ ಮಾರಾಟ ನಿರ್ವಹಿಸಿದ ಅಧಿಕಾರಿಗಳು ಪೆÇೀಲಿಸ್ ಇಲಾಖೆ, ಅಬಕಾರಿ ಇಲಾಖೆ, ಕಂದಾಯ ಇಲಾಖೆ ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆ ಅಧಿಕಾರಿಗಳು ಹಳೆಮಠ ಹೊಸಮಠಗಳಲ್ಲಿ ಯಾವುದೇ ಅವಘಡ ಸಂಭವಿಸಿದಂತೆ ಸೂಕ್ತ ಎಚ್ಚರಿಕೆವಹಿಸಿ ಜಾತ್ರೆ ಯಶಸ್ವಿಗೊಳಿಸಿದ್ದಾರೆ.
ಐದು ದಿನಗಳು ನಡೆದ ಚಿಕ್ಕಲೂರು ಜಾತ್ರೆಗೆ ಸುಮಾರು 5 ಲಕ್ಷಕ್ಕೂ ಭಕ್ತ ಸಮೂಹ ಆಗಮಿಸಿ ಜಾತ್ರೆಯಲ್ಲಿ ಭಾಗವಹಿಸಿದ್ದಾರೆ. ಭಕ್ತರ ಅನುಕೂಲಕ್ಕಾಗಿ 150 ಕೆಎಸ್‍ಆರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಜರುಗಿದ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಮಂಗಳವಾರದಂದು ಮುತ್ತತ್ತಿರಾಯನ ಸೇವೆಯ ಮೂಲಕ ಜಾತ್ರೆಗೆ ತೆರೆ ಬಿದ್ದಿದ್ದು ಇಂದು ಸಹಜ ಸ್ಥಿತಿಯತ್ತ ಚಿಕ್ಕಲೂರು ಕ್ಷೇತ್ರ ಮರಳುತ್ತಿದೆ.
ಚಿಕ್ಕಲ್ಲೂರು ಜಾತ್ರೆ ಹಿನ್ನೆಲೆ ಜಲ್ಲಾಡಳಿತ ಬಿಗಿ ಪೆÇಲೀಸ್ ಬಂದೋಬಸ್ತ್ ಕಲ್ಪಿಸಿದೆ ನಾಲ್ವರು ಡಿವೈಎಸ್ಪಿ, 8 ಇನ್ಸ್ಪೆಕ್ಟರ್ಗಳು, 30 ಎಸ್‍ಐಗಳು, 40 ಎಎಸ್ಪಿ, 200 ಹೋಂ ಗಾರ್ಡ್, 368 ಹೆಡ್ ಕಾನ್ಸ್ಟೇಬಲ್ ನಿವೇದಿಸಲಾಗಿದ್ದು ಜಾತ್ರೆ ಕಾರ್ಯಕ್ರಮಗಳು ಯಾವುದೇ ಅಹಿತಕರ ಘಟನೆ ನಡೆದಂತ ನಡೆದಿದೆ ಎಂದು ಕೊಳ್ಳೇಗಾಲ ಡಿ.ವೈ.ಎಸ್.ಪಿ ಸೋಮೇಗೌಡ ಅವರು ತಿಳಿಸಿದ್ದಾರೆ.