ಐದು ದಿನಗಳ ಕಾಲ ನಡೆಯಲಿರುವ ಬಸವೇಶ್ವರ ಜಾತ್ರೆ: ಪಲ್ಲಕ್ಕಿ ಉತ್ಸವಕ್ಕೆ ಚಾಲನೆ

ಬಸವನಬಾಗೇವಾಡಿ: ಸೆ.5:ಪವಿತ್ರ ಶ್ರಾವಣ ಮಾಸದಲ್ಲಿ ನಡೆಯುವ ಪಟ್ಟಣದ ಆರಾಧ್ಯ ದೈವ ಮೂಲ ನಂದೀಶ್ವರ (ಬಸವೇಶ್ವರ) ಜಾತ್ರಾ ಮಹೋತ್ಸವದ ಪಲ್ಲಕ್ಕಿ ಉತ್ಸವಕ್ಕೆ ಸೋಮವಾರ ಸಚಿವ ಶಿವಾನಂದ ಪಾಟೀಲ ಹಾಗೂ ಮುರುಘೇಂದ್ರ ಮಹಾಸ್ವಾಮಿಜಿಗಳು ಅಪಾರ ಸಂಖ್ಯಯ ಭಕ್ತರ ಸಮ್ಮುಖದಲ್ಲಿ ಚಾಲನೆ ನೀಡಿದರು.
ದೇವಸ್ಥಾನದಲ್ಲಿ ಬೆಳ್ಳಿಗ್ಗೆ ಮಂಡಳಿಯಿಂದ ಜಾತ್ರೆಯ ಪ್ರಯುಕ್ತ ದೇವರಿಗೆ ವಿಶೇಷ ಅಭಿಷೇಕ ನೇರವೆರಿಸಿ ನಂದೀಶ್ವರನಿಗೆ ಬೆಳ್ಳಿ ಅಲಂಕಾರದ ಮೂಲಕ ಪೂಜೆ ನೇರವೆರಿಸಲಾಯಿತು, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಊರಿನ ಹಿರಿಯರು ಮುಖಂಡರು ಹಾಗೂ ಬಸವ ಭಕ್ತರು ವಿರಕ್ತಮಠಕ್ಕೆ ತೆರಳಿ ಮುರುಘೇಂದ್ರ ಮಹಾಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಹಾಗೂ ಶಿವಾನಂದ ಈರಕಾರ ಮುತ್ಯಾ ಅವರನ್ನು ದೇವಸ್ಥಾನಕ್ಕೆ ಬರಮಾಡಿಕೊಂಡರು.
ದೇವಸ್ಥಾನದಲ್ಲಿ ನಂದಿ ಮೂರ್ತಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿ ಶ್ರೀಗಳ ಸಮ್ಮುಖದಲ್ಲಿ ನಂದಿ ಉತ್ಸವ ಮೂರ್ತಿಯನ್ನು ಅಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು, ನಂತರ ಭಕ್ತರ ಜಯಘೋಷಣೆಯೊಂದಿಗೆ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಶಿವಪ್ಪ ಮೋದಿ ಅವರ ಮನೆಗೆ ತೆರಳಿ ಕಳಸಕ್ಕೆ ಪೂಜೆ ಸಲ್ಲಿಸಿ ನಿಡಗುಂದಿ ಮನೆತನದವರು ಕಳಸ ಹೊತ್ತುಕೊಂಡು ಅಗಸಿ, ಬಸವೇಶ್ವರ ವೃತ್ತ, ಇಂಗಳೇಶ್ವರ ರಸ್ತೆ ಮಾರ್ಗವಾಗಿ ಸಕಲ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವವು ಹೋರಿಮಟ್ಟಿ ಗುಡ್ಡಕ್ಕೆ ತೆರಳಿತು.
ಹೊರೀಮಟ್ಟಿ ಗುಡ್ಡದಲ್ಲಿ ಶಿವಾನಂದ ಈರಕಾರ ಮುತ್ಯಾ ಅವರಿಂದ ವರ್ಷದ ಮಳೆ ಬೆಳೆ ಕುರಿತಾದ ಹೇಳಿಕೆ ನುಡಿಯಲಾಯಿತು, ನಂತರ ಪಲ್ಲಕ್ಕಿಯು ಬಸವನಹಟ್ಟಿ ಬುತ್ತಿ ಬಸವಣ್ಣ ದೇವಸ್ಥಾನಕ್ಕೆ ತೆರಳಿ ಭಕ್ತರ ಪೂಜೆ ನಂತರ ಸಂಜೆ ಬಸವೇಶ್ವರ ದೇವಸ್ಥಾನ ತಲುಪಿತು. ಮೆರವಣಿಗೆಯಲ್ಲಿ ಆನೆ ಅಂಭಾರಿ, ನಂದಿ ಕೋಲು, ಜಾಂಜ್, ಡಿಜೆ ಸೌಂಡ್, ಹಾಗೂ ಗೊಂಬೆ ಕುಣಿತ ಗಮನ ಸೆಳೆಯಿತು.
ಮೆರಣಿಗೆಯಲ್ಲಿ ವಿರಕ್ತಮಠದ ಸಿದ್ದಲಿಂಗ ಸ್ವಾಮಿಜಿ, ಸಚಿವ ಶಿವಾನಂದ ಪಾಟೀಲ, ದೇವರಹಿಪ್ಪರಗಿ ಶಾಸಕ ಭೀಮನಗೌಡ(ರಾಜುಗೌಡ) ಪಾಟೀಲ, ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಎಂ,ಜೆ ಆದಿಗೊಂಡ, ಉಪಾಧ್ಯಕ್ಷರಾದ ಶ್ರೀಕಾಂತ ಕೊಟ್ರಶೆಟ್ಟಿ, ಸುಭಾಸ ಗಾಯಕವಾಡ, ಮನ್ನಾನ ಶಾಬಾದಿ, ಶ್ರೀಧರ ಕುಂಬಾರ, ಕಾರ್ಯದರ್ಶಿ ವಿಶ್ವನಾಥ ಹಿರೇಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಎಪಿಎಂಸಿ ನಿರ್ದೇಶಕ ಶೇಖರ ಗೊಳಸಂಗಿ, ಭರತ ಅಗರವಾಲ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಲೋಕನಾಥ ಅಗರವಾಲ, ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಸಂಗಯ್ಯಾ ಕಾಳಹಸ್ತೇಶಶ್ವರಮಠ, ಸುನೀಲ ಚಿಕ್ಕೊಂಡ, ರವಿ ಪಟ್ಟಣಶೆಟ್ಟಿ, ಜಗದೇವಿ ಗುಂಡಳ್ಳಿ, ಬಸವರಾಜ ಕೋಟಿ ಸುರೇಶಗೌಡ ಪಾಟೀಲ, ಸಂಗು ಜಾಲಗೇರಿ, ರವಿ ರಾಠೋಡ, ಅಶೋಕ ಹಾರಿವಾಳ, ಮಹಾಂತೇಶ ಹಂಜಗಿ, ಸಂಗಮೇಶ ವಾಡೇದ, ಮಲ್ಲಿಕಾರ್ಜುನ ನಾಯಕ, ವಿಶ್ವನಾಥ ನಿಡಗುಂದಿ, ಸಂಗಮೇಶ ಒಲೇಕಾರ, ಉಮೇಶ ಹಾರಿವಾಳ, ಸಂಗನಗೌಡ ಚಿಕ್ಕೊಂಡ, ದಯಾನಂದ ಜಾಲಗೇರಿ, ಜಟ್ಟಿಂಗರಾಯ ಮಾಲಗಾರ, ಸಂಜು ಬಿರಾದಾರ, ಸಂದೀಪ ಕೋಟ್ಯಾಳ, ಸಂತೋಷ ನಾಯ್ಕೊಡಿ, ಬಸವರಾಜ ಅಳ್ಳಗಿ, ಬಸವರಾಜ ಮುಂಜಾನೆ, ಸೇರಿದಂತೆ ಮುಂತಾದವರು ಇದ್ದರು.