ಐದು ಜನ ಅಭ್ಯರ್ಥಿಗಳ ಗೆಲುವಿಗೆ ಮೋದಿ ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಜಿಲ್ಲೆಯ ಐದು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದರು.
ಅವರು ಇಂದು ಮಧ್ಯಾಹ್ನ ನಗರದ ಕಪ್ಪಗಲ್ಲು ರಸ್ತೆಯ ಜಮೀನೊಂದರಲ್ಲಿ ಹಮ್ಮಿಕೊಂಡಿದ್ದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿ ಮಾತನಾಡಿದರು.
ಬಳ್ಳಾರಿಯ ನನ್ನ ಸಹೋದರ, ಸಹೋದರಿಯರೇ ಎಂದು ಭಾಷಣ ಆರಂಭಿಸಿ, ಸಂಡೂರಿನ ಕುಮಾರಸ್ವಾಮಿ, ದುರ್ಗಮ್ಮ, ಚೇಳ್ಳಗುರ್ಕಿ ಎರ್ರಿತಾತ ಬೊಮ್ಮಗಟ್ಟದ  ಹುಲಿಕುಂಟರಾಯನ ನ್ನು ನೆನೆದರು.
ದೇಶದ ರಾಜಕೀಯದಲ್ಲಿ  ಕಾಂಗ್ರೆಸ್ ಬರೀ ಸುಳ್ಳನ್ನೇ ಹುಟ್ಟು ಹಾಕುತ್ತ ಬಂದಿದೆ.  ರಾಜ್ಯದಲ್ಲೂ ಕಾಂಗ್ರೆಸ್  ಗ್ಯಾರೆಂಟಿಗಳ‌ ಮೂಲಕ ಹೊಸ ಸುಳ್ಳನ್ನು ಹೇಳುತ್ತಾ ಹೊರಟಿದೆಂದರು.
ಬಿಜೆಪಿಯ ಪ್ರಣಾಳಿಕೆ ಸಂಕಲ್ಪ ಪತ್ರ ಆಗಿದೆ. ಅದು ದೇಶದ ನಂಬರ್ ಒನ್ ರಾಜ್ಯ ಮಾಡುವುದಾಗಿದೆ. ಅದಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬರೀ ಅದನ್ನು ತಡೆಯುತ್ತೇವೆ. ಇದನ್ನು ಹಿಂದಕ್ಕೆ ಪಡೆಯುತ್ತೇವೆ ಎಂಬ ಘೋಷಣೆ ಇವೆ. ಅಷ್ಟೇ ಅಲ್ಲ ಬಜರಂಗ ದಳವನ್ನು ನಿಷೇಧದ ಬಗ್ಗೆ ಹೇಳಿದ್ದಾರೆ  ಅದಕ್ಕಾಗಿ ಆ ಪಕ್ಷಕ್ಕೆ ಬುದ್ದಿಯನ್ನು ಕರ್ನಾಟಕದ ಜನತೆ ಚುನಾವಣೆಯಲ್ಲಿ ಕಲಿಸಬೇಕು ಎಂದರು.

ಭಯೋತ್ಪಾದನೆ ವಿರುದ್ಧ ಬಿಜೆಪಿ  ಕಠಿಣ ನಿರ್ಧಾರ ತೆಗಡದುಕೊಂಡಾಗಲೆಲ್ಲ  ಕಾಂಗ್ರೆಸ್ ಗೆ ತಳಮಳಗೊಳ್ಳುತ್ತದೆ ಯಾಕೆ ಎಂದು ಪ್ರಶ್ನಿಸಿ. ಜೀವನ, ವಿಕಾಸ, ವಿರೋಧಿಯಾದ ಭಯೋತ್ಪಾದನೆಯನ್ನು ಮಟ್ಟಹಾಕಲು ಮತ ಮುದ್ರೆ ಒತ್ತಬೇಕು ಎಂದರು.
ಭಯತ್ಪಾದನೆ ಬೆಳೆದರೆ ಇಲ್ಲಿನ ಐಟಿ, ಕೃಷಿ, ಗೌರವ ಸಂಸ್ಕೃತಿ ಎಲ್ಲಾ ಹಾಳಾಗುತ್ತದೆ. ಆದರೆ ಈಬಗ್ಗೆ ಒಂದೇ ಒಂದು ಮಾತನಾಡುತ್ತಿಲ್ಲ ಕಾಂಗ್ರೆಸ್ ಎಂದರು.
ಸ್ಮಗಲಿಂಗ್ ಡ್ರಗ್ಸ್ ಮಾರಾಟದ ದಂಧೆಯಿಂದ ಭಯೋತ್ಪಾನೆ ಬೆಳೆಯುತ್ತಿದೆ. ಪಿಸ್ತೂಲಿನಿಂದ  ಆಡಳಿತ ನಡೆಸುವ ಕಾಲ ಬರಲಿದೆ. ಅದಕ್ಕಾಗಿ ಎಲ್ಲರೂ ಎಚ್ಚರದಿಂದ ಇರಬೇಕು.
ಭಯೋತ್ಪಾದನೆ ವಿರುದ್ದ ಧ್ವನಿ ಎತ್ತಬೇಕು ಎಂದರು.

ಕೇರಳ ಸ್ಟೋರಿ ಬಗ್ಗೆ ಚರ್ಚೆಯಾಗ್ತಿದೆ
ಕೇರಳ ಸ್ಟೋರಿ ಕೇವಲ ಒಂದು ರಾಜ್ಯದಲ್ಲಿ ನಡೆದಿದೆ ಎನ್ನುತ್ತಾರೆ.. ಆದ್ರೇ ಇಷ್ಟೊಂದು ಸುಂದರ ರಾಜ್ಯದಲ್ಲಿ ಹೀಗೆ ನಡೆಯುತ್ತದೆ ಆಂದ್ರೇ ಹೇಗೆ.
ಆದ್ರೇ ಕಾಂಗ್ರೆಸ್ ಇದರ ಬಗ್ಗೆ ಮಾತನಾಡದೇ ಭಯೋತ್ಪಾದಕರ ಪರ ಮಾತನಾಡ್ತಾರೆ.
ಹಿಂಭಾಗಿಲ ಮೂಲಕ ಭಯೋತ್ಪಾದಕರ ಬೆಂಬಲ ನೀಡ್ತಿದ್ದಾರೆ. ಈ‌ ಬಗ್ಗೆ ಜನರು ಎಚ್ಚರದಿಂದ ‌ಇರಬೇಕು

ಈ ಮೂದಲು ಬಳ್ಳಾರಿ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. ಅದಕ್ಕಾಗಿ ಆ ಪಕ್ಷದ ಅಧ್ಯಕ್ಷರು ಇಲ್ಲಿಗೆ ಬಂದು ಗೆದ್ದು ನಿಮಗೆ ಕೊಟ್ಟ ಮಾತು ನಡೆಸಿಕೊಡದೆ, ಕನಿಷ್ಟ ಕೃತಜ್ಞತೆ ಹೇಳದೆ ರಾಜೀನಾಮೆ ನೀಡಿ ಹೋದರು.
ಅದಕ್ಕಾಗಿ ನೀವು ಅವರಪ್ರಕಾರ ಗೆ ಸರಿಯಾದ ಪಾಠ ಕಲಿಸಲು ನಂತರದ ಚುನಾವಣೆಗಳಲ್ಲಿ ಬಳ್ಳಾರಿಯನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿದ್ದನ್ನು ಸ್ಮರಿಸಿ ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ನಗರ ಕ್ಷೇತ್ರದ ಅಭ್ಯರ್ಥಿ ಗಾಲಿ ಸೋಮಶೇಖರ ರೆಡ್ಡಿ ಸೇರಿದಂತೆ ಐದು ಜನ ಅಭ್ಯರ್ಥಿಗಳನ್ನು ಗೆಲ್ಲಿಸಿ ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದ ಅಭಿವೃದ್ಧಿಗೆ ಕಾರಣರಾಗಿ ಎಂದರು.

ಸಚಿವ ಶ್ರೀರಾಮುಲು ಮಾತನಾಡಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ನನ್ನ ಗೆಲ್ಲಿಸಿ. ಅದೇ ರೀತಿ ಇನ್ನಿತರ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದರು.
ಅಭಿವೃದ್ಧಿ ಶಕ್ತಿ, ಪ್ರಗತಿ ಶಕ್ತಿ, ಬದಲಾವಣೆಯ ಶಕ್ತಿ ಮೋದಿಯವರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಲೆ ಬೀಸುತ್ತಿದೆ. ರಾಜ್ಯದಲ್ಲಿ 135 ಸ್ಥಾನ ಗೆದ್ದು ಡಬಲ್ ಇಂಜಿನ್ ಸರ್ಕಾರ ಆಗಬೇಕು ಎಂದರು.
ಕಾಂಗ್ರೆಸ್ ಬಗ್ಗೆ ಟೀಕೆ ಮಾಡುತ್ತ ಅವರ ಹಸ್ತದ ಗುರ್ತಿನಲ್ಲಿನ ರೇಖೆ ಬದಲು ಮಾಡಿಕೊಂಡಿದ್ದಾರೆ. ಅದರಿಂದ ದೇಶ ಬದಲು ಮಾಡುತ್ತೇವೆ ಎಂದು ಅದು ಸಾಧ್ಯವಿಲ್ಲ ಎಂದರು. ಅವರ ಆಡಳಿತದಲ್ಲಿ ಶೇ 90 ರಷ್ಟು ಅನುದಾನ ಸೋರಿಕೆಯಾಗುತ್ತಿತ್ತು. ಆದರೆ ಮೋದಿ ಅವರಿಂದಾಗಿ ರಾಜ್ಯದಲ್ಲಿ ವಿಜಯನಗರದ ಸುವರ್ಣ ಯುವ ಮರಳಲಿದೆಂದೆ ಶೇ 100 ರಷ್ಟು ಅನುದಾನ ಬಳಕೆಯಾಗುತ್ತಿದೆಂದರು.

ನಗರ ಶಾಸಕ‌ ಗಾಲಿ ಸೋಮಶೇಖರ ರೆಡ್ಡಿ ಸ್ವಾಗತಿಸಿದರು.

ವೇದಿಕೆಯಲ್ಲಿ ಕೇಂದ್ರ ಸಚಿವ ಭಗವಂತ್ ಖೂಬ,
ಅಭ್ಯರ್ಥಿಗಳಾದ ಸೋಮಶೇಖರ, ಸಚ್ಚಿದಾನಂದ ಮೂರ್ತಿ, ಸಿದ್ದೇಶ್ ಯಾದವ್, ಪೂಜಪ್ಪ, ಶಿವಶಂಕರ ರೆಡ್ಡಿ, ಕೆ.ಎಸ್.ಅಶೋಕ್, ಮುರಹರಗೌಡ ಮೊದಲಾದವರು ಇದ್ದರು.


:ಜನರ ಕೊರತೆ:
ಮೋದಿ ಅವರು ಹೋದಡೆಯಲ್ಲೆಲ್ಲ ಅವರನ್ನು ನೋಡಲು, ಭಾಷಣ ಕೇಳಲು ಜನ ಮುಗಿ ಬೀಳುತ್ತಿದ್ದರೆ.
ಬಳ್ಳಾರಿಯಲ್ಲಿ ಮಾತ್ರ
ನಿರೀಕ್ಷೆಯಷ್ಟು ಜನ ಬಂದಿರಲಿಲ್ಲ. ಇದು ಚುನಾವಣೆಯ ಫಲಿತಾಂಶದ ದಿಕ್ಸೂಚಿಯಾಗಬಹುದು. ಎನ್ನುವಂತಿತ್ತು.
ವೇದಿಕೆಯ ಮೇಲಿನ ಮೋದಿ ಭಕ್ತರು ವೇದಿಕೆ ಮುಂಭಾಗ ಜನ ಇಲ್ಲದದನ್ನು ಕಂಡು ಪೊಲೀಸರಿಗೆ ಯಾರನ್ನು ತಡೆಯದೆ ಬಂದಿರುವ ಎಲ್ಲರಿಗೂ ಪಾಸ್ ಕೇಳದೆ ಬಿಡಿ ಎಂದು ಭದ್ರತಾ ಸಿಬ್ಬಮನದಿಯನ್ನು ಕೋರಿದ ಮೇಲೆ ಒಂದಿಷ್ಟು ಜನ ಸೇರಿತು.
ಹಲವು ಅಡೆತಡೆಗಲಳು, ನಿನ್ನೆ ರಾತ್ರಿ ಸುರಿದ ಮಳೆ,  ಪೊಲೀಸ್ ಸಿಬ್ಬಂದ್ದಿಯ ಕಟ್ಟಳೆಗಳಿಗೆ ಬೇಸತ್ತು ಸಹ ಜನ ಬರದೇ ಇರಬಹುದು.