ಐದು ಕಥೆಗಳ ಪೆಂಟಗಾನ್

ಐದು ವಿಭಿನ್ನ ಕಥೆಗಳನ್ನು ಮುಂದಿಟ್ಟುಕೊಂಡು ನಿರ್ಮಾಪಕ, ನಿರ್ದೇಶಕ ಗುರು ದೇಶಪಾಂಡೆ ಹೊಸ ಸಾಹಸ ಮಾಡಿದ್ದಾರೆ. ಅದುವೇ ಪೆಂಟಗಾನ್.

ಚಿತ್ರದಲ್ಲಿ ಬರುವ ಐದೂ ಕಥೆಗಳನ್ನು ಐವರು ನಿರ್ದೇಶಕರು ಅಕ್ಷನ್ ಕಟ್ ಹೇಳಿದ್ದಾರೆ. ಗುರುದೇಶ್‌ಪಾಂಡೆ, ರಾಘು ಶಿವಮೊಗ್ಗ, ಚಂದ್ರಮೋಹನ್ ,ಆಕಾಶ್ ಶ್ರೀವತ್ಸ ಮತ್ತು ಕಿರಣ್ ಕಿಮಾರ್ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದಲ್ಲಿ ರವಿಶಂಕರ್, ಕಿಶೋರ್, ಪ್ರೀತಿಕಾ ದೇಶಪಾಂಡೆ, ತನಿಶಾ ಕುಪ್ಪಂಡ, ಅನುಷಾ ರೈ, ಪೃಥ್ವಿ ಅಂಬರ್  ಸೇರಿದಂತೆ ಹಿರಿ ಹಿರಿಯ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿದೆ.

ಇದೇ ಶುಕ್ರವಾರ ಚಿತ್ರ ತೆರೆಗೆ ಬರಲಿದೆ.‌ಈ ಹಿನ್ನೆಲೆಯಲ್ಲಿ ತಂಡ ಮಾಹಿತಿ ಹಂಚಿಕೊಂಡಿತು. ಚಿತ್ರದಲ್ಲಿ ಬರುವ ಒಂದು ಕಥೆ ನಿರ್ದೇಶನ ಮಾಡುವ ಜೊತೆಗೆ ಚಿತ್ರಕ್ಕೆ ಬಂಡವಾಳ ಹಾಕಿರುವ ಗುರು ದೇಶಪಾಂಡೆ, ಐದು ಕಥೆಗಳನ್ನು ಸಾವಿನ ರೂಪಕವನ್ನು ಮುಂದಿಟ್ಟಿಕೊಂಡು ಕಟ್ಟಿಕೊಡುವ ಕೆಲಸ ಮಾಡಿದ್ದೇವೆ. ಒಂದೊಂದು ಕಥೆಗೆ ಸಂಪರ್ಕವಿದೆ. ಸಮಾಜದಲ್ಲಿ ನಡೆದ, ನೋಡಿದ ಕೆಲವು ಘಟನೆಗಳನ್ನು ಚಿತ್ರರೂಪದಲ್ಲಿ ತರುವ ಪ್ರಯತ್ನ ಮಾಡಲಾಗಿದೆ.ಇದೇ ವಾರ ಬಿಡುಗಡೆಯಾಗುತ್ತಿದೆ. ವಿತರಕ ವೆಂಕಟ್ ಗೌಡ ವಿತರಣೆ ಜವಾಬ್ದಾರಿ ಹೊತ್ತಿದ್ದು ಹೆಚ್ಚಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು.

ನಟಿ‌ ತನಿಶಾ ಕುಪ್ಪಂಡ, ಚಿತ್ರದಲ್ಲಿ ಬರುವ ಐದು ಕಥೆಗಳ ಪೈಕಿ ಒಂದು ಕಥೆಯಲ್ಲಿ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.ಕಥೆಗೆ ಪೂರಕ ಇತ್ತು ಕೂಡ ಎಂದು ಅವರು ಮಾಹಿತಿ‌ ನೀಡಿದರು. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಗಾಯಕರಾದ ಸಂಗೀತ ಕಟ್ಟಿ, ,ಸಂತೋಷ್ ವೆಂಕಿ,‌ಮಾಹಿತಿ ಹಂಚಿಕೊಂಡರು.