ಐದನೆಯ ದಿನಕ್ಕೆ ಕಾಲಿಟ್ಟ ಧರಣಿ ಸಮಸ್ಯೆಗಳ ಈಡೇರಿಕೆಗೆ ಶ್ರೀರಾಮ ಸೇನೆಯಿಂದ ಅನಿರ್ಧಿಷ್ಟ ಧರಣಿ

ಜೇವರ್ಗಿ: ನ.12:ಮರಳು ಸೇರಿದಂತೆ ಅನೇಕ ಪ್ರಮುಖ ಬೇಡಿಕೆಗಳ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಶ್ರೀ ರಾಮ ಸೇನಾ ತಾಲ್ಲೂಕು ಘಟಕ ಹಮ್ಮಿಕೊಂಡ ಅನಿರ್ದಿಷ್ಟ ಧರಣಿ ಇಂದಿಗೆ ಐದನೆಯ ದಿನಕ್ಕೆ ಕಾಲಿಟ್ಟಿದೆ.

ಪಟ್ಟಣದ ಮಿನಿ ವಿಧಾನಸೌದದ ಮುಂಭಾಗ ಶ್ರೀ ರಾಮ ಸೇನಾ ಸಂಘಟನೆಯ ಕಾರ್ಯಕರ್ತರು ಸೋಮವಾರ ಅನಿರ್ದಿಷ್ಟ ಧರಣಿ ಹಮ್ಮಿಕೊಂಡಿದೆ. ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಪ್ರತಿಭಟನಾ ಕಾರ್ಯಕರ್ತರು , ಈ ಕೂಡಲೇ ಹುಲ್ಲುರ, ಮದರಿ, ಯನಗುಂಟಿ, ನರಿಬೋಳ, ಇಟಗಾ,ನೆಲೋಗಿ, ಬೊಸಗಾ ಸೇರಿದಂತೆ ಇನ್ನೂ ಅನೇಕ ಭೀಮಾ ನದಿಯ ದಡದಲ್ಲಿರುವ ಗ್ರಾಮಗಳಲ್ಲಿ ಮರಳು ಮಾಫಿಯಾ ತಾಂಡವ ವಾಡುತ್ತಿದೆ.ಇದಕ್ಕೆ ತಡೆಯಾಗಬೇಕು.ಹುಲ್ಲುರ ಗ್ರಾಮದಲ್ಲಿ ಅನಧಿಕೃತವಾಗಿ ಮರಳು ಸಂಗ್ರಹಿಸಿರುವವರ ಮೇಲೆ ಸಹಾಯಕ ಆಯುಕ್ತರ ಆದೇಶದಂತೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಜೇವರ್ಗಿ ಪಟ್ಟಣದ ಸಜ್ಜನ ಕಲ್ಯಾಣ ಮಂಟಪದ ರಸ್ತೆಯಲ್ಲಿ ಇರುವ ಅನಧಿಕೃತ ಮಾಂಸ ಮಾರಾಟ ಮಳಿಗೆಗಳು ತೆರವು, ಅಂದೋಲಾ,ಕೆಲ್ಲೂರ ರಸ್ತೆ ಮಾಡಿದ ಎರಡೆ ತಿಂಗಳಲ್ಲಿ ಸಂಪೂರ್ಣ ಹದಗೆಟ್ಟಿದ್ದು,ಸಂಬಂಧಿಸಿದ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಬೇಕು.ದೇವದುರ್ಗದಿಂದ ಓವರ ಲೊಡ ಮರಳು ಸಾಗಿಸುವ ವಾಹನಗಳ ವಿರುಧ್ದ ಕ್ರಮಕ್ಕಾಗಿ ಸೇರಿದಂತೆ ಇನ್ನೂ ಅನೇಕ ಬೇಡಿಕೆಗಳನ್ನು ಈ ಕೂಡಲೇ ಈಡೆರಿಸಬೇಕು ಎಂದು ಜೇವರ್ಗಿ ತಾಲ್ಲೂಕು ಶ್ರೀ ರಾಮ ಸೇನಾದ ಕಾರ್ಯಕರ್ತರು ಅನಿರ್ದಿಷ್ಟ ಧರಣಿ ಹಮ್ಮಿಕೊಂಡಿದೆ.

ಅನಿರ್ದಿಷ್ಟ ಧರಣಿಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮುರಳಿದರ ಧರಣಿ ಸ್ಥಳಕ್ಕೆ ಆಗಮಿಸಿ, ನಮ್ಮ ಇಲಾಖೆಗೆ ಸಂಬಂಧಿಸಿದ ಕಾರ್ಯವನ್ನು ಈ ಕೂಇ ಕೈಗೊಳ್ಳುವೆ ಎಂದು ಹೇಳಿ, ಆ ಕ್ಷಣದಿಂದಲೆ ಅಂದೋಲಾ ಕೆಲ್ಲೂರ ರಸ್ತೆ ಕಾಮಗಾರಿ ಕೈಗೆತ್ತಿಕೊಂಡರು.

ತಹಸೀಲ್ದಾರ ವಿನಯ ಕುಮಾರ ಪಾಟೀಲ್ ಭೇಟಿ ನೀಡಿ, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುವೇ ಧರಣಿ ಹಿಂದಕ್ಕೆ ಪಡೆದುಕೊಳ್ಳಿ ಎಂದು ಮನವಿ ಮಾಡಿದರು. ಆದರೆ, ಧರಣಿ ನಿರತ ಕಾರ್ಯಕರ್ತರು ಸ್ಥಳಕ್ಕೆ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಧರಣಿ ವಾಪಸ್ ಪಡೆಯುವುದಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದರು.

ಈ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ನಿಂಗಣ್ಣಗೌಡ ಮಾಲಿ ಪಾಟೀಲ್ ರಾಸಣಗಿ, ಜಿಲ್ಲಾ ಕಾರ್ಯಾಧ್ಯಕ್ಷರಾದ ಈಶ್ವರ ಹಿಪ್ಪರಗಿ, ಮಲ್ಲಣ್ಣಗೌಡ ಮಾಲಿ ಪಾಟೀಲ್, ಸುನಿಲ್ ಗುತ್ತೆದಾರ, ಸಿದ್ದು ಪಾಟೀಲ್ ಮಾವನೂರ, ನಾಗರಾಜ ಮಾಲಿಪಾಟೀಲ್ ರಾಸ ಣಗಿ, ರಾಜಶೇಖರ ಗುಡೂರ, ವಿಶ್ವನಾಥ ಪಾಟೀಲ್ ಸುರೇಶ್ ರಾಂಪೂರ ಸೇರಿದಂತೆ ಅನೇಕರು ಇದ್ದರು.