
ಅರಕೇರಾ,ಜ.೦೩- ಕಾಂಗ್ರೆಸ್ ಸಾಧನೆಗಳು ಐತಿಹಾಸಿಕ ಹಿನ್ನಲೆ ಹೊಂದಿದ್ದು, ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಶ್ರೀದೇವಿ ರಾಜಶೇಖರ ನಾಯಕ ಹೇಳಿದರು.
ಪಟ್ಟಣದ ಅವರ ನಿವಾಸದಲ್ಲಿ ಸಮೀಪದ ಕ್ಯಾದಿಗ್ಗೇರಾ ಗ್ರಾಮದ ಯುವ ಕಾರ್ಯಕರ್ತರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನವಿರೋಧಿ ಆಡಳಿತ ನಡೆಸುತ್ತಿದೆ. ನಿರಂತರ ಬೆಲೆ ಏರಿಕೆ, ಭ್ರಷ್ಟಾಚಾರ ಜನಸಾಮಾನ್ಯರ ಜೀವ ಹಿಂಡುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ ಮಾಡಿರುವ ಯೋಜನೆಗಳು ಜನಮಾನಸದಲ್ಲಿ ಹಸಿರಾಗಿ ಉಳಿದಿವೆ.
ಕಾಂಗ್ರೆಸ್ ಪಕ್ಷ ಬಡವರ ಪಕ್ಷವಾಗಿದ್ದು ಅಭಿವೃದ್ಧಿಗಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು ಎಂದರು. ಈ ವೇಳೆ ರಂಗನಾಥ ದೊರೆ, ಮಂಜುನಾಥ ದೊರೆ, ರಂಗನಾಥ, ನಿಂಗಪ್ಪ, ಯಮುನಾ ಎ, ಶಿವರಾಜ, ರಾಚಪ್ಪ, ಉಮರ್, ಯಲ್ಲಪ್ಪ, ಸಂದೀಪ, ಭೀಮೇಶ, ರಂಗನಾಥ, ಯಲ್ಲಣ್ಣ, ಸೋಮಶೇಖರ, ಮೌನೇಶ, ಹೈಮದ್ ಷಾ, ದೇವರಾಜ, ಮೌನೇಶ, ಅಂಬ್ರೇಶ, ಮಂಜುನಾಥ, ಶರಣಬಸವ, ವೆಂಕಟೇಶ, ಇಸ್ಮಾಯಿಲ್ ಸೇರಿದಂತೆ ಇತರರು ಇದ್ದರು.