ಐತಿಹಾಸಿಕ ಹಂಪಿಯಲ್ಲಿ ತಾತ್ಕಲಿಕ ಟಕೆಟ್ ಕೌಂಟರ್


ಸಂಜೆವಾಣಿ ವಾರ್ತೆ
ಹೊಸಪೇಟೆ ಜ02 : ಐತಿಹಾಸಿಕ ಹಂಪಿಯ ವಿಜಯವಿಠಲ ದೇವಾಲಯದ ಪೂರ್ವ ಪ್ರವೇಶದ್ವಾರದ ಬಳಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ತಾತ್ಕಲಿಕ ಟಿಕೆಟ್ ಕೌಂಟರ್‍ನ್ನು  ತೆರೆಯಲಾಯಿತು.
ನೂತನ ವರ್ಷದ ಪ್ರಾರಂಭದ ದಿನವಾದ ಸೋಮವಾರ ಭಾರತೀಯ ಪುರಾತತ್ವ ಇಲಾಖೆಯ ಹಂಪಿ ಸರ್ಕಲ್‍ನ ಅಧಿಕಾರಿಗಳು ನೂತನ ಟಿಕೇಟ್ ಕೌಂಟರ್‍ನ್ನು ಉದ್ಘಾಟಿಸಿದರು. ವಿಶೇಷ ದಿನಗಳಲ್ಲಿ ತಾತ್ಕಾಲಿಕ ಕೌಂಟರ್‍ಗಳು ಕಾರ್ಯನಿರ್ವಹಿಸಲಿವೆ ಎಂದು ಮಾತನಾಡಿ ತಾಂತ್ರಿಕ ಅಧಿಕಾರಿ ರವಿಂದ್ರ ಪ್ರಸ್ತುತ ವಿಜಯ ವಿಠಲಕ್ಕೆ ಎರಡು ಟಿಕೇಟ್ ಕೌಂಟರ್ ಇದ್ದು, ಒಂದು ಗೆಜ್ಜಲ ಮಂಟಪದ ಹತ್ತಿರದ ಬ್ಯಾಟರಿ ವಾಹನ ಪಾರ್ಕಿಂಗ್ ಬಳಿ ಮತ್ತೊಂದು ವಿಜಯವಿಠಲ ದೇವಾಲಯದ ಪೂರ್ವದಿಕ್ಕಿನ ಪ್ರವೇಶದ ಬಳಿ ಇದೆ ಎಂದರು. ದಕ್ಷಿಣ ಪ್ರವೇಶದ್ವಾರದಲ್ಲಿದ್ದ ಟಿಕೇಟ್ ಕೌಂಟರ್ ಪ್ರವಾಸಿಗರಿಗೆ ದೂರವಾಗುತ್ತಿದ್ದನ್ನು ಕಂಡುಬಂದಿದ್ದು, ಹಿರಿಯ ಅಧಿಕಾರಗಳ ಮೌಕಿಕ ಆದೇಶದ ಮೇರೆಗೆ ನೂತನ ಕೌಂಟರ್‍ನ್ನು ತೆರೆಯಲಾಗಿದೆ ಎಂದರು. ಸಹಾಯಕ ಅಧಿಕಾರಿ ವಿನೋಜ್‍ಕುಮಾರ್ ಸೇರಿದಂತೆ ಸಿಬ್ಬಂದಿ ಕುಮಾರ್, ರಮೇಶ್, ಅನಿಲ್, ಅಂಬುಜ್, ಸೇರಿದಂತೆ ಇತರರು ಇದ್ದರು.