ಐತಿಹಾಸಿಕ ಸ್ಮಾರಕಗಳು ಮನುಕುಲದ ಆಸ್ತಿ

ವಿಜಯಪುರ:ನ.24: ಜಗತ್ತಿನಲ್ಲಿ ವಿಶ್ವ ಪರಂಪರೆಗೆ ಸೇರಿದ ಹಲವು ಸ್ಮಾರಕಗಳಿವೆ. ಇವುಗಳನ್ನು ಸರಂಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಇವೆಲ್ಲವು ಅವುಗಳದೇ ಆದ ಐತಿಹಾಸಿಕತೆ ಹೊಂದಿದ್ದು, ಪರಂಪರೆಯ ವರ್ಗಾವಣೆ ಮಾಡುತ್ತದೆ
. ಈ ಕಾರಣ ಸ್ಮಾರಕಗಳು ಮನುಕುಲದ ಆಸ್ತಿಯಾಗಿವೆ ಎಂದು ಸಿಕ್ಯಾಬ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಸಲಾವುದ್ದೀನ ಅಯೂಬಿ ತಿಳಿಸಿದರು.
ಅವರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಧಾರವಾಡ ಹಾಗೂ ಇತಿಹಾಸ ವಿಭಾಗ ಸಿಕ್ಯಾಬ ಎ. ಆರ್. ಎಸ್, ಇನಾಮದಾರ ಮಹಿಳಾ ಮಹಾವಿದ್ಯಾಲಯ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಪಾಲ್ಗೊಂಡು ಮಾತನಾಡಿದರು.
ವಿಜಯಪುರವು ಐತಿಹಾಸಿಕ ಕೇಂದ್ರವಾಗಿದ್ದು ಇಲ್ಲಿರುವ ಸ್ಮಾರಕಗಳು ಈ ನಾಡಿನ ಸಂಪತ್ತಾಗಿವೆ. ಇವುಗಳ ಸಂರಕ್ಷಣೆಗೆ ನಾವೆಲ್ಲ ಜಾಗೃತಿ ಮೂಡಿಸಬೇಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮತ್ತು ಸಂಪಲ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಇತಿಹಾಸ ತಜ್ಞ ಹಾಗೂ ವಿಶ್ರಾಂತ ಉಪನ್ಯಾಸಕರಾದ ಡಾ. ವಿ. ಎಂ. ಬಾಗಾಯತ ಅವರು ಮಾತನಾಡಿ ಪರಂರಪರೆ ಎನ್ನುವುದು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಾಗುವ ಕ್ರಿಯೆಯಾಗಿದೆ. ಇದರ ಭಾಗವಾಗಿ ನಮ್ಮಲ್ಲಿ ಸ್ಮಾರಕಗಳಿವೆ. ಭಾರತದಲ್ಲಿ ವಿಶ್ವಪರಂಪರೆಗೆ ಸೇರಿದ 39 ಸ್ಮಾರಕಗಳಿದ್ದು, ವಿಜಯಪುರದ ಗೋಳಗುಮ್ಮಟ ಒಳಗೊಂಡ ಯಾವ ಸ್ಮಾರಕಗಳು ಸೃರ್ಪಡೆಯಾಗಿಲ್ಲ ಇದು ವಿಷಾದನೀಯ ಸಂಗತಿ ಇದರತ್ತ ಜನರು ಗಮನ ಹರಿಸಿ ವಿಜಯಪುರದ ಸ್ಮಾರಕಗಳು ವಿಶ್ವಪರಂಪರೆ ಪಟ್ಟಿಗೆ ಸೇರಲು ಹೋರಾಡವೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಾ ವಿಭಾಗದ ಮುಖ್ಯಸ್ಥರಾದ ಪ್ರೋ. ಎಚ್. ಕೆ. ಯಡಹಳ್ಳಿ ಮಾತನಾಡಿ ಭಾರತೀಯ ಸಂಸ್ಕøತಿ – ಪರಂಪರೆ ರಕ್ಷಿಸುವ ಹಾಗೂ ಯುವ ಜನಾಂಗಕ್ಕೆ ತಿಳಿಸುವ ಕಾರ್ಯ ಹೆಚ್ಚೆಚಚ್ಚು ನಡೆಯಬೇಕು ಇಂಥ ಕಾರ್ಯಕ್ರಮಗಳು ಅವರಿವನ್ನು ತುಂಬುತ್ತವೆಂದು ತಿಳಿಸಿ ಪುರಾತತ್ವ ಇಲಾಖೆಗೆ ಅಭಿನಂದನೆ ಹೇಳಿದರು.
ಪರಂಪರೆ ಸಪ್ತಾಹದ ಅಂಗವಾಗಿ ಐತಿಹಾಸಿಕ ಸ್ಮಾರಕಗಳ ಕುರಿತು ರಂಗೋಲಿ ಸ್ಪರ್ಧೆ, ಗ್ರಾಮೀಣ ಪಾರಂಪರಿಕ ಆಟಗಳ ಸ್ಪರ್ಧೆಗಳನ್ನು ಮಹಾವಿದ್ಯಾಲಯದಲ್ಲಿ ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಕು. ಸಬಿಯಾ ಮರ್ತುರ ಖುರಾನ ಪಠಿಸಿದರು, ಕು. ಸೀತಾರಾ ಪೂಜಾರಿ ಹಾಗೂ ದಾನೇಶ್ವರಿ ಭಗವದ್ಗೀತೆ ವಾಚಿಸಿದರು. ಕು. ಮಾಹೇಜಬೀನ ಹೊನ್ಯಾಳ ಪ್ರಾರ್ಥನಾ ಗೀತೆ ಹಾಡಿದರು. ಪ್ರಾಚಾರ್ಯರಾದ ಪ್ರೊ. ಎಂ. ಟಿ .ಕೋಟ್ನಿಸ್ ಸ್ವಾಗತಿಸಿದರು, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಮುಸ್ತಾಕ ಅಹ್ಮದ. ಇನಾಮದಾರ ಕಾರ್ಯಕ್ರಮದ ಸಂಯೋಜನೆ ಮಾಡಿದರು ಕು. ಐಶ್ವರ್ಯ ಪೂಜಾರ ಕು. ಪಲ್ಲವಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು, ಉಪ ಪ್ರಾಚಾರ್ಯರಾದ ಝ. ಟಿ ಖಾಜಿ ವಂದಿಸಿದರು. ಕಾಲೇಜಿನ ಎಲ್ಲ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನೀಯರು ಉಪಸ್ಥಿತರಿದ್ದರು.