ಐತಿಹಾಸಿಕ ಶ್ರೀ ಸಿದ್ದೇಶ್ವರ್ ರಥೋತ್ಸವಕ್ಕೆ ದೇಸಾಯಿ ಕಲ್ಲೂರ್ ಸರ್ವ ಸಜ್ಜು:ಲಕ್ಷದೀಪೆÇೀತ್ಸವ, ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಭಕ್ತರ ದಂಡು..!

ಅಫಜಲಪುರ :ಮಾ.5: ತಾಲ್ಲೂಕಿನ ದೇಸಾಯಿ ಕಲ್ಲೂರಿನಲ್ಲಿ ಐತಿಹಾಸಿಕ ಕಬ್ಬಿಣದ ಶ್ರೀ ಸಿದ್ಧೇಶ್ವರ್ ರಥೋತ್ಸವ ಹಾಗೂ ಲಕ್ಷ ದೀಪೆÇೀತ್ಸವ ಮತ್ತು ಅಡ್ಡಪಲ್ಲಕ್ಕಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಕಳೆದ 400 ವರ್ಷಗಳ ಹಿಂದಿನ ಸಿದ್ದೇಶ್ವರ್ ಮಹಾಸ್ವಾಮಿಗಳು ಉಜ್ಜಯಿನಿ ಪೀಠದವರಾಗಿದ್ದು, ಬೀದರನಿಂದ ಸಂಚಾರ ಮಾಡುತ್ತ ಬರುವಾಗ ಕ್ಷೇತ್ರದ ದೇಸಾಯಿ ಕಲ್ಲೂರ್ ಗ್ರಾಮಕ್ಕೆ ಬಂದು ಐಕ್ಯವಾಗಿದ್ದಾರೆಂಬ ಐತಿಹಾಸವಿದೆ.ಅದಕ್ಕೆ ಸಾಕ್ಷಿ ಎಂಬಂತೆ ದೇವಸ್ಥಾನದ ಗುಹೆಯಲ್ಲಿ ಕುರುಹುಗಳು ಇತ್ತೀಚಿನ ವರ್ಷಗಳ ಹಿಂದೆ ಗುಹೆಯಲ್ಲಿನ ಕಲ್ಲು ಉರುಳಿ ಬಿದ್ದಾಗ ಕಂಡು ಬಂದಿದ್ದನ್ನು ಗ್ರಾಮದ ಭಕ್ತರು ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಸಂಸ್ಥಾನ ಹಿರೇಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ಬಳಿಗೆ ತಂದಾಗ ಶ್ರೀಗಳು ಅದನ್ನು ಪುನ: ಸರಿಪಡಿಸುವಂತೆ ಭಕ್ತರಿಗೆ ಸಲಹೆ ನೀಡಿದರು. ಅದರಂತೆ ಭಕ್ತರು ಸಹ ಕುರುಹದ ಕಲ್ಲುಗಳನ್ನು ಸರಿಪಡಿಸಿದರು.
ಅದೇ ರೀತಿ ದೇವಸ್ಥಾನದ ಆವರಣದಲ್ಲಿ 150 ವರ್ಷಗಳ ಹಿಂದೆ ನಿರ್ಮಿಸಲಾದ ಕಬ್ಬಿಣದ
ರಥೋತ್ಸವ ದೇವಸ್ಥಾನದ ಆವರಣದಲ್ಲಿ ಮುಳುಗಿತ್ತು. ಆ ಭವ್ಯವಾದ ಕಬ್ಬಿಣದ ರಥವನ್ನು ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಅಲ್ಲಮಪ್ರಭು ಪಾಟೀಲ್ ಅವರು ಮುತುವರ್ಜಿ ವಹಿಸಿ ರಥವನ್ನು ಮೇಲೆತ್ತಲು ಸಹಕಾರ ನೀಡಿದ್ದರಿಂದ ಭವ್ಯವಾದ ಕಬ್ಬಿಣದ ರಥವನ್ನು ಕಳೆದ 25 ವರ್ಷಗಳಿಂದ ಭಕ್ತರು ಎಳೆಯುವ ಮೂಲಕ ಈ ಭಾಗದಲ್ಲಿ ಭವ್ಯ ರಥೋತ್ಸವ ಕೀರ್ತಿಗೆ ಭಾಜನವಾಗಿದೆ.
ಕ್ಷೇತ್ರದ ದೇಸಾಯಿ ಕಲ್ಲೂರ್ ಗ್ರಾಮದಲ್ಲಿ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ಸಾನಿಧ್ಯದಲ್ಲಿ ಕರ್ತೃ ಗದ್ದುಗೆಗೆ ಪೂಜೆ, ರುದ್ರಾಭಿಷೇಕ, ಪುರಾಣ ಪ್ರವಚನ ಸೇರಿದಂತೆ ಭವ್ಯವಾದ ರಥೋತ್ಸವ ಕಾರ್ಯಕ್ರಮವು ಪ್ರತಿ ವರ್ಷದಂತೆ ಸತತವಾಗಿ ಈ ಬಾರಿಯೂ ಸಿದ್ದೇಶ್ವರ್ ದೇವಸ್ಥಾನದ ಸಮಿತಿ ಮತ್ತು ಭಕ್ತರು ಮಾರ್ಚ್ 11ರಂದು ಶನಿವಾರದಂದು ಸಿದ್ದೇಶ್ವರ್ ದೇವಸ್ಥಾನದ ಜೀರ್ಣೋದ್ಧಾರ ಕಟ್ಟಡದ ಉದ್ಘಾಟನೆ ಹಾಗೂ ಲಕ್ಷ ದೀಪೆÇೀತ್ಸವ ಮತ್ತು ಅಡ್ಡಪಲ್ಲಕ್ಕಿ ಮಹೋತ್ಸವವು ಉಜ್ಜಯಿನಿ ಜಗದ್ಗುರುಗಳಿಂದ ಜರುಗಲಿದೆ. ಕಾರ್ಯಕ್ರಮದಲ್ಲಿ ಎಲ್ಲ ಶ್ರೀಗಳು ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಎಂ.ವೈ. ಪಾಟೀಲ್, ಮಾಜಿ ಸಚಿವ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್ ಅವರೂ ಸೇರಿದಂತೆ ಹಲವು ರಾಜಕೀಯ ಮುಖಂಡರು ಪಾಲ್ಗೊಳ್ಳುವರು. ದೇವಸ್ಥಾನದ ಕಮೀಟಿ ಅಧ್ಯಕ್ಷ ಜಗದೀಶ್ ಸಿ. ದೇಶಮುಖ್, ಉಪಾಧ್ಯಕ್ಷ ಶಂಕರರಾವ್ ದೇಶಮುಖ್, ಸದಸ್ಯರಾದ ವಿಜಯಕುಮಾರ್ ದೇಶಮುಖ್, ಸಿದ್ಧರಾಮ್ ದೇಶಮುಖ್, ಅಪ್ಪಾಸಾಬ್ ದೇಶಮುಖ್, ರಾಜಶೇಖರ್ ದೇಶಮುಖ್, ಸೋಮಶೇಖರ್ ದೇಶಮಖ್, ರಾವಸಾಬ್ ದೇಶಮುಖ್, ಬಾಳಾಸಾಹೇಬ್ ದೇಶಮುಖ್, ಶರಣಕುಮಾರ್ ದೇಶಮುಖ್, ಬಾಬಾರಾವ್ ದೇಶಮುಖ್, ವಿಶಾಲ್ ದೇಶಮುಖ್, ಶಿವರಾಜ್ ದೇಶಮುಖ್ ಮುಂತಾದವರು ಆಗಮಿಸುವರು.
ಗ್ರಾಮವು ಸಂಗೀತ ಕಲಾವಿದರನ್ನು ಹೊಂದಿದ್ದು ವಿಶೇಷವಾಗಿದೆ. ಗ್ರಾಮದ ಕಲಾವಿದರು ಅಂತರಾಷ್ಟ್ರೀಯ ಕಲಾವಿದರಾಗಿ, ಹಿಂದೂಸ್ತಾನ್ ಕಲಾವಿದರಾಗಿ, ಆಕಾಶವಾಣಿ ಕಲಾವಿದರಾಗಿ ಹೆಸರು ಮಾಡಿದವರಾಗಿದ್ದಾರೆ. ಹೀಗಾಗಿ ಎಲ್ಲ ಕಲಾವಿದರು ಅಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಜಾತ್ರೆಗೆ ವಿಜಯಪುರ ಜಿಲ್ಲೆಯವರೂ ಸೇರಿದಂತೆ ಹೊರ ರಾಜ್ಯವಾದ ಮಹಾರಾಷ್ಟ್ರದ ಸೊಲ್ಲಾಪುರ ಸೇರಿದಂತೆ ನಾಡಿನೆಲ್ಲೆಡೆಯಿಂದ ಭಕ್ತರು ಆಗಮಿಸುವರು. ಲಕ್ಷ ದೀಪೆÇೀತ್ಸವ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಸರ್ವರೂ ಆಗಮಿಸಬೇಕು ಎಂದು ಸಮಿತಿಯವರು ಕೋರಿದ್ದಾರೆ.