
ಕಲಬುರಗಿ:ಮಾ:12: 18ನೇ ಶತಮಾನದ ಸಂತ ಶರಣಬಸವೇಶ್ವರ ದೇವರ 201ನೇ ಪುಣ್ಯತಿಥಿ ಅಂಗವಾಗಿ ಮಂಗಳವಾರ ನಡೆದ ಐತಿಹಾಸಿಕ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ದೇಶ, ವಿದೇಶಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು.
ನಿಗದಿತ ಸಮಯಕ್ಕೆ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರರನ್ನು ಸ್ತುತಿಸುವ ಘೋಷಣೆಗಳ ಮಧ್ಯೆ ದೇವಸ್ಥಾನದ ಆವರಣದಲ್ಲಿ ಶರಣಬಸವೇಶ್ವರರ ಮೂರ್ತಿಯನ್ನು ಹೊತ್ತ ಅಲಂಕೃತ ರಥವನ್ನು ಎಳೆಯಲಾಯಿತು.
ಈ ವರ್ಷದ ಜಾತ್ರಾ ಮಹೋತ್ಸವವು ಹಲವು ವಿಧಗಳಲ್ಲಿ ವಿಶಿಷ್ಟವಾಗಿತ್ತು ಮತ್ತು ಮೊದಲ ಬಾರಿಗೆ ಗಂಗಾರತಿಯ ಮಾದರಿಯಲ್ಲಿ ಶರಣಾರÀತಿಯ ಆಕರ್ಷಕ ಪ್ರದರ್ಶನವನ್ನು ಪ್ರದರ್ಶಿಸಲಾಯಿತು, ನಂತರ ಈ ವರ್ಷದ ರಥೋತ್ಸವ ಮತ್ತು ಶರಣಬಸವೇಶ್ವರ ಜಾತ್ರೆಯ ಪ್ರಮುಖ ಅಂಶಗಳಲ್ಲಿ ಒಂದಾದ ಶರಣಬಸವೇಶ್ವರರ ಜೀವನದ “ಪೆÇ್ರಜೆಕ್ಷನ್ ಮ್ಯಾಪಿಂಗ್”À ಸಂತ ಶರಣಬಸವೇಶ್ವರರು ಮಾಡಿದ ಪವಾಡಗಳನ್ನು ಲೇಸರ್ ತಂತ್ರಜ್ಞಾನವನ್ನು ಬಳಸಿ ಬೆಳಗಿಸಲಾಯಿತು. ಇದನ್ನು ನೋಡಿ ನರೆದಿದ್ದ ಸಾವಿರಾರು ಭಕ್ತರು ಮನಸೂರೆಗೊಂಡರು.
ಕಳೆದ ವರ್ಷದಂತೆ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ.ಅಪ್ಪಾಜಿ ಹಾಗೂ 9ನೇ ಪೀಠಾಧಿಪತಿಯಾಗಿ ಪಟ್ಟಾಭಿμÉೀಕಗೊಂಡಿರುವ ಅವರ ಪುತ್ರ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರು ರಥೋತ್ಸವದ ಮೊದಲು ಹಾಗೂ ನಂತರದ ಎಲ್ಲಾ ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು.
ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರು ಅಲಂಕರಿಸಿದ ರಥಕ್ಕೆ ಪ್ರದಕ್ಷಿಣೆ ಹಾಕಿ ರಥಕ್ಕೆ ಪೂಜೆ ಸಲ್ಲಿಸಿ ವಿಶೇಷವಾದ ನೇವೈದ್ಯ ಸಮರ್ಪಿಸಿ ದೇವಸ್ಥಾನದ ಪಕ್ಕದಲ್ಲಿರುವ ದಾಸೋಹ ಮಹಾಮನೆಯಲ್ಲಿ ವಿಶೇಷವಾಗಿ ನಿರ್ಮಿಸಿದ ಆವರಣದಲ್ಲಿ ತಮ್ಮ ತಂದೆ 8ನೇ ಮಹಾದಾಸೋಹ ಪೀಠಾಧಿಪತಿ ಡಾ.ಅಪ್ಪಾಜಿ ಹಾಗೂ ಅವರ ತಾಯಿ ಮಾತೋಶ್ರೀ ಡಾ ದಾಕ್ಷಾಯಿಣಿ ಅವ್ವಾಜಿ ಅವರೊಂದಿಗೆ ರಥೋತ್ಸವದ ದರ್ಶನ ಪಡೆದರು.
ಅವರು ಜಂಟಿಯಾಗಿ ಪ್ರಸಾದ ಬಟ್ಟಲು (ಸಂತ ಶರಣಬಸವೇಶ್ವರರು ತಮ್ಮ ಆಹಾರವನ್ನು ತೆಗೆದುಕೊಂಡ ಬೆಳ್ಳಿಯ ತಟ್ಟೆ) ಮತ್ತು ಲಿಂಗ ಸಜ್ಜಿಕೆ (ಸಂತರು ಧರಿಸಿದ್ದ ಬೆಳ್ಳಿಯ ಪೆಟ್ಟಿಗೆಯಲ್ಲಿ ಇರಿಸಲಾದ ಪವಿತ್ರಲಿಂಗದ ವಿಗ್ರಹ) ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ದೇಗುಲದಲ್ಲಿ ನೆರೆದಿದ್ದ sಸಾವಿರಾರು ಭಕ್ತರಿಗೆ ಪ್ರದರ್ಶಿಸಿದರು. ಈ ದಿನದಂದು ಸಂಸ್ಥಾನದ ಪೀಠಾಧಿಪತಿಗಳು ಸಾಂಪ್ರದಾಯಿಕವಾಗಿ ಪೀಠಾರೋಹಣ ಎಂದು ಕರೆಯಲ್ಪಡುವ ಪೀಠದ ಉಸ್ತುವಾರಿಯನ್ನು ಔಪಚಾರಿಕವಾಗಿ ವಹಿಸಿಕೊಳ್ಳುತ್ತಾರೆ.
ಸಂತರ ಪುಣ್ಯತಿಥಿಯನ್ನು ಭಕ್ತರು ದಿನವಿಡೀ ಉಪವಾಸವಿದ್ದು, ಪೂಜೆ ಸಲ್ಲಿಸಿ ರಥೋತ್ಸವದ ನಂತರ ಸಿಹಿತಿಂಡಿ ಸೇರಿದಂತೆ ವಿಶೇಷವಾಗಿ ತಯಾರಿಸಿದ ಖಾದ್ಯಗಳನ್ನು ಸೇವಿಸುವ ಮೂಲಕ ಮಂಗಳಕರ ದಿನವನ್ನಾಗಿ ಆಚರಿಸುತ್ತಾರೆ. (ವಿಶೇಷವಾಗಿ ಲಿಂಗಾಯತರು ಶರಣರು ಲಿಂಗೈಕ್ಯರಾದ ದಿನವನ್ನು ಹಾಗೂ ಧಾರ್ಮಿಕ ಮುಖ್ಯಸ್ಥರ ಪುಣ್ಯಸ್ಮರಣೆಗಳಲ್ಲಿ ಭಾಗವಹಿಸುತ್ತಾರೆ. ಮತ್ತು ಅದನ್ನು ಭಕ್ತರು ಹಬ್ಬವಾಗಿ ಆಚರಿಸುತ್ತಾರೆ).
ಇಡೀ ಕಲಬುರಗಿ ನಗರ ಪುಷ್ಪಗಳಿಂದ ಸಿಂಗರಿಸಿಕೊಂಡು ಹಬ್ಬದಂತೆ ಕಂಗೊಳಿಸುತ್ತಿತ್ತು ಮತ್ತು ಸಂತ ಶರಣಬಸವೇಶ್ವರರ ಬೋಧನೆ ಮತ್ತು ಆಚರಣೆಯ ದಾಸೋಹದ ಸಂಪ್ರದಾಯಗಳಿಗೆ ಅನುಗುಣವಾಗಿ, ಇಡೀ ನಗರವು ದಾಸೋಹ ಮಹಾಮನೆಯಾಗಿ ಮಾರ್ಪಟ್ಟಿತ್ತು. ಶರಣಬಸವೇಶ್ವರ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಉಚಿತ ಅನ್ನ-ನೀರು ನೀಡುವುದಕ್ಕಾಗಿ ಜನರು ಎಲ್ಲಾ ರಸ್ತೆಗಳಲ್ಲಿ ಪೆಂಡಾಲ್ ಹಾಕಿದ್ದರು ಮತ್ತು ವಿಶೇಷ ಮಳಿಗೆಗಳು ಕಂಗೊಳಿಸುತ್ತಿದ್ದವು.
ಶರಣಬಸವೇಶ್ವರರು ನಿಸ್ವಾರ್ಥ ಸೇವೆಗೆ ಮಾದರಿಯಾದವರು ಮತ್ತು ತಮ್ಮ ಜೀವಿತಾವಧಿಯಲ್ಲಿ ತಮ್ಮ ಭಕ್ತರಿಗೆ ಭರವಸೆ ಮತ್ತು ಮೋಕ್ಷದ ದಾರಿದೀಪವಾಗಿದ್ದವರು. ರಾಯಚೂರು, ವಿಜಯಪುರ, ಬೀದರ್ ಸೇರಿದಂತೆ ನೆರೆಯ ಜಿಲ್ಲೆಗಳು ಮತ್ತು ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಗಡಿ ಜಿಲ್ಲೆಗಳು ಸೇರಿದಂತೆ ದೂರದ ತಮ್ಮ ತಮ್ಮ ಗ್ರಾಮಗಳಿಂದ ಮೈಲುಗಟ್ಟಲೆ ನಡೆದುಕೊಂಡು ಬಂದು ತಮ್ಮ ಇμÁ್ಟರ್ಥಗಳನ್ನು ಈಡೇರಿಸಿಕೊಳ್ಳಲು ಶರಣಬಸವೇಶ್ವರರ ಅಪ್ಪಟ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ.
ಹಸುವಿನ ಹಾಲಿನಿಂದ ತಯಾರಿಸಿದ ತಾಜಾ ಮೊಸರು ಮತ್ತು ಹೊಸದಾಗಿ ಕೊಯ್ಲು ಮಾಡಿದ ಜೋಳದಿಂದ ತಯಾರಿಸಿದ ವಿಶೇಷ ಭಕ್ಷ್ಯವಾದ “ಹುಳಿ ಬಾನ” ತಯಾರಿಸಲಾಗುತ್ತದೆ. “ನೇವೈದ್ಯ” ಸೇರಿದಂತೆ ಎಲ್ಲಾ ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸಿ ತಯಾರಿಸಲಾದ ಈ ಖಾದ್ಯವನ್ನು ವಿಶೇಷವಾಗಿ ನೇಮಿಸಿದ ವ್ಯಕ್ತಿಯಿಂದ ತಲೆಯ ಮೇಲಿಟ್ಟುಕೊಂಡು ರಥದ ಕಡೆಗೆ ಒಯ್ಯಲಾಗುತ್ತದೆ. ಹುಳಿ ಬಾನವನ್ನು ತಲೆಯ ಮೇಲೆ ಹೊತ್ತ ಈ ವ್ಯಕ್ತಿಯು ರಥವನ್ನು ಎಳೆಯುವ ಮೊದಲು ಮತ್ತು ರಥವು ಅದರ ಮೂಲ ಸ್ಥಳಕ್ಕೆ ಹಿಂದಿರುಗಿದ ನಂತರ ಐದು ಬಾರಿ ರಥವನ್ನು ಪ್ರದಕ್ಷಿಣೆ ಹಾಕುವುದು ಪ್ರತೀತಿ.
ಪೂಜ್ಯ ಡಾ ಶರಣಬಸವಪ್ಪ ಅಪ್ಪಾಜಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಹಾಗೂ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಮತ್ತು ಅವರ ಎಲ್ಲಾ ಕುಟುಂಬ ಸದಸ್ಯರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ್ ವಿ ನಿಷ್ಠಿ, ಕಲಬುರಗಿ ಸಂಸದ ಡಾ. ಉಮೇಶ ಜಾಧವ, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ಸಿ. ಪಾಟೀಲ ರೇವೂರ, ಮಾಜಿ ಶಾಸಕ ಅಲ್ಲಮ ಪ್ರಭು ಪಾಟೀಲ ಸೇರಿದಂತೆ ಇತರ ಪ್ರಮುಖರು ಶರಣಬಸವೇಶ್ವರರ 201ನೇ ರಥೋತ್ಸವಕ್ಕೆ ಸಾಕ್ಷಿಯಾದರು.