
ಮುದಗಲ್: ಪಟ್ಟಣದ ನೀಲಕಂಠೇಶ್ವರ ದೇವರ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ನಿಮಿತ್ತ ವಿವಿಧ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ಜರುಗಿತು.
ನೀಲಕಂಠೇಶ್ವರ ದೇವರಿಗೆ ಬೆಳಿಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಪೂಜೆ ಜರುಗಿತು. ಸೋಮವಾರಪೇಟೆಯ ಬಸವೇಶ್ವರ ದೇವಸ್ಥಾನದಿಂದ ಕುಂಭ, ಕಳಸ, ಡೊಳ್ಳು, ಬಾಜಾ, ಭಜಂತ್ರಿಯೊಂದಿಗೆ ವಿವಿಧ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವದಲ್ಲಿ ಬೇಟಗೇರಿಯ ನೀಲಕಂಠಮಠದ ಕುರುಹಿನಶೆಟ್ಟಿ ಪೀಠಾಧೀಶ ನೀಲಕಂಠ ಪಟ್ಟಾದಾರ್ಯ ಸ್ವಾಮೀಜಿ ಆಗಮಿಸಿದ್ದರು.

ಸಂಜೆ 06. ಗಂಟೆಗೆ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಆರತಿ ಬೆಳಗುವ ಮೂಲಕ ಚಾಲನೆ ನೀಡಲಾಯಿತು. ನಂತರ ಸಾವಿರಾರು ಭಕ್ತ ಜನಸ್ತೋಮದ ನಡುವೆ ಅದ್ದೂರಿಯಾಗಿ ರಥೋತ್ಸವ ಜರುಗಿತು..
ಈ ಸಂದರ್ಭದಲ್ಲಿ ವೀರಭದ್ರಪ್ಪ ಕೊಳ್ಳಿ, ಮುದಿವೀರಪ್ಪ ಜೀಡಿ, ವಿರುಪಾಕ್ಷಪ್ಪ ಜೀಡಿ, ಬಸವರಾಜ ಜಗರಕಲ್, ಪ್ರಭು ಪ್ರದಾನಿ, ಶೇಖಣ್ಣ ಜಗರಕಲ್, ಬಸಪ್ಪ ಜೀಡಿ, ಸೇರಿದಂತೆ ಕುರವಿನಶೇಟ್ಟಿ ಸಮಾಜದ ಹಾಗೂ ಊರಿನ ಭಕ್ತರು ಪಾಲ್ಗೊಂಡಿದ್ದರು.