
ಬೀದರ, ನ.7: ಬೀದರ ಜಿಲ್ಲೆಯಲ್ಲಿ ಸಾವಿರಾರು ವರ್ಷಗಳ ಹಳೆಯ ಸಂಸ್ಕ್ರತಿ, ಇತಿಹಾಸ, ಪರಂಪರೆ ಸಾರುವ ಐತಿಹಾಸಿಕ ಪ್ರವಾಸಿ ತಾಣಗಳಿವೆ. ಆದರೆ ನಾವೇಲ್ಲರೂ ಅವುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸದೆ ಇರುವದರಿಂದ ಅವುಗಳು ನಶಿಸುವ ಸ್ಥಿತಿಯಲ್ಲಿವೆ, ಆದ್ದರಿಂದ ಐತಿಹಾಸಿಕ ಪ್ರವಾಸಿ ತಾಣಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳ, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಅವರು ಸೋಮವಾರ ಬೀದರ ಜಿಲ್ಲಾ ಪಂಚಾಯತ ಕಛೇರಿ ಸಭಾಂಗಣದಲ್ಲಿ ಸ್ಮಾರಕಗಳ ಸಂರಕ್ಷಣೆಗಾಗಿ ಆಸಕ್ತಿ ವ್ಯಕ್ತಪಡಿಸಿರುವ ಉದ್ಯಮಿಗಳು ಸಂಘ-ಸಂಸ್ಥೆಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೀದರ ನ ನೌಬಾದ ಬಳಿ ಇರುವ ಕರೇಜ್ ಅಂದಿನ ಕಾಲದಲ್ಲಿ ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಈ ಕರೇಜ್‍ನಲ್ಲಿ ಎಂತಹ ಬರಗಾಲವೇ ಬಂದರು ನೀರು ಬತ್ತುವುದಿಲ್ಲ. ನಮ್ಮ ದೇಶದಲ್ಲಿ ತಂತ್ರಜ್ಞಾನ ಎಷ್ಟೆ ಮುಂದುವರಿದರು ಇಂತಹ ಕರೇಜ್‍ಜನ್ನು ಈ ಕಾಲದಲ್ಲಿ ನಮ್ಮಿಂದ ನಿರ್ಮಿಸಲು ಸಾಧ್ಯವಿಲ್ಲ. ಇದನ್ನು ಅಭಿವೃದ್ಧಿ ಪಡಿಸಿದಲ್ಲಿ ಇದು ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಬಹುದು. ನಮ್ಮ ಸ್ಮಾರಕ ದತ್ತು ಯೋಜನೆ ಅಡಿ ಇದಕ್ಕೆ ದತ್ತು ಪಡೆಯಲು ಕೆಲವು ಉದ್ಯಮಿಗಳು ಮುಂದೆ ಬಂದಿದ್ದು. ಮುಂದಿನ ದಿನಗಳಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ, ಸಾರ್ವಜನಿಕರ ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕರೇಜ್ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಬೀದರ ಜಿಲ್ಲೆಯಲ್ಲಿ ಐತಿಹಾಸಿಕ ಕೋಟೆ, ಮೊಹಮ್ಮದ್ ಗವಾನ ಮದರಸಾ, ಅಷ್ಟ ಕೋನಾಕಾರದ ಭಾವಿಗಳು, ನರಸಿಂಹ ಸ್ವಾಮಿ ದೇವಸ್ಥಾನ, ಬಸವಕಲ್ಯಾಣದ ಕೋಟೆ ಸೇರಿದಂತೆ ಅನೇಕ ಧಾರ್ಮಿಕ ಹಾಗೂ ಐತಿಹಾಸಿಕ ಸ್ಮಾರಕಗಳಿವೆ ಅವುಗಳಿಗು ಮೂಲಭೂತ ಸೌರ್ಕಯಗಳನ್ನು ಒದಗಿಸಿ ಅಭಿವೃದ್ಧಿ ಪಡಿಸಲಾಗುವುದು. ರಾಜ್ಯದಲ್ಲಿ ಪ್ರಸ್ತುತ 834 ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಲಾಗಿದೆ. ರಾಜ್ಯದಲ್ಲಿ ಇನ್ನು ಸುಮಾರು 25 ರಿಂದ 30 ಸಾವಿರ ಸ್ಮಾರಕಗಳಿವೆ ಎಂಬ ಮಾಹಿತಿ ಇದೆ, ಅವುಗಳನ್ನು ಪತ್ತೆ ಹಚ್ಚಲು ಗ್ರಾಮ ಮಟ್ಟದಲ್ಲಿ ಸರ್ವೆ ಕಾರ್ಯ ಆರಂಭವಾಗಿದ್ದು ಈಗಾಗಲೇ 38 ತಾಲ್ಲೂಕಿನ ಸರ್ವೆ ಕಾರ್ಯ ಮುಗಿದಿದ್ದು. 19 ಸಾವಿರ ಪ್ರಾಚ್ಯ ಕುರುಹುಗಳು ದೊರೆತಿವೆ ಎಂದರು.
ರಾಜ್ಯದಲ್ಲಿರುವ ಪ್ರವಾಸಿ ತಾಣಗಳನ್ನು ಸಂರಕ್ಷಣೆಯಾಗಬೇಕಾದರೆ. ಸಾರ್ವಜನಿಕರ, ಉದ್ಯಮಿಗಳ ಹಾಗೂ ಸಂಘ-ಸಂಸ್ಥೆಗಳ ಸಹಕಾರ ಅಗತ್ಯವಿದ್ದು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 25 ರಂದು ನಮ್ಮ ಸ್ಮಾರಕ ದತ್ತು ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ ಸಾರ್ವಜನಿಕರ, ಉದ್ಯಮಿಗಳ ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಐತಿಹಾಸಿಕ ತಾಣಗಳ ಅಭಿವೃದ್ಧಿಯಾಗಿದೆ. ರಾಜ್ಯದ ಉದ್ದಗಲಕ್ಕೂ ಇರುವ ಐತಿಹಾಸಿಕ ತಾಣಗಳ ಮಾಹಿತಿ ಪಡೆಯಲು ಹಾಗೂ ಅಲ್ಲಿರುವ ಕುಂದು ಕೊರೆತೆಯನ್ನು ಆಲಿಸಿ ಅವುಗಳಿಗೆ ಪರಿಹಾರ ಒದಗಿಸಲು ಬೀದರ ನಿಂದ ಚಾಮರಾಜನಗರ ಒರೆಗೆ ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣಾ ಪ್ರವಾಸ ಅಭಿಯಾನದಡಿ ಪ್ರವಾಸ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಬಸವಣ್ಣನವರ ಕರ್ಮ ಭೂಮಿಯಾದ ಬೀದರನ ನರಸಿಂಹ ಸ್ವಾಮಿ ದೇವರ ದರ್ಶನ ಪಡೆದು ಚಾಲನೆ ನೀಡುತ್ತಿದ್ದೇನೆ ಎಂದ ಅವರು ಬೀದರ ನರಸಿಂಹ ಸ್ವಾಮಿ ದೇವಸ್ಥಾನ ಅಭಿವೃದ್ಧಿಗಾಗಿ ಬಾಕಿ ಇರುವ 85 ಲಕ್ಷ ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಮಾತನಾಡಿ, ರಾಜ್ಯ ಹಾಗೂ ಬೀದರ ಜಿಲ್ಲೆಯಲ್ಲಿ ಅರಸರ ಕಾಲದ ಸಾಂಸ್ಕ್ರತಿಕ, ಐತಿಹಾಸಿಕ, ಪರಂಪರೆಯನ್ನು ತಿಳಿಸುವ ಐತಿಹಾಸಿಕ ತಾಣಗಳಿದ್ದು. ಇವುಗಳ ಅಭಿವೃದ್ಧಿ ಅಗತ್ಯವಾಗಿದೆ. ಬೀದರನಲ್ಲಿರುವ ಕರೇಜ್ ಅಭಿವೃದ್ಧಿಗೆ ನಾನು ಹಿಂದೆ ಮಂತ್ರಿ ಆಗಿದ್ದಾಗ ಅನುದಾನ ಒದಗಿಸಿ ಅಭಿವೃದ್ದಿ ಕೆಲಸ ಕಾರ್ಯಕ್ಕೆ ಚಾಲನೆ ನೀಡಿದ್ದೆ. ಆದರೆ ಮುಂದೆ ಸರ್ಕಾರ ಬದಲಾಗಿದ್ದರಿಂದ ಅನುದಾನ ಕೊರತೆಯಿಂದ ಕೆಲಸ ಅಲ್ಲಿಗೆ ನಿಂತಿದೆ. ಈ ಕರೇಜ್‍ನ ಸಂರಕ್ಷಣೆ ನಮ್ಮೆಲರ ಹೊಣೆಯಾಗಿದ್ದು. ಈಗಾಗಲೇ ಕರೇಜ್‍ಗೆ ಸಂಬಂಧಿಸಿದಂತೆ ವಿಸೃತ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ. ಮುಂದಿನ ದಿನಗಳ ಇದರ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಜೊತೆಗೆ ಜಿಲ್ಲೆಯಲ್ಲಿರುವ ಇನ್ನುಳಿದ ಐತಿಹಾಸ ಸ್ಮಾರಕಗಳ ಅಭಿವೃದ್ಧಿಗೂ ಶ್ರಮಿಸಲಾಗುವುದು ಎಂದರು.
ಸಭೆಗು ಮುನ್ನ ಪ್ರವಾಸೋದ್ಯಮ ಸಚಿವರು ಬೀದರ ನ ನರಸಿಂಹ ಸ್ವಾಮಿ ದೇವಸ್ಥಾನ, ಹಮೀಲಾಪೂರ ಬಳಿಯ ಅಷ್ಟಕೋನಾಕಾರದ ಭಾವಿ, ನೌಬಾದ ಬಳಿಯ ಕರೇಜ್ ಹಾಗೂ ಮೊಹಮ್ಮದ ಗವಾನ ಮದರಸಾಗೆ ಭೇಟಿ ನೀಡಿ ವಿಕ್ಷಣೆ ಮಾಡಿದರು.
ಸಭೆಯಲ್ಲಿ ಹಜ್ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್, ವಿಧಾನ ಪರಿಷತ ಸದಸ್ಯರುಗಳಾದ ಅರವಿಂದಕುಮಾರ ಅರಳಿ, ಭೀಮರಾವ ಬಿ. ಪಾಟೀಲ್, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ., ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಕರ್ನಾಟಕ ತಂತ್ರಜ್ಞಾನ ಮತ್ತು ವಿಜ್ಞಾನ ಮಂಡಳಿಯ ಸಿಬ್ಬಂದಿಗಳು, ಕಲ್ಕಿ ಫೌಂಡೇಶನ್‍ನ ನಿರ್ದೇಶಕರು, ಬೀದರ ನ ಶೈಕ್ಷಣಿಕ, ವಾಣಿಜ್ಯ ಸಂಘ-ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.