ಐತಿಹಾಸಿಕ ನಿರ್ಧಾರ ಸ್ವಾಗತಾರ್ಹ: ಉಳ್ಳಿಕಾಶಿ


ಹುಬ್ಬಳ್ಳಿ, ನ 20: ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿದ ಕೇಂದ್ರ ಸರಕಾರದ ನಿರ್ಧಾರ ಸ್ವಾಗತಾರ್ಹ ಎಂದು ಸಮತಾಸೇನಾ ರಾಜ್ಯಧ್ಯಕ್ಷ ಗುರುನಾಥ ಉಳ್ಳಿಕಾಶಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಕಳೆದ 15 ತಿಂಗಳುಗಳಿಂದ ನಿರಂತರವಾಗಿ ರೈತರು ತಮ್ಮ ಕುಟುಂಬವನ್ನು ಬಿಟ್ಟು ಬೇಡಿಕೆಗಳಿಗೆ ಆಗ್ರಹಿಸುತ್ತಿದ್ದ ಸಂದರ್ಭದಲ್ಲಿ ಹಲವಾರು ಜನರು ಅಸುನೀಗಿದ್ದಾರೆ. ಕೊನೆಗೂ ರೈತರಿಗೆ ಸಿಕ್ಕಂತಹ ದೊಡ್ಡ ಹೋರಾಟದ ಫಲವಾಗಿದ್ದು, ರೈತರ ಶಕ್ತಿ ದೇಶಕ್ಕೆ ಗೊತ್ತಾಗಿದೆ. ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳಲು ಇಲ್ಲಸಲ್ಲದ ಆರೋಪಗಳನ್ನು ಹೊರಸಿದ್ದರೂ ಕೂಡ ಯಾವ ತಂತ್ರವು ಫಲಿಸದೇ ಕೇಂದ್ರ ಸರಕಾರ ರೈತರ ಒತ್ತಡಕ್ಕೆ ಮಣಿದು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ.
ಆದ್ದರಿಂದ ದೇಶದ ರೈತರ ವಿವಿಧ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈಡೇರಿಸಬೇಕು. ಅಲ್ಲದೆ ದೇಶದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದು ಸರಕಾರಗಳು ಸೂಕ್ತ ಪರಿಹಾರ ಒದಗಿಸಬೇಕೆಂದು ಉಳ್ಳಿಕಾಶಿ ಒತ್ತಾಯಿಸಿದ್ದಾರೆ.