ಐತಿಹಾಸಿಕ ದೇವಾಲಯ ಮುಂಡರಗಿ ಶಿವರಾಯನ ದೇಗುಲದ ಪೌಳಿ ನಿರ್ಮಾಣ – ಕೆ.ಶಿವನಗೌಡ ನಾಯಕ


ಅರಕೇರಾ.ನ.೧೩- ದೇವದುರ್ಗತಾಲ್ಲೂಕಿನ ಮುಂಡರಗಿ ಗ್ರಾಮದಲ್ಲಿನ ಸುಕ್ಷೇತ್ರ ಶ್ರೀ ಶಿವರಾಯನದೇವಸ್ಥಾನಕ್ಕೆ ಬಹಳ ವರ್ಷಗಳಿಂದ ತನ್ನದೇಯಾದ ಇತಿಹಾಸವನ್ನು ಹೊಂದಿದ್ದು ಈಭಾಗದ ಜನರ ಕಷ್ಟಕಾರ್ಪಣೆಗಳಿಗೆ ಮುಂಡರಗಿ ಶ್ರೀಶಿವರಾಯನ ಕೃಪೆಯಿಂದ ಭಾಗದ ಜನರಿಗೆ ಒಳ್ಳೆಯದಾಗಿದೆ.ಇಂತಹ ಇತಿಹಾಸ ಇರುವ ದೇವಸ್ಥಾನವು ಈಗ ಅಭಿವೃದ್ದಿಹೊಂದುತ್ತಿರುವದು ಈಭಾಗದ ಭಕ್ತರು ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ.
ಈದೇವಸ್ಥಾನವು ತನ್ನದೇಯಾದ ಇತಿಹಾಸ ಹೊಂದಿದ್ದು. ಈಭಾಗದ ಅತ್ಯಂತ್ಯ ಹಳೆಯ ದೇವಸ್ಥಾನಗಳಲ್ಲಿ ಒಂದಾಗಿದೆ.ಈಪುರಾತನ ದೇವಸ್ಥಾನಕ್ಕೆ ರಾಜ್ಯದ ನಾನಾ ಭಾಗಗಳಲ್ಲಿ ಭಕ್ತರನ್ನು ಹೊಂದಿರುವ ಐತಿಹಾಸಿಕ ದೇಗುಲಗಳಗಲ್ಲಿ ಒಂದಾದ ಸಮೀಪದ ಮುಂಡರಗಿ ಶ್ರೀ ಶಿವರಾಯ ದೇವಸ್ಥಾನದ ಅಭಿವೃದ್ಧಿಗೆ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರ ಕೊಡುಗೆ ಅಪಾರ. ಸುಮಾರು ೭೦೦ ವರ್ಷಗಳ ಇತಿಹಾಸ ಹೊಂದಿದ ಪುರಾತನ ದೇಗುಲವಾಗಿದ್ದು, ಮುಂಡರಗಿ ಗ್ರಾಮದ ಬೆಟ್ಟದ ನಡು ಗರ್ಭದಲ್ಲಿ ಪೂರ್ವಾಭಿಮುಖವಾಗಿದೆ. ರಾಜ್ಯದಲ್ಲಿ ಐತಿಹಾಸಿಕ ಹಿನ್ನಲೆಯುಳ್ಳ ದೇಗುಲವಾಗಿದ್ದು, ಮಳೆ, ಬೆಳೆ, ಸಂತಾನ ಪ್ರಾಪ್ತಿ ಸೇರಿ ಇನ್ನೀತರ ಭಕ್ತರ ಬೇಡಿಕೆಗಳು ಈಡೇರಿಸುವ ಪುಣ್ಯ ಕ್ಷೇತ್ರವಾಗಿದೆ.
ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟ ಶಾಸಕ ಕೆ.ಶಿವನಗೌಡ ನಾಯಕರು ಕಳೆದ ಹದಿನೈದು ವರ್ಷಗಳಿಂದ ಅಭಿವೃದ್ಧಿ ಕಾಮಗಾರಿಗಳಿಗೆ ನಾಂದಿ ಹಾಡಿದ್ದಾರೆ. ಸಿಸಿ ರಸ್ತೆ, ನೀರಿನ ವ್ಯವಸ್ಥೆ, ದೇವಸ್ಥಾನದ ಸಂಪೂರ್ಣ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಕೋಟ್ಯಾಂತರ ಅನುಧಾನವನ್ನು ಬಿಡುಗಡೆ ಮಾಡಿಸಿ ದೇವಸ್ಥಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ಈಗ ದೇವಸ್ಥಾನದಲ್ಲಿ ಪೌಳಿ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತುಕೊಂಡಿದ್ದಾರೆ. ಶಾಸಕ ಕೆ.ಶಿವನಗೌಡ ನಾಯಕರ ಇಚ್ಛಾಸಕ್ತಿ ಮೇರೆಗೆ ದೇವಸ್ಥಾನದ ಅಭಿವೃದ್ಧಿ ಮಂಡಳಿ ಹಾಗೂ ಶಾಸಕರ ವಿಶೇಷ ಅನುದಾನದಲ್ಲಿ ಸುಮಾರು ೧ ಕೋಟಿ ೩೦ ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿದ್ದಾರೆ. ವಾಡಿಕೆ ಪ್ರಕಾರ ದೇವಸ್ಥಾನದ ಅರ್ಧ ಭಾಗದ ಪೌಳಿಯನ್ನು ಜಾಲಹಳ್ಳಿ ಭಾಗದವರು ನಿರ್ಮಿಸಿಕೊಡಬೇಕೆಂಬುದಾಗಿದ್ದು, ಇನ್ನುಳಿದ ಅರ್ಧ ಭಾಗವನ್ನು ಅರಕೇರಾದವರು ಮಾಡಬೇಕೆಂಬುದಾಗಿದೆ. ಜಾಲಹಳ್ಳಿ ಭಾಗದವರು ಸುಮಾರು ೨೦೦ ವರ್ಷಗಳ ಹಿಂದೆಯೇ ಅದನ್ನು ಪೂರ್ಣಗೊಳಿಸಿದ್ದಾರೆ. ಹೀಗಾಗಿ ಅರಕೇರಾ ಭಾಗದವರು ನಿರ್ಮಿಸಬೇಕಾದ ಉಳಿದ ಪೌಳಿ ನಿರ್ಮಾಣದ ಕಾಮಗಾರಿಯನ್ನು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರು ಕೈಗೆತ್ತುಕೊಂಡಿದ್ದಾರೆ.
“ಸಹಸ್ರರಾರು ಭಕ್ತಾಧಿಗಳಿಗೆ ಬೇಡಿದ ಇಷ್ಟಾರ್ಥಗಳನ್ನು ಕಲ್ಪಿಸುವ ಪುಣ್ಯ ಕ್ಷೇತ್ರವಾದ ಮುಂಡರಗಿ ಗ್ರಾಮದ ಶ್ರೀಶಿವರಾಯ ದೇವಸ್ಥಾನದ ಅಭಿವೃದ್ಧಿಯ ಕನಸ್ಸನ್ನು ಹೊತ್ತುಕೊಂಡಿರುವ ನಮ್ಮ ನೆಚ್ಚಿನ ಶಾಸಕರಾದ ಕೆ,ಶಿವನಗೌಡನಾಯಕರವರ ಇಚ್ಚೆಯಂತೆ ೧ ಕೋಟಿ ೩೦ ಲಕ್ಷ ರೂ. ವೆಚ್ಚದಲ್ಲಿ ಪೌಳಿ ನಿರ್ಮಾಣದ ಕಾಮಗಾರಿಯನ್ನು ಕೈಗೆತ್ತುಕೊಂಡಿದ್ದು. ಶ್ರೀಘ್ರದಲ್ಲಿ ಕಾಮಗಾರಿಯು ಪ್ರಾರಂಭವಾಗಲಿದೆ.”

                          ಸಿದ್ದಣ್ಣದೊಂಡಬಳ್ಳಿ ಬಿ.ಗಣೇಕಲ್