ಐತಿಹಾಸಿಕ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಲೋಕಾರ್ಪಣೆ ಪಂಚಮಸಾಲಿ 2ಎ ಮೀಸಲಾತಿ ತಾಲೂಕು ಸಮಾವೇಶ

ಯಡ್ರಾಮಿ:ಫೆ.11:ತಾಲೂಕಿನ ಕುಳಗೇರಿ ಗ್ರಾಮದಲ್ಲಿ ರಾಷ್ಟಮಾತೆ ಕಿತ್ತೂರು ರಾಣಿ ಚನ್ನಮ್ಮನವರ ಐತಿಹಾಸಿಕ ಮೂರ್ತಿ ಲೋಕಾರ್ಪಣೆ ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಸಮಾವೇಶ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಯಡ್ರಾಮಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಮದ್ಯಾನ ಮಲ್ಲನಗೌಡ ಕುಳಗೇರಿ ಮಾಜಿ ತಾಲೂಕು ಪಂಚಾಯತಿ ಸದಸ್ಯರು ಹಾಗೂ ಬಾಪುಗೌಡ ಪಾಟೀಲ ಅವರು ಪತ್ರಿಕಾಗೋಷ್ಠಿ ಮೂಲಕ ಮಾತನಾಡಿ.

ಕುಳಗೇರಿ ಗ್ರಾಮದಲ್ಲಿ ಫೆ:18 ರಂದು ರವಿವಾರ ಪೂಜ್ಯ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ಕುಡಲಸಂಗಮ ಅವರ ದಿವ್ಯ ಸಾನಿದ್ಯದಲ್ಲಿ ರಾಷ್ಟಮಾತೆ ಕಿತ್ತೂರು ರಾಣಿ ಚನ್ನಮ್ಮಾಜೀಯವರ ಭವ್ಯವಾದ ಮೂರ್ತಿ ಅನಾವರಣ.

ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹಕ್ಕೋತ್ತಾಯಿಸಿ ಯಡ್ರಾಮಿ ಹಾಗೂ ಜೇವರ್ಗಿ ಅವಳಿ ತಾಲೂಕಿನ ಪ್ರಥಮ ಸಮಾವೇಶವನ್ನು ಅತೀ ಅದ್ದೂರಿಯಾಗಿ ಆಯೋಜನೆ ಮಾಡಲಾಗಿದ್ದು.

ಬಸನಗೌಡ ಪಾಟೀಲ ಯತ್ನಾಳ ಲಿಂಗಾಯತ ಪಂಚಮಸಾಲಿ ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ವಿಜಯಪುರ ನಗರ ಶಾಸಕರು ಕೇಂದ್ರದ ಮಾಜಿ ಸಚಿವರು ಕಿತ್ತೂರು ರಾಣಿ ಚನ್ನಮ್ಮನವರ ಮೂರ್ತಿ ಅನಾವರಣ ಮಾಡುವರು.

ಡಾ.ವಿಜಯಾನಂದ ಎಸ್ ಕಾಶಪ್ಪನವರ ರಾಷ್ಟ್ರೀಯ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಅಧ್ಯಕ್ಷರು ಹಾಗೂ ಹುನಗುಂದ ಶಾಸಕರು ವೇದಿಕೆ ಉದ್ಘಾಟನೆ.

ಶಿವಾನಂದ ಪಾಟೀಲ ಸಕ್ಕರೆ ಮತ್ತು ಜವಳಿ ಖಾತೆ ಸಚಿವರು ಬೆಂಗಳೂರು ಹಾಗೂ ಲಕ್ಷ್ಮೀ.ಆರ್.ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರು ಬೆಂಗಳೂರು ಜ್ಯೋತಿ ಬೆಳಗಿಸುವರು.

ಡಾ.ಅಜಯಸಿಂಗ್ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರು ಧ್ವಜಾರೋಣ ನೆರವೇರಿಸುವರು.

ಈ ಕಾರ್ಯಕ್ರಮದಲ್ಲಿ ನಾಡಿನ ಮಾಜಿ ಕೇಂದ್ರದ ಸಚಿವರು ಹಾಗೂ ರಾಜ್ಯ ಸಚಿವರು ಮತ್ತು ಶಾಸಕರು ಪಂಚಮಸಾಲಿ ಲಿಂಗಾಯತ ರಾಷ್ಟ್ರೀಯ ಅಧ್ಯಕ್ಷರು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಭಾಗವಹಿಸಲಿದ್ದು.

ಈ ಚನ್ನಮ್ಮ ಮೂರ್ತಿ ಅನಾವರಣ ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹಕ್ಕೋತ್ತಾಯ ಸಮಾವೇಶದಲ್ಲಿ ನಾಡಿನ ಲಿಂಗಾಯತ ಸಮಾಜನ ಮುಖಂಡರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದರು.