ಐತಿಹಾಸಿಕ ಕಲ್ಲಾನೆ ಸೌಂದರೀಕರಣಕ್ಕೆ ಮುನಿರ್ ರೆಡ್ಡಿ ಆಗ್ರಹ

ರಾಯಚೂರು, ಜೂ.೧೦-ರಾಯಚೂರಿನ ಐತಿಹಾಸಿಕ ಕಲ್ಲಾನೆ ಚರಂಡಿಯ ನೀರು, ಮಳೆ ನೀರು ಹೋಗಿ ಹಾಳಾಗುತ್ತಿದ್ದು ಕೂಡಲೇ ಸೌಂದರೀಕರಣ ಗೊಳಿಸಬೇಕು ಎಂದು ಲೋಕಜನಶಕ್ತಿ ಪಾರ್ಟಿಯ ನಗರ ಅಧ್ಯಕ್ಷ ಬಂಗಿ ಮುನಿರೆಡ್ಡಿ ಒತ್ತಾಯಿಸಿದರು.
ನಗರಸಭೆ ಸಾಮಾನ್ಯ ಸಭೆಗಳಲ್ಲಿ ಲಕ್ಷ ಗಟ್ಟಲೆ ಅನುದಾನ ಬಿಡುಗಡೆ ಮಾಡುತ್ತಿದ್ದು, ಐತಿಹಾಸಿಕ ಕಲ್ಲಾನೆ ದುರಸ್ತಿಗೊಳಿಸುವ ಕೆಲಸವಾಗಿಲ್ಲ. ಕಲ್ಲಾನೆ ಈಗ ಅವನತಿಯತ್ತ ಸಾಗುತ್ತಿದೆ ಒಂದು ಕಾಲದಲ್ಲಿ ಆಕರ್ಷಕವಾಗಿ ರಾಜಾಜಿ ಸುತ್ತಿದೆ. ನಗರದ ಹೃದಯ ಭಾಗದ ತಿನ ಕಂದಿಲ್ ಬಳಿ ಕಲ್ಲಾನೆ ತನ್ನದೇ ಆದ ಮಹತ್ವ ಪಡೆದಿದ್ದು. ಇದೇ ಕಾರಣಕ್ಕೆ ನಗರಸಭೆ ಲಾಂಛನವಾಗಿ ಬಳಸಿಕೊಂಡಿದೆ. ಸರಿಯಾಗಿ ನಿರ್ವಹಣೆ ಆಗದೆ ಇಲ್ಲಿ ನೀರು ನಿಂತಿದೆ.
ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೆ ಕಲ್ಲಾನೆಯ ಸುತ್ತಮುತ್ತ ನೀರು ನಿಲ್ಲುವಂತಾಗಿದೆ. ಕಲಾನೆ ಜೀರ್ಣೋದ್ದಾರಕ್ಕಾಗಿ ನಗರಸಭೆ ಮೀಸಲಿಟ್ಟಿದ್ದು ಹಣ ಇದುವರೆಗೆ ಕೆಲಸ ಕೈಗೊಂಡಿಲ್ಲ.ಸುತ್ತ ಉದ್ಯಾವನ ನಿರ್ಮಿಸಿ ವಿದ್ಯುದ್ದೀಪ ಹಾಕಿ ಅದರ ಸೌಂದರೀಕರಣ ಮಾಡಬೇಕು ಎಂದು ಒತ್ತಾಯಿಸಿದರು.