
ಕೋಲಾರ,ಮಾ. ೨- ಭಾರತೀಯ ದಂತ ವೈದ್ಯಕೀಯ ಸಂಘ (ಐ.ಡಿ.ಎ) ಕೋಲಾರ ಜಿಲ್ಲಾ ಘಟಕದ ಪ್ರಾರಂಭೋತ್ಸವ ಸಮಾರಂಭವು ನಗರದ ಸಾಯಿಧಾಮ್ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನೆರವೇರಿತು.
ಭಾರತೀಯ ದಂತ ವೈದ್ಯಕೀಯ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ರಾಮ್ ಮೂರ್ತಿ ಟಿ.ಕೆ, ಕಾರ್ಯದರ್ಶಿ ಡಾ.ಮಹೇಶ್‌ಚಂದ್ರ ಕೆ ಅವರ ಉಪಸ್ಥಿತಿಯಲ್ಲಿ ಹಾಗೂ ಕರ್ನಾಟಕ ರಾಜ್ಯ ದಂತ ಪರಿಷತ್ ಅಧ್ಯಕ್ಷ ರಂಗನಾಥ್ ವಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.ಕೋಲಾರ ಜಿಲ್ಲಾ ಐಡಿಎ ಘಟಕದ ನೂತನ ಅಧ್ಯಕ್ಷರಾಗಿ ಡಾ. ನಂದ ಕುಮಾರ್ ಎಂ, ಕಾರ್ಯದರ್ಶಿಯಾಗಿ ಡಾ.ಜನಾರ್ಧನ್ ಬಿ.ಎನ್, ಖಜಾಂಚಿಯಾಗಿ,ಡಾ. ವಿಕ್ರಾಂತ್ ಸಿ.ಎಸ್ ಮತ್ತು ಮುಂದಿನ ಅವಧಿಗೆ ಚುನಾಯಿತ ಅಧ್ಯಕ್ಷರಾಗಿ ಡಾ. ವೇಣುಗೋಪಾಲ್ ಜಿ.ಎಸ್ ಪದಗ್ರಹಣ ಮಾಡಿದರು. ಮುಂದುವರೆದ ದಂತ ವೈಜ್ಞಾನಿಕ ಕಲಿಕಾ ಕಾರ್ಯಕ್ರಮವನ್ನು ಎಸ್‌ಡಿಯುಎಂಸಿ ಮತ್ತು ಜಾಲಪ್ಪ ಆಸ್ಪತ್ರೆಯ ಪ್ರಾಧ್ಯಾಪಕ ಡಾ. ರಾಘವೇಂದ್ರ ಪ್ರಸಾದ್ ಹಾಗೂ ಡಾ.ದೀಪಿಕಾ ಕೆಂಕೆರೆ ನಡೆಸಿಕೊಟ್ಟರು. ಉಸ್ತುವಾರಿಯನ್ನು ಸಿಡಿಇ ಕನ್ವೀನರ್ ಡಾ. ಮಂಜುನಾಥ್ ವಿ ಡಾ. ಮಾಜ್, ಡಾ. ಸೇಂದಿಲ್ ಕುಮಾರ್ ಮತ್ತು ಡಾ. ರೇವತಿ ನಿರ್ವಹಿಸಿದರು.ರಾಜ್ಯ ಘಟಕದ ಅಧ್ಯಕ್ಷ ಡಾ.ರಾಮಮೂರ್ತಿ ಟಿ.ಕೆ ಮಾತನಾಡಿ. ನೂತನ ಘಟಕದ ಪದಾಧಿಕಾರಿಗಳಿಗೆ ರಾಜ್ಯದಿಂದ ಏನೆಲ್ಲಾ ಸಹಕಾರ ಸಿಗಲಿದೆ ಎಂದು ಸಭೆಗೆ ವಿವರಿಸಿ ಸಂಘವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಕೋರಿದರು.
ನೂತನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ನಂದಕುಮಾರ್ ರಾಜ್ಯ ಘಟಕದ ಕಾರ್ಯದರ್ಶಿ ಡಾ ಮಹೇಶ್ ಚಂದ್ರ ಎಂ ಮತ್ತು ಕಾರ್ಯದರ್ಶಿ ಡಾ.ಜನಾರ್ಧನ್
ರಾಜ್ಯ ಘಟಕದ ಉಪಾಧ್ಯಕ್ಷ ಡಾ.ಎಂ.ಜಿ.ಎಸ್ ಪ್ರಸಾದ್ ರಾಜ್ಯ ಘಟಕದ ಖಚಾಂಚಿ ಡಾ. ದಯಾಕರ್ ಹಾಜರಿದ್ದರು.ಮುಳಬಾಗಿಲು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ದಂತ ಆರೋಗ್ಯಾಧಿಕಾರಿ ಡಾ.ವೇಣುಗೋಪಾಲ್ ಜಿ.ಎಸ್ ಮಾಲೂರಿನ ಡಾ. ಶಂಕರ್ ಡಾ. ಶಿವಕುಮಾರ್ ಇದ್ದರು.