ಐಟಿಐ ಶಿಕ್ಷಣ ಸ್ವಾವಲಂಬಿ ಮರುಕ್ಷಣ: ಪ್ರಭು ಬಿ ಚವ್ಹಾಣ

ಬೀದರ:ಅ.14:ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಅನಿವಾರ್ಯ. ಉದ್ಯೋಗ ಮಾನವ ಲಕ್ಷಣ. ಅನೇಕ ಶೈಕ್ಷಣಿಕ ವ್ಯವಸ್ಥೆ ಮಧ್ಯೆ ಐಟಿಐ ಯುವಕರ ಬಾಳಿಗೆ ಭವಿಷ್ಯ ರೂಪಿಸುವುದಾಗಿದೆ. ಐಟಿಐ ಶಿಕ್ಷಣ ಸ್ವಾವಲಂಬಿ ಮರುಕ್ಷಣ ಎಂದು ಔರಾದ ಶಾಸಕರಾದ ಶ್ರೀ ಪ್ರಭು ಬಿ ಚವ್ಹಾಣ ನುಡಿದರು.

ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2023 ನೇ ಸಾಲಿನ ಕುಶಲಕರ್ಮಿಗಳ ಘಟಿಕೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಚಾಲನೆ ನೀಡಿದ ಶಾಸಕರು ಮುಂದುವರೆದು. ಇಡೀ ಕಲ್ಯಾಣ ಕರ್ನಾಟಕದಲ್ಲಿ ನಮ್ಮ ಗಡಿ ಭಾಗದ ಐಟಿಐ ಯಂತ್ರೋಪಕರಣ, ಕಟ್ಟಡ, ಸಿಬ್ಬಂದಿಗಳೊಂದಿಗೆ ಸಂಪನ್ಮೂಲತೆ ಹೊಂದಿದೆ. ಇಂದು ಇದು ಡಿಜಿಟಲ್ ಸಂಸ್ಥೆಯಾಗಿ ಹೊರ ಹೊಮ್ಮಿದೆ. ಈ ಭಾಗದ ಬಡ ಮಕ್ಕಳ ಸಮಗ್ರ ಅಭಿವೃದ್ದಿಗಾಗಿ ಸಂಸ್ಥೆಯಲ್ಲಿ ಎಲ್ಲವೂ ಉಚಿತ ಜೊತೆಗೆ ನೌಕರಿ ಖಚಿತ ಎಂದು ಮಾರ್ಮಿಕವಾಗಿ ನುಡಿದರು.
 ಮಕ್ಕಳು ಕೇವಲ ಕಲಿಯುವುದಕ್ಕೆ ಸೀಮಿತ ಬೇಡ, ಸಾಧನೆ ಮಾಡಬೇಕೆಂಬ ಛಲವಂತಿಕೆಯಿಂದ ಪ್ರಾಯೋಗಿಕ ಪಾಠ ಕರಗತ ಮಾಡಿಕೊಂಡಾಗ ಜೀವನ ಸಮೃದ್ದಿ. ಗಡಿಭಾಗದ ಮಕ್ಕಳ ಸಿಬಿಟಿ ಪರೀಕ್ಷಾ ಹಿತದೃಷ್ಟಿಯಿಂದ ಹಾಗೂ ಇತ್ತೀಚಿನ ತಂತ್ರಜ್ಞಾನದ ಪೂರಕ ಶಿಕ್ಷಣಕ್ಕಾಗಿ ಮೂವತ್ತು ಗಣಕಯಂತ್ರ, ಅದರ ಪರಿಕರಗಳು ಸದ್ಯದಲ್ಲೆ ನಿಮ್ಮ ಸಂಸ್ಥೆಗೆ ಬರುತ್ತಿದ್ದು, ಸಂರಕ್ಷಣೆ ಹಿತದೃಷ್ಟಿಯಿಂದ ಒಂದುವರೆ ಎಕರೆ ಜಮೀನಿಗೆ ಕಂಪೌಂಡ ಕಾಮಗಾರಿಗೆ ಅನುದಾನ ಕೊಡಮಾಡಲಾಗುತ್ತಿದೆ, ಜೊತೆಗೆ ಇದು ಅಲ್ಲದೆ ಐಟಿಐ ಸಂಪನ್ಮೂಲ ಕ್ರೋಢಿಕರಕ್ಕಾಗಿ ನನ್ನ ಅನುದಾನ ದಲ್ಲಿ ರೂ. ಮೂವತ್ತು ಲಕ್ಷ ಮೀಸಲಿಡಲಾಗಿದೆ.  ತಕ್ಷಣ ಪ್ರಸ್ತಾವನೆ ಸಲ್ಲಿಸಲು ಪ್ರಾಚಾರ್ಯರಿಗೆ ಆದೇಶಿಸಿದರು.
 ಇಂದು ಮೂರು ವರ್ಷಗಳಿಂದ ಐಟಿಐ ಸಮಗ್ರ ಅಭಿವೃದ್ಧಿಗೊಂಡಿದ್ದು ಅರಿತು ನಾನು ಸಂತಸಗೊಂಡಿದ್ದೇನೆ. ಕಲಿತ ಅನೇಕ ಮಕ್ಕಳು ಜೀವನದ ಭವಿಷ್ಯ ರೂಪಿಸಿಕೊಂಡರೆ ನಮ್ಮ ಔರಾದ ಅಭಿವೃದ್ಧಿ. ತಾಲೂಕಿನ ಸಮಗ್ರ ಶೈಕ್ಷಣಿಕ ಅಭಿವೃದ್ಧಿ ಕನಸನ್ನು ಕಂಡು ನನಸಿನ ಪಯಣದತ್ತ ಸಾಗಿಸಲು ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಉದ್ಘಾಟನೆಯ ಮಾತನಾಡಿ ಸಂಸ್ಥೆಯಲ್ಲಿ ಪಾಸಾದ 45 ರಲ್ಲಿ 42 ವಿವಿಧ ವೃತ್ತಿಯ ಕುಶಲಕರ್ಮಿಗಳಿಗೆ ಶಾಲು ನೆನಪಿನ ಕಾಣಿಕೆ ಎನ್.ಟಿ.ಸಿ ಪ್ರಮಾಣ ಪತ್ರ ನೀಡಿ ಶಾಸಕರು ಅಭಿಮಾನದಿಂದ ಗೌರವಿಸಿದರು. ಇದೆ ಸಂದರ್ಭದಲ್ಲಿ ಮಾಜಿ ಯೋಧರಾದ ದಿಲೀಪಕುಮಾರ ಸಿದ್ದೇಶ್ವರೆ ಹಾಗೂ ತಂತ್ರ ಜ್ಞಾನದಲ್ಲಿ ಡಾಕ್ಟರೇಟ್ ಪಡೆದ ಪಾಲಿಟೆಕ್ನಿಕ್ ಉಪನ್ಯಾಸಕರಾದ ಡಾ. ಸಂಜೀವ ಕುಮಾರ ಅವರಿಗೆ ಶಾಸಕರು ವಿಶೇಷವಾಗಿ ಸನ್ಮಾನಿಸಿದರು.
 ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಗಮಿಸಿದ ಮಲ್ಲಿಕಾರ್ಜುನ ಟಂಕಸಾಲೆ... ಮಕ್ಕಳು ಶಿಕ್ಷಕರು ಸೇರಿ ಕೆಲಸ ನಿರ್ವಹಣೆ ಮಾಡಿದರೆ ಏನೆಂಬುದು ಈ ಸರಕಾರಿ ಐಟಿಐನಿಂದ ಕಲಿಯಬಹುದಾಗಿದೆ. ಇಲ್ಲಿ ಎಲ್ಲ ಮನಸ್ಸುಗಳು ಒಂದೆಡೆ ಸೇರಿ ಕೌಶಲ್ಯ ಕ್ರಾಂತಿ ಮಾಡುತ್ತಿವೆ ಜೊತೆಗೆ ಇವರಿಗೆ ಬೇಡಿದ್ದು ಸಿಕ್ಕಿದೆ, ಇದನ್ನು ನೋಡಲು ಕಣ್ಣುಗಳು ಸಾಲದು. ನಾನೇಕೆ ಇಲ್ಲಿ ಪ್ರವೇಶ ಪಡೆದು ಕೊಳ್ಳಬಾರದೆಂದು ಭಾವನೆ, ಇಲ್ಲಿಯ ಡಿಜಿಟಲ್ ನೋಡಿ ಮನ ಮಿಡಿಯುತ್ತಿದೆ. ತಾವ್ಯಾರು ಕಾಟಾಚಾರಕ್ಕೆ ಕೌಶಲ್ಯ ಕಲಿಯಬೇಡಿ. ಇಲ್ಲಿ ಕಲಿತರೆ ಜೀವನ ಬಲು ಸುಂದರ ಹಾಗೂ ಮಧುರ ಎಂಬುದು ನೀವು ಅರಿಯಿರಿ. ಎಲ್ಲ ಕಡೆ ಯಂತ್ರೋಪರಣ ಇರುವುದು ಮಾಡಲ್ ಗಾಗಿ  ಸಹಜ, ಆದರೆ ಇಲ್ಲಿ ಪ್ರತಿಯೊಂದು ಇತ್ತೀಚಿನ ಹೊಸ ಯಂತ್ರೋಪಕರಣಗಳು ಸುಸ್ಥಿಯಲ್ಲಿದ್ದು ದಿನನಿತ್ಯ ಕೌಶಲ್ಯ ಕಲಿಯುವಿಕೆಗೆ ಬಳಕೆಯಾಗುತ್ತಿರುವುದು ಒಂದು ವಿಸ್ಮಯ ಎಂದು ತುಂಬಾ ಭಾವುಕರಾಗಿ ಮಾತನಾಡಿ,  ಇಲ್ಲಿಯ ಎಲ್ಲ ಸಿಬ್ಬಂದಿಗಳು ಔರಾದನವರಾಗಿದ್ದು ಒಂದು ಅಭಿಮಾನ. ಇದರ ಸಮಗ್ರ ಅಭಿವೃದ್ಧಿ ನಮ್ಮೆಲ್ಲರ ಕೈಯಲ್ಲಿದೆ. ಇಲ್ಲಿ ಶಿಕ್ಷಣ, ಊಟ, ವಸತಿ ಎಲ್ಲವೂ ಉಚಿತ ಪಾಸಾದ ಮೇಲೆ ನೌಕರಿ ನಿಮ್ಮ ಮನೆ ಬಾಗಿಲಿಗೆ ಮುಂದುವರೆದು ನಮ್ಮ ಕಷ್ಟಕ್ಕೆ ಶಾಸಕರು ಬೆನ್ನಿಗೆ, ಇಂಥ ಅಪರೂಪದ ಲಾಭವನ್ನು ಎಲ್ಲರು ಪಡೆದು ಧನ್ಯರಾಗಲು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸರಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರಾದ ಶೈಲಜಾ ಮುಖ್ಯ ಅತಿಥಿಗಳಾಗಿ... ಔರಾದ ಸರಕಾರಿ ಐಟಿಐ ನೋಡಿ ಮಾತು ಮೌನವಾಗಿದೆ,ಗಡಿ ಭಾಗದಲ್ಲಿ ಇμÉ್ಟಲ್ಲ ಸವಲತ್ತು ಒಳಗೊಂಡಿರುವುದು ನಿಜವಾಗಿ ಆಶ್ಚರ್ಯ ಚಕಿತಳಾಗಿರುವೆನು. ಡಿಜಿಟಲ್ ರೂಮ್, ರೊಬೊಟಿಕ್, ಸಿಎನ್‍ಸಿ, ಇತ್ತೀಚಿನ ವರ್ಷನ್ ಗಣಕಯಂತ್ರ ಜೊತೆಗೆ ಅನುಭವಿ ಹಾಗೂ ಕ್ರಿಯಾಶೀಲ ಸಿಬ್ಬಂದಿಗಳಿದ್ದಾರೆ. ಇಲ್ಲಿಯ ಮಕ್ಕಳು ಪುಣ್ಯ ಮಾಡಿದ್ದಾರೆ. ಜೊತೆಗೆ ಪಕ್ಕದಲ್ಲಿ ಸರಕಾರಿ ಹಾಸ್ಟೆಲ್ ಇದೆ. ಹೀಗಾಗಿ ನಮ್ಮ ಮಕ್ಕಳ ಅಲ್ಪಾವಧಿಯ ಕೋರ್ಸಿಗಾಗಿ ಒಡಂಬಡಿಕೆ ಮಾಡಿಕೊಂಡು ಮುಂದೆ ತಂತ್ರಜ್ಞಾನ ಕಲಿಸಲು ಯೋಜನೆ ರೂಪಿಸುವೆನೆಂದು ತಮ್ಮ ವಿಚಾರ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸಂಸ್ಥೆಯ ಪ್ರಭಾರೆ ಪ್ರಾಚಾರ್ಯರಾದ ಯುಸೂಫಮಿಯ್ಯ ಜೋಜನಾ ಮಾತನಾಡಿ ನಮ್ಮಲ್ಲಿ ಸ್ವಲ್ಪ ನೀರಿನ ಕೊರತೆ, ಡ್ಯುವೆಲ್ ಡೆಸ್ಕ್ ಹಾಗೂ ಸುರಕ್ಷತೆಗಾಗಿ ಕಾಂಪೌಂಡ್ ವ್ಯವಸ್ಥೆ  ಮನವಿ ಸಲ್ಲಿಸಿದರು. ಮಾನ್ಯ ಶಾಸಕರ ಸದಾಶಯದಂತೆ ಇಂದು ನಮ್ಮಲ್ಲಿ 50 ಮಕ್ಕಳು ಪರೀಕ್ಷೆ ಬರೆದಿದ್ದು ಅದರಲ್ಲಿ 45 ಕುಶಲಕರ್ಮಿಗಳು ಉತ್ತೀರ್ಣರಾಗಿದ್ದು, ಅವರೆಲ್ಲರಿಗೆ ಈಗಾಗಲೇ ವಿವಿಧ ಕಂಪನಿಗಳಲ್ಲಿ ಶಿಶುಕ್ಷು ತರಬೇತಿಗಾಗಿ ಅವಕಾಶ ಕಲ್ಪಿಸಲಾಗಿದೆ.  ನಮ್ಮಲ್ಲಿ ಅನೇಕ ಸವಲತ್ತುಗಳಿದ್ದು ವಿವಿಧ ರೀತಿಯ ಅಲ್ಪಾವಧಿಯ ಕೋರ್ಸ್‍ಗಳಿಗೆ ವರ್ಕಶಾಪ ಸನ್ನದ್ದುಗೊಂಡಿದೆ ಸಾರ್ವಜನಿಕರು ಉಪಯೋಗ ಪಡೆದುಕೊಂಡರೆ ಹಿಂದುಳಿದ  ಭಾಗ ಎಂಬ ಹಣೆ ಪಟ್ಟಿ ಹೋಗಲಾಡಿಸಬಹುದೆಂದರು.
ವೇದಿಕೆ ಮೇಲೆ ಹಿರಿಯರಾದ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಆಶೋಕ ಅಲ್ಮಾಜೆ, ಶ್ರೀನಿವಾಸ ಖೂಬಾ, ಉಪನ್ಯಾಸಕ ಹಣಮಂತ ಕಾಳೆ, ಲಕ್ಷ್ಮಣ, ಗಂಗರಾಮ ಕಿ.ತ.ಅ. ರವರು ಹಾಗೂ ಸಂಸ್ಥೆಯ ಕಛೇರಿ ಅಧೀಕ್ಷರಾದ ಸುದರ್ಶನಕುಮಾರ ಮಂಗಲಗಿಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು. ಧನರಾಜ ಸ್ವಾಮಿ ಸ್ವಾಗತಿಸಿದರೆ, ಹುಲಸೂರೆ ಚಂದ್ರಕಾಂತ ನಿರೂಪಣೆ ಮಾಡಿದರೆ, ಮರಕಲೆ ಸಂಗಮೇಶ ವಂದಿಸಿದರು.