
ಕಲಬುರಗಿ:ಎ.11:ಎಸ್ಸೆಸ್ಸೆಲ್ಸಿ ಬಳಿಕ ಪಿಯುಸಿ ಓದುವುದಕ್ಕಿಂತ ಐಟಿಐ, ಪಾಲಿಟೆಕ್ನಿಕ್ ಓದುವುದರಿಂದ ಹೆಚ್ಚಿನ ಉದ್ಯೋಗ ಅವಕಾಶಗಳು ಸಿಗುತ್ತವೆ ಎಂದು ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ ಉದ್ಯೋಗ ಮತ್ತು ತರಬೇತಿ ಅಧಿಕಾರಿ ಪ್ರೋ.ವಿಜಯಕುಮಾರ್ ಎಸ್ ಮಾಲಗಿತ್ತಿ ಹೇಳಿದರು.
ಅವರು ಉಪನ್ಯಾಸಕ,ಚಿಂತಕ ದೇವಿಂದ್ರಪ್ಪ ವಿಶ್ವಕರ್ಮ ಅವರು ನಡೆಸಿದ ವಿಶೇಷ ಆನ್‍ಲೈನ್ ಸಂದರ್ಶನದಲ್ಲಿ ಮಾತನಾಡುತ್ತಾ ಇಂಜಿನಿಯರಿಂಗ್ ಓದುವ ಆಸಕ್ತಿ ಇರುವವರೆಲ್ಲರೂ ಪಿಯುಸಿಯೊಂದಕ್ಕೆ ಮುಗಿಬೀಳುತ್ತಾರೆ. ಮಾಹಿತಿ ಕೊರತೆಯಿಂದಾಗಿ ಎಷ್ಡೋ ವಿದ್ಯಾರ್ಥಿಗಳಿಗೆ ಪಾಲಿಟೆÉಕ್ನಿಕ್ ಮೂಲಕವೂ ಇಂಜಿನಿಯರಿಂಗ್ ಸೇರಬಹುದು ಎನ್ನುವುದು ಗೊತ್ತಿರುವುದಿಲ.್ಲ ವಾಸ್ತವವಾಗಿ, ಪಾಲಿಟೆಕ್ನಿಕ್‍ನಲ್ಲಿ ಪಿಯುಸಿಗಿಂತ ಹೆಚ್ಚು ಪ್ರಾಯೋಗಿಕ ಜಾÐನಕ್ಕೆ ಒತ್ತು ಕೊಟ್ಟು ಕಲಿಸಲಾಗುತ್ತದೆ. ಹೀಗಾಗಿ ಇಂಜಿನಿಯರಿಂಗ್ ಓದುವ ಆಕಾಂಕ್ಷೆ ಇರುವವರು ಎಸ್ಸೆಸ್ಸೆಲ್ಸಿ ಆದ ಮೇಲೆ ಪಾಲಿಟೆಕ್ನಿಕ್ ಸೇರಿ ಕೌಶಲ್ಯ ಪಡೆಯಬಹುದು ನಂತರ ಉದ್ಯೋಗಕ್ಕೆ ಬೇಕಾದರೆ ಹೋಗಬಹುದು. ಇಲ್ಲವೆ ಪಾಲಿಟೆಕ್ನಿಕ್ ಮೂಲಕವೆ ಇಂಜಿನಿಯರಿಂಗ್ ಸೇರಬಹುದು ಎಂದು ಹೇಳಿದರು.