ಐಟಿಐ ಪರೀಕ್ಷೆಗಾಗಿ ಮೊಕ್ ಟೆಸ್ಟ ಕಾರ್ಯಾಗಾರ

ಬೀದರ:ಜ.8:ಐಟಿಐ ತರಬೇತಿದಾರರ ಕೌಶಲ್ಯ ಪ್ರಾವೀಣ್ಯತೆ ಬೆಳೆÀಸಲು ಕೈಗಾಗಿಕಾ ತರಬೇತಿ & ಉದ್ಯೋಗ ಇಲಾಖೆ ಅನೇಕ ಯೋಜನೆಗಳು ರೂಪಿಸಿದೆ. ಇಂದಿನ ದಿನಗಳಲ್ಲಿ ಕೌಶಲ್ಯಕ್ಕೆ ಎಲ್ಲಿಲ್ಲದ ಬೇಡಿಕೆ ಇದ್ದು, ತರಬೇತಿದಾರರನ್ನು ಸನ್ನದ್ದುಗೊಳಿಸಲು ಮೊಕ್ ಟೆಸ್ಟ ಅನಿವಾರ್ಯ ಎಂದು ಬೀದರ ಜಿಲ್ಲಾ ಐಟಿಐ ನೋಡಲ್ ಅಧಿಕಾರಿಗಳಾದ ಶಿವಶಂಕರ ಟೋಕರೆ ನುಡಿದರು
ಪಟ್ಟಣÀದ ಮುಂಗನಾಳ ರಸ್ತೆಯಲ್ಲಿಯ ಹೊಸ ಸರಕಾರಿ ಐಟಿಐ ಕಟ್ಟದಲ್ಲಿ ಸಿ.ಬಿ.ಟಿ.-ಮೊಕ್ ಟೆಸ್ಟ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತ ಈಗಾಗಲೇ ಐಟಿಐ ತರಬೇತಿದಾರರು ಪ್ರಾಯೋಗಿಕ ಪಾಠ / ವೃತ್ತಿ ತಾಂತ್ರಿಕ ರೇಖಾ ಚಿತ್ರ ಪರೀಕ್ಷೆ ಕೊಟ್ಟಿದ್ದಾರೆ. ಜನೆವರಿ ಮೂರನೇ ವಾರದಲ್ಲಿ ಆನ್ ಲೈನ್ ಕಂಪ್ಯೂಟರ ಆಧಾರತಿ ವೃತ್ತಿಸಿದ್ದಾಂತ, ಕಾರ್ಯಾಗಾರ ಲೆಕ್ಕ ವಿಜ್ಞಾನ ಪರೀಕ್ಷೆಗೋಸ್ಕರ ತಾಲೂಕಿನ ಎಲ್ಲಾ ಕಿರಿಯ ತರಬೇತಿ ಅಧಿಕಾರಿಗಳಿಗೆ ತರಬೇತಿದಾರರಿಗೆ ಮಾರ್ಗದರ್ಶನ ನೀಡಲು ಮೊಕ ಟೆಸ್ಟ ಕಾರ್ಯಾಗಾರ ಮಾಡುವುದು, ಪ್ರಸ್ತುತವಾಗಿದೆ. ಇದನ್ನು ತಾವು ಅರ್ಥೈಸಿಕೊಂಡು ನಿಮ್ಮ ನಿಮ್ಮ ಐಟಿಐ ತರಬೇತಿದಾರರಿಗೆ ತಿಳಿಸಿ ಪ್ರಾಕ್ಟೀಸ್ ಮಾಡಿಸಿದರೆ ಮುಂಬರುವ ದಿನಗಳಲ್ಲಿ ಅವರೆಲ್ಲರಿಗೆ ಅನೂಕೂಲ.
ಆಡಳಿತಾಧಿಕಾರಿಗಳಾದ ಅಸದುಲ್ಲ ಬೇಗ ಮಾತನಾಡಿ, ಇನ್ನು ಸಿ.ಬಿ.ಟಿ. ಪರೀಕ್ಷೆಗಾಗಿ ಪರೀಕ್ಷಾ ಶುಲ್ಕ ಪ್ರತ್ಯೇಕ ಆನ್ ಲೈನ್‍ನಲ್ಲಿ ಕಟ್ಟಬೇಕಾಗಿದೆ. ಇಲಾಖೆ ನಿರ್ದೇಶನ ನೀಡಿದ ನಂತರ ತಮಗೆ ತಿಳಿಸಿಲಾಗುವುದು. ಬಹುಶ 376=00 ಇರಬಹುದು ಎಂದು ಅಂದಾಜಿಸಲಾಗಿದೆ. ನಿಮ್ಮೆಲ್ಲ ತರಬೇತಿದಾರಿಗೆ ತಿಳಿಸಿ ತಯ್ಯಾರಿರುಲು ಸಲಹೆ ನೀಡಿದರು.
ಸ್ಥಳಿಯ ರೂರಲ್ ಐಟಿಐ ಪ್ರಾಚಾರ್ಯರಾದ ರಾಜಕುಮಾರ ಮಾಳಗೆ ಸಹ ಸಿ.ಬಿ.ಟಿ. ಪರೀಕ್ಷೆ ಅನೇಕ ತಾಂತ್ರಿಕ ಸಮಸ್ಯೆಗಳ ಬಗ್ಗೆ ಮಾಹಿತಿ ಕೇಳಿ ಸಮಸ್ಯೆ ಇತ್ಯರ್ಥ ಪಡಿಸಿಕೊಂಡರು. ಪಟ್ಟದೇವರ ಐಟಿಐ ಪ್ರಾಚಾರ್ಯರಾದ ಸತೀಶ ಗಂಧಿಗುಡಿ ಸಹ ಮಾತನಾಡಿದರು.
ಇಂಥ ಮೊಕ ಟೆಸ್ಟ ಸಂಪನ್ಮೂಲ ವ್ಯಕ್ತಿಗಳಾಗಿ ವಿನಾಯಕ ಗುರ್ಲಾ, ಬಾಲಾಜಿ ನಿಟ್ಟೂರೆ 30 ಜನ ಕಿರಿಯ ತರಬೇತಿ ಅಧಿಕಾರಿಗಳಿಗೆ ಪಾಠ ಮಾಡಿ ಅವರನ್ನು ಪರಿಪೂರ್ಣವನ್ನಾಗಿ ಮಾಡಿದರು.
ಕಾರ್ಯಾಗಾರದಲ್ಲಿ ಸರಕಾರಿ ಐಟಿಐ ಔರಾದ, ರೂರಲ ಐಟಿಐ ಔರಾದ, ಮುರ್ಕಿ ಐಟಿಐ, ಠಾಣಾಕುಶನೂರ ಐಟಿಐ, ವಿಶ್ವೇಶ್ವರಯ್ಯ ಐಟಿಐ ಕಮಲನಗರ ಸೇರಿದಂತೆ ಒಟ್ಟು 30 ಕಿರಿಯ ತರಬೇತಿ ಅಧಿಕಾರಿಗಳು ಒಂದು ದಿನದ ಕಾರ್ಯಗಾರದಲ್ಲಿ ಪಾಲ್ಗೊಂಡು ಲಾಭ ಪಡೆದರು.
ಮೋದಲಿಗೆ ಕಛೇರಿ ಅಧಿಕ್ಷಕರಾದ ಸತೀಶ ಬೆಳ್ಳೂರೆ ಸ್ವಾಗತಿಸಿದರೆ ಕಿರಿಯ ತರಬೇತಿ ಅಧಿಕಾರಿ ಚಂದ್ರಕಾಂತ ಹುಲಸೂರೆ ನಿರೂಪಿಸಿದರು. ದಯಾನಂದ ಬಂಬುಳಗೆ ವಂದಿಸಿದರು.