
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.26: ನಗರದ ರೇಡಿಯೊ ಪಾರ್ಕ್ ಬಳಿಯ ಐಟಿಐ ಕಾಲೇಜು ಮೈದಾನದಲ್ಲಿ ರೈನಬೋ ಎಕ್ಸಿಬಿಶನ್ ಆರಂಭಗೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಎಕ್ಸಿಬಿಶನ್ ಮಾಲೀಕ ಕಾರ್ಕಳದ ವಿಜಯ್ ವಿಲ್ಸ್ ನ್ ಮಕ್ಕಳ ಆಕರ್ಷಣೆಗೆ ವಾಟರ್ ಬೋಟ್, ಏರ್ ಬೆಲೂನ್, ಆಕರ್ಷಕ ಗೊರಿಲ್ಲ. 40 ಮಳಿಗೆಗಳಲ್ಲಿ ವಿವಿಧ ಕರಕುಶಲ ವಸ್ತುಗಳ ಮಾರಾಟ ಆಕರ್ಷಕ ಅರಮನೆಯ ಪ್ರವೇಶ ದ್ವಾರ, ಕೇರಳದ ಗಜಗಳ ಆಕೃತಿಗಳಿಂದ ಸ್ವಾಗತ, ವಿವಿಧ ಜಾತಿಯ 30 ಕ್ಕೂ ಹೆಚ್ಚು ಪಕ್ಷಿಗಳ ಆಕೃತಿಗಳು ಜೊತೆಗೆ ಅವುಗಳ ಧ್ವನಿ ಆಕರ್ಷಣೀಯವಾಗಿದೆ.
ಮಲ್ಲಿಗೆ ಇಡ್ಲಿ, ಪೊಟ್ಯಾಟೋ ಟ್ವಿಸ್ಟ್, ಮದ್ದೂರು ವಡೆ, ಊಟಿ ಮಿರ್ಚಿ ಸೇರಿದಂತೆ ವಿವಿಧ ಖಾದ್ಯದ ರುಚಿ ರುಚಿಯ ಆಹಾರ ಮೇಳ ಇದೆ. 15 ವಿವಧ ಅಮ್ಯೂಜ್ ಮೆಂಟ್ ಗೇಮ್ ಗಳಿವೆ, ನಾಲ್ಕು ವರ್ಷದ ಮೇಲಿನವರಿಗೆ ಪ್ರವೇಶ ಶುಲ್ಕ 70 ರೂ ನಿಗಧಿಪಡಿಸಿದೆ.
ಪ್ರದರ್ಶನಕ್ಕೆ ಎಲ್ಲಾ ರೀತಿಯ ಅನುಮತಿ ಪಡೆದಿದೆ.ಜೂನ್ 11 ರ ವರೆಗೆ ಅನುಮತಿ ಇದ್ದು ವಿಸ್ತರಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಲಿದೆಂದು ಜನತಾ ಬಜಾರ್ ಮಾಜಿ ಅಧ್ಯಕ್ಷ ವಿ.ಎಸ್.ಬಸವರಾಜ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ವ್ಯವಸ್ಥಾಪಕರಾದ ಅಮಿತ್,
ರಿಯಾಜ್ ಅಹಮ್ನದ್ ಮತ್ತು ವಿಜಯಾನಂದ್ ಮೊದಲಾದವರು ಇದ್ದರು.