ಐಜಿಪಿಯೊಂದಿಗೆ ಪೋಲೀಸ್ ಸಮವಸ್ತ್ರದಲ್ಲಿ ಮಿಂಚಿದ ಬಾಲಕಿ

ದಾವಣಗೆರೆ.ಜು.೧೫: ಖಾಕಿ ಸಮವಸ್ತ್ರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಫೋಟೋ ತೆಗೆಸಿಕೊಳ್ಳಬೇಕು ಎಂಬ ವಿಭಿನ್ನ ಸಾಮರ್ಥ್ಯವುಳ್ಳ ಬಾಲಕಿಯ ಆಸೆ ಈಡೇರಲು ದಾವಣಗೆರೆ ಪೊಲೀಸರು  ನೆರವಾಗಿದ್ದಾರೆ.ದಾವಣಗೆರೆಯ ಸಾಧನಾ ಎಂ. ಪಾಟೀಲ್ ಎಂಬ ವಿಭಿನ್ನ ಸಾಮರ್ಥ್ಯವುಳ್ಳ ಬಾಲಕಿಗೆ ಪೊಲೀಸ್ ಇಲಾಖೆ ಎಂದರೆ ಅತೀವ ಆಸಕ್ತಿ. ಖಾಕಿ ಸಮವಸ್ತ್ರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಫೋಟೋ ತೆಗೆಸಿಕೊಳ್ಳಬೇಕು ಎಂಬ ಕೋರಿಕೆ ಇತ್ತು. ತನ್ನ ತಾಯಿ ಬಳಿ ಅದನ್ನು ಹೇಳಿಕೊಂಡಿದ್ದರು.ಸಾಧನಾ ಪಾಟೀಲ್ ಅವರ ತಾಯಿ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಅವರನ್ನು ಸಂಪರ್ಕಿಸಿದಾಗ ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ. ಕೆ. ತ್ಯಾಗರಾಜನ್ ಅವರೊಟ್ಟಿಗೆಯೇ ಸಾಧನಾ ಪಾಟೀಲ್ ಆಸೆ ಪೂರೈಸುವ ವ್ಯವಸ್ಥೆ ಮಾಡಿದ್ದರು.ಅದರಂತೆ  ಸಾಧನಾ ಪಾಟೀಲ್ ಪೊಲೀಸ್ ಸಮವಸ್ತ್ರ ಧರಿಸಿ ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ಕೆ. ತ್ಯಾಗರಾಜನ್ ಅವರೊಂದಿಗೆ ಫೋಟೋ ತೆಗೆಸಿಕೊಂಡರು. ಸಾಧನಾ ಪಾಟೀಲ್ ತಾಯಿ, ಸಹೋದರಿ, ಕುಟುಂಬ ಸದಸ್ಯರು, ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಇತರರು ಇದ್ದರು.ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಸದಾ ಕರ್ತವ್ಯ ನಿರತವಾಗಿರುವ ಪೊಲೀಸರು ವಿಭಿನ್ನ ಸಾಮರ್ಥ್ಯವುಳ್ಳ ಬಾಲಕಿಯ ಆಸೆಯನ್ನು ಈಡೇರಿಸುವ ಮೂಲಕ ಮಾನವೀಯತೆ, ಅಂತಕರಣ ತೋರಿದರು.ಐಜಿಪಿಯೊಂದಿಗೆ ಪೋಲೀಸ್ ಸಮವಸ್ತ್ರದಲ್ಲಿ ಮಿಂಚಿದ ಬಾಲಕಿ