
ಬೆಂಗಳೂರು: ಪರಿಸರ ಮತ್ತು ಮರಗಳ ಸರಂಕ್ಷಣೆ ಹಾಗೂಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಐಕೇರ್ ಬ್ರಿಗೇಡ್ ಸಂಸ್ಥೆವತಿಯಿಂದ ಪ್ರಸಾದ್ ಮತ್ತು ಪೂರ್ಣಿಮಾ ಅವರ ನೇತೃತ್ವದಲ್ಲಿ ಫ್ರೀ ದಿ ಟ್ರೀ ಎಂಬ ಕಾರ್ಯಕ್ರಮದಡಿಯಲ್ಲಿ ಮೊಳೆ ಪೋಸ್ಟರ್ ಮುಕ್ತ ಅಭಿಯಾನ ನಡೆಸಲಾಯಿತು.
ನಗರದ ಇಂದಿರಾನಗರದಲ್ಲಿ ಆಯೋಜಿಸಿದ್ದ ಅಭಿಯಾನಕ್ಕೆ ಅಥಿತಿಗಳಾಗಿ ಕನ್ನಡ ಚಲನಚಿತ್ರ ಖ್ಯಾತ ನಟರಾದ ವಿಕ್ರಮ್ ಸೂರಿ, ನಮಿತಾ ರಾವ್ ದಂಪತಿಗಳು ಚಾಲನೆ ನೀಡಿದರು. ಅರಣ್ಯ ಇಲಾಖೆಯ ಡಿ.ಸಿ.ಎಫ್ ರಂಗಸ್ವಾಮಿ, ಆರ್.ಎಫ್ ಶಿವರಾಮ್,
ಸಂಸ್ಥೆಯ ಪದಾಧಿಕಾರಿ ಜೆ.ಶ್ರೀನಿವಾಸ್ ಸೇರಿಂದತೆ ಹಲವಾರು ಸಂಘ ಸಂಸ್ಥೆಗಳು, ಸ್ಥಳೀಯ ಹಿರಿಯ ನಾಗರೀಕರು, ಮಹಿಳೆಯರು, ಯುವಕರು ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಮರಕ್ಕೆ ಹೊಡೆದಿದ್ದ ಮೊಳೆ ಹಾಗೂ ಪೋಸ್ಟರ್ ಕೇಬಲ್ ಗಳನ್ನು ತೆರವುಗೊಳಿಸಿದರು.
ಸಂಸ್ಥೆಯ ಮುಖ್ಯಸ್ಥ ಪ್ರಸಾದ್ ಮಾತನಾಡಿ, ಸಾಮಾಜಿಕ ಕಳಕಳಿ ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಐಕೇರ್ ಬ್ರಿಗೇಡ್ ಎಂಬ ಸಾಮಾಜಿಕ ಸಂಘಟನೆ ಆರಂಭಿಸಿದ್ದೇವೆ. ಐಕೇರ್ ಬ್ರಿಗೇಡ್ ಮೂಲಕ, ನಾಗರಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಭವಿಷ್ಯದ ಪೀಳಿಗೆಗೆ ಉತ್ತಮ ವಾತಾವರಣವನ್ನು ಬಿಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಪೋಸ್ಟರ್ಗಳನ್ನು, ಕೇಬಲ್ ಮತ್ತು ಇಂಟರ್ನೆಟ್ ನೆಟ್ವರ್ಕ್ ಸೇವಾ ಪೂರೈಕೆದಾರು ಕೇಬಲ್ ಹಾಗೂ ಬಿಲ್ಗಳನ್ನು ಅಂಟಿಸುವುದು ಮುಂತಾದ ಉದ್ದೇಶಗಳಿಗೆ ಬಳಸಿ ಮರಗಳಿಗೆ ಹಾನಿಯುಂಟು ಮಾಡುತ್ತಿರುವುದು ಖಂಡನೀಯ ಎಂದರು.