ಐಕಾಂತಿಕಾ ನೇಸರ ಶಿಬಿರದಲ್ಲಿ  ಚರಕ ಕಾರ್ಯಾಗಾರ

ದಾವಣಗೆರೆ.ಏ.೨೭; ಬಟ್ಟೆಗಾಗಿ ಹೆಸರುವಾಸಿ ಆಗಿದ್ದ ದಾವಣಗೆರೆ ಭಾಗದಲ್ಲಿ ಸಚ್ಚು ಅವರು ಹಚ್ಚಿದ ಕಿಡಿಯಿಂದ ಚರಕದಿಂದ ತೆಗೆಯುವ ನೂಲು ಕ್ರಾಂತಿಗೆ ಒಳ್ಳೆಯ ಆರಂಭ ಸಿಕ್ಕಿತು.ಹರಿಹರ ತಾಲ್ಲೂಕಿನಲ್ಲಿರುವ  ಐಕಾಂತಿಕ ಸಂಸ್ಥೆಯಲ್ಲಿ  ಏಪ್ರಿಲ್ 23 ಮತ್ತು 24ರಂದು ನಡೆದ ಐಕಾಂತಿಕಾ ಮಕ್ಕಳ ನೇಸರ ಶಿಬಿರದಲ್ಲಿ ‘ಚರಕ ಕಾರ್ಯಾಗಾರ ಹಮ್ಮಿಕೊಂಡಿದ್ದು, ಶಿಬಿರಾರ್ಥಿಗಳು ಚರಕದಿಂದ ನೂಲು ತೆಗೆಯುವ ಅನುಭವವನ್ನು ಸ್ವತಹ ಪಡೆದುಕೊಂಡರು.ಎರಡು ದಿನಗಳ ಕಾಲ ಎಲ್ಲಾರೂ ಬೇರೆಯೇ ಲೋಕದಲ್ಲಿ ಕಳೆದುಹೋಗಿದ್ದು,ಹತ್ತಿ ನೂಲಾಗಿ ಬದಲಾಗುವ ಅದ್ಭುತವನ್ನು ಅನುಭವಿಸಿದರು ಎಂದು ಐಕಾಂತಿಕ ರಾಘವ್ ತಿಳಿಸಿದ್ದಾರೆ.