ಐಐಟಿ ಬಂದಿದ್ದು ಕಾಂಗ್ರೆಸ್ ಕಾಲದಲ್ಲಿ: ಕುಲಕರ್ಣಿ

ಧಾರವಾಡ,ಮಾ12 : ಐಐಟಿಯಲ್ಲಿ 25%ರಷ್ಟು ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಬೇಕು. ಐಐಟಿಗೆ ಭೂಮಿ ನೀಡಿದವರ ಮಕ್ಕಳಿಗೆ ಅಲ್ಲಿ ಡಿ ದರ್ಜೆ ಕೆಲಸ ನೀಡಬೇಕು. ಉದ್ಘಾಟನೆ ವೇಳೆ ಇದನ್ನು ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಕುಲಕರ್ಣಿ ಆಗ್ರಹಿಸಿದ್ದಾರೆ.
ವೀಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿದ ಅವರು, ವಿದ್ಯಾಕಾಶಿ ಧಾರವಾಡದಲ್ಲಿ ಐಐಟಿ ಉದ್ಘಾಟನೆಯಾಗುತ್ತಿರುವುದು ನಮ್ಮೆಲ್ಲರಿಗೂ ಸಂತಸದ ವಿಷಯ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಧಾರವಾಡಕ್ಕೆ ಐಐಟಿ ಮಂಜೂರಾಗಿತ್ತು. ಇದು ಧಾರವಾಡದಲ್ಲಿ ಸ್ಥಾಪನೆಯಾಗಬೇಕು ಎಂದು ಭದ್ರ ಬುನಾದಿ ಹಾಕಿದ್ದೇ ಕಾಂಗ್ರೆಸ್ ಎಂದು ತಿಳಿಸಿದ್ದಾರೆ.
ಐಐಟಿಯನ್ನು ಕರ್ನಾಟಕಕ್ಕೆ ಕೊಟ್ಟ ವೇಳೆ ಇದು ರಾಯಚೂರಿಗೆ ಹೋಗಬೇಕು ಎಂದು ಚರ್ಚೆಗಳಾಗಿದ್ದವು. ಆಗ ನಾವೆಲ್ಲರೂ ಒಂದಾಗಿ ಹೋಗಿ ಈ ಐಐಟಿ ಕೇಂದ್ರ ಧಾರವಾಡದಲ್ಲೇ ಸ್ಥಾಪನೆಯಾಗಬೇಕು ಎಂದು ಒತ್ತಾಯ ಮಾಡಿದ್ದೆವು. ಆದರೂ ಆಗ ಐಐಟಿ ರಾಯಚೂರು ಬಿಟ್ಟು ಮೈಸೂರಿಗೆ ವರ್ಗಾವಣೆಯಾಯಿತು. ಮರಳಿ ಅದನ್ನು ಧಾರವಾಡಕ್ಕೆ ತರಲು ನಾವೆಲ್ಲ ದೊಡ್ಡ ಹೋರಾಟ ಮಾಡಬೇಕಾಯಿತು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಧಾರವಾಡದಲ್ಲೇ ಐಐಟಿ ಸ್ಥಾಪನೆಗೆ ಸಮ್ಮತಿ ಸೂಚಿಸಿದರು ಎಂದು ಅವರು ತಿಳಿಸಿದರು.