
ನವದೆಹಲಿ, ಮಾ. ೯- ಸುಮಾರು ೪ ಕೋಟಿ ರೂ ಮೌಲ್ಯದ ಐಷಾರಾಮಿ ಕಾರು ಖರೀದಿಸಿ ಐಐಟಿ ಪದವೀಧರರೊಬ್ಬರು ಗಮನ ಸೆಳೆದಿದ್ದಾರೆ.
ಅಲ್ಲದೇ ಈ ಕಾರು ಖರೀಸಿದ ಭಾರತದ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಅಭಿಷೇಕ್ ‘ಮಾಂಟಿ’ ಅಗರ್ವಾಲ್ ಅಭಿಷೇಕ್ ಖರೀದಿಸಿರುವ ಮೇಬ್ಯಾಕ್‌ನಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ ನೋಂದಣಿ ಫಲಕ. ಇದು ಭಾರತದ ನೋಂದಣಿ ಫಲಕವನ್ನು ಪಡೆಯುತ್ತದೆ, ಇದು ಯಾವುದೇ ಸಮಸ್ಯೆಯಿಲ್ಲದೆ ಯಾವುದೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವರ್ಗಾಯಿಸಲು ಅಥವಾ ಓಡಿಸಲು ಅನುವು ಮಾಡಿಕೊಡುತ್ತದೆ.
ಈ ಮರ್ಸಿಡೀಸ್ ಬೆಂಜ್ ಅನ್ನು ಭಾರತದಲ್ಲಿ ಹಲವು ಸೆಲೆಬ್ರಿಟಿಗಳು ಹೊಂದಿದ್ದಾರೆ. ಆದರೆ ಇಲ್ಲೊಬ್ಬ ೩೩ ವರ್ಷದ ವ್ಯಕ್ತಿಯೊಬ್ಬರು ಈ ಕಾರನ್ನು ಖರೀದಿಸಿದ್ದು, ಮರ್ಸಿಡೀಸ್-ಮೇಬ್ಯಾಕ್ ಎಸ್-ಕ್ಲಾಸ್ನ ಅತ್ಯಂತ ಕಿರಿಯ ಮಾಲೀಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇತ್ತೀಚೆಗೆ ೩೩ ವರ್ಷ ವಯಸ್ಸಿನ ಅಭಿಷೇಕ್ ‘ಮಾಂಟಿ’ ಅಗರ್ವಾಲ್ ಅವರು ಹೊಚ್ಚ ಹೊಸ ಮರ್ಸಿಡೀಸ್-ಮೇಬ್ಯಾಕ್ ೬೮೦ ಐಷಾರಾಮಿ ಸೆಡಾನ್ ಅನ್ನು ೪ ಕೋಟಿ ರೂಪಾಯಿಗೆ ಖರೀದಿಸಿದ್ದು, ಅಭಿಷೇಕ್ ಈಗ ದೇಶದಲ್ಲಿ ಮೇಬ್ಯಾಕ್ ಸೆಡಾನ್ ಹೊಂದಿರುವ ದೇಶದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ.