ಐಐಟಿ ಆಸೆ ತೋರಿಸಿ ಕೈ ಕೊಟ್ಟ ನಾಯಕರು

ರಾಯಚೂರು ಜಿಲ್ಲೆಗೆ ಇಂದು ಕರಾಳ ದಿನ
ಅಣ್ಣಪ್ಪ ಮೇಟಿ
ರಾಯಚೂರು,ಮಾ.೧೨- ಭಾರತೀಯ ತಂತ್ರಜ್ಞಾನ ಸಂಸ್ಥೆ ರಾಯಚೂರು ಜಿಲ್ಲೆಗೆ ಬಹಳ ವರ್ಷಗಳಿಂದ ನಮ್ಮ ಸರ್ಕಾರ ಐ ಐ ಟಿ ಜಿಲ್ಲೆಗೆ ಮಂಜೂರು ಮಾಡುತ್ತೇವೆ ಎಂದು ನಂಬಿಸಿದ್ದರು ಆದರೆ ಅದನ್ನು ಧಾರವಾಡ ಜಿಲ್ಲೆಗೆ ಮಂಜೂರು ಮಾಡಿ ಇಂದು ಐ ಐ ಟಿ ಉದ್ಘಾಟನೆ ಧಾರವಾಡದಲ್ಲಿ ಜರುಗುತ್ತಿದ್ದೂ ಜಿಲ್ಲೆಯ ಜನತೆಗೆ ಇಂದು ಕರಾಳ ದಿನವಾಗಿದೆ.
ಈ ಹಿಂದೆ ಐ ಐ ಟಿ ನಮ್ಮ ಜಿಲ್ಲೆಗೆ ಬೇಕೆಂದು ಹಲವಾರು ಧರಣಿ, ಪ್ರತಿಭಟನೆಗಳನ್ನು ಜಿಲ್ಲೆಯಲ್ಲಿ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ, ಬಿಜೆಪಿ ಸರ್ಕಾರದ ರಾಜಕೀಯ ಮುಖಂಡರು ಐ ಐ ಟಿ ನಮ್ಮ ಜಿಲ್ಲೆಗೆ ಕೊಡುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಕೈಕೋಟ್ಟು ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ.
ಭಾರತೀಯ ತಂತ್ರಜ್ಞಾನ ಸಂಸ್ಥೆ ನಮ್ಮ ಜಿಲ್ಲೆಗೆ ನೀಡಿದ್ದರೆ ಸಿಕ್ಕಾಪಟ್ಟೆ ಅನುಕೂಲ ಆಗ್ತಿತ್ತು ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ನಮ್ಮ ಜಿಲ್ಲೆಯು ಕೂಡ ಸೇರಿದೆ,ಐ ಐ ಟಿ ನಮ್ಮ ಜಿಲ್ಲೆಗೆ ನೀಡಿದ್ದರೇ ತಂತ್ರಜ್ಞಾನ ಕ್ಷೇತ್ರದಲ್ಲಿ ಆದರೂ ಸ್ವಲ್ಪ ಮುಂದುವರಿಯಬಹುದಾಗಿತ್ತು ಎನ್ನುವ ಆಸೆಗೆ ತಣ್ಣೀರು ಎರಚಿದ ಸರ್ಕಾರ ಇಂದು ಧಾರವಾಡ ಜಿಲ್ಲೆಯಲ್ಲಿ ಐ ಐ ಟಿ ಸಂಸ್ಥೆಯನ್ನು ಉದ್ಘಾಟನೆ ಮಾಡುತ್ತಿದೆ, ಇದರಿಂದ ಜಿಲ್ಲೆಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಗೆ ಐ ಐ ಟಿ ಕೈತಪ್ಪಿತ್ತು ಈಗ ಏಮ್ಸ್ ನೀಡುತ್ತೇವೆ ಎಂದು ಹೇಳಿದ್ದ ಬಿಜೆಪಿ ಸರ್ಕಾರ,ಏಮ್ಸ್ ಮಾದರಿ ಆಸ್ಪತ್ರೆ ಮಾಡುವುದಾಗಿ ಭರವಸೆ ನೀಡಿದೆ, ಹಾಗಾದರೆ ಏಮ್ಸ್ ಬೇರೆ ಜಿಲ್ಲೆಗೆ ನೀಡುತ್ತಾರೆ ಎಂದಾಯ್ತು, ನಮ್ಮ ಜಿಲ್ಲೆಗೆ ಪದೇ ಪದೇ ಹೀಗೆ ಅನ್ಯಾಯ ಮಾಡುತ್ತಿರುವ ಸರ್ಕಾರದ ವಿರುದ್ಧ ಹಲವಾರು ಪ್ರತಿಭಟನೆಗಳು, ಉಪವಾಸ, ಹೋರಾಟಗಳು ನಡೆದರು ಕೂಡ ಯಾವುದೇ ಪ್ರಯೋಜನವಾಗಿಲ್ಲ.
ಬಾಕ್ಸ್
ಐ ಐ ಟಿ ಕೈ ತಪ್ಪಲು ಪ್ರಮುಖ ಕಾರಣ ರಾಜಕೀಯ ಮುಖಂಡರೇ, ಐ ಐ ಟಿ ವಿಚಾರ ಬಂದಾಗ ಒಗ್ಗಟ್ಟಿನ ಅವರಲ್ಲಿ ಮಂತ್ರವಿರಲಿಲ್ಲ,ಪಕ್ಷ ಬೇದ ಭಾವ ಮಾಡಿದರು,.ಹಾಗೂ ಹಲವಾರು ಹೋರಾಟಗಳು ನಡೆದರೂ ಜಿಲ್ಲೆಯ ರಾಜಕೀಯ ಮುಖಂಡರು ಸರಿಯಾಗಿ ಅದರಲ್ಲಿ ಭಾಗವಹಿಸಲಿಲ್ಲ ನಮ್ಮ ಜಿಲ್ಲೆಯ ರಾಜಕೀಯ ಮುಖಂಡರು ಸರ್ಕಾರದ ಮೇಲೆ ಎಲ್ಲರೂ ಸೇರಿ ತೀವ್ರವಾಗಿ ಹೋರಾಟ ಮಾಡಿದ್ದರೆ ಇಂದು ಐ ಐ ಟಿ ನಮ್ಮ ಜಿಲ್ಲೆಯಲ್ಲಿ ಉದ್ಘಾಟನೆಯಾಗುತ್ತಿತ್ತು.
ಈಗ ಏಮ್ಸ್ ಕಥೆ ಕೂಡ ಇದೆ ರೀತಿ ಆಗಬಹುದು ಎನ್ನುವ ಮನೋಭಾವನೆ ಜಿಲ್ಲೆಯ ಜನತೆಯಲ್ಲಿ ಮೂಡಿದೆ,ಆಯ್ಕೆಯಾಗಿರುವ ಶಾಸಕರು ಕೈ ಕಟ್ಟಿ ಕುಳಿತುಕೊಳ್ಳದೆ ಏಮ್ಸ್ ಮಾದರಿ ಬೇಡವೇ ಬೇಡ ಏಮ್ಸ್ ಬೇಕೆಂದು ಒಂದು ದಿನ ತೀವ್ರ ಹೋರಾಟ ಮಾಡಿದ್ದಲ್ಲಿ ನಮ್ಮ ಜಿಲ್ಲೆಗೆ ಏಮ್ಸ್ ಬರುತ್ತದೆ ಇಲ್ಲವಾದರೆ ಐ ಐ ಟಿ ಆದ ರೀತಿ ಇದು ಬೇರೆ ಜಿಲ್ಲೆಯಲ್ಲಿ ಸ್ಥಾಪನೆ ಆಗುವುದರಲ್ಲಿ ಅನುಮಾನವಿಲ್ಲ..