
ರಾಯಚೂರು,ಸೆ.೦೨- ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ೨೦೨೩ನೇ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಮತ್ತು ಟಾಟಾ ಸೈನ್ಸ್‌ನ ಉದ್ಘಾಟನೆ ಸಮಾರಂಭವು ಆ.೩೦ರಂದು ಯರಮರಸ್‌ನ ಐಐಐಟಿಯ ಅಕಾಡೆಮಿಕ್ ಬ್ಲಾಕ್‌ನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ದತ್ತಾತ್ರಿ ಸಾಲಗಾಮ ಅವರು ಮಾತನಾಡಿ, ಭಾರತ ದೇಶ ಇಂದು ತಂತ್ರಜ್ಞಾನದಲ್ಲಿ ಅಗಾಧವಾದ ಶಕ್ತಿ ಹೊಂದಿದ್ದು ಇಡಿ ಪ್ರಪಂಚವೆ ನಮ್ಮನ್ನು ನೋಡುತ್ತಿದ್ದು ದೇಶದ ಐಐಟಿ, ಐಐಎಂ, ಐಐಐಟ ಮುಂತಾದ ಸಂಸ್ಥೆಗಳು ಈ ದೇಶದ ಹೆಮ್ಮೆಯ ಸಂಸ್ಥೆಗಳಾಗಿವೆ ಎಂದರು.
ಚ೦ದ್ರಯಾನ-೩ ರಲ್ಲಿ ವಿಕ್ರಮ ಲ್ಯಾಂಡರ್ ಪ್ರಗ್ಯಾನ್ ರೋವರ್‌ರನನ್ನು ಇಂತಿಷ್ಟೆ ಸಮಯದಲ್ಲಿ ಲ್ಯಾಂಡ್ ಮಾಡುತ್ತದೆ ಎಂದು ಮೊದಲೆ ಅಂದಾಜು ಮಾಡಿದ್ದು ಕರಾರುವಕ್ಕಾಗಿ ಅದೆ ಸಮಯಕ್ಕೆ ಲ್ಯಾಂಡ್ ಮಾಡುವುದು ಪ್ರಯಾಸಕರ ಸಂಗತಿ ಮತ್ತು ತಂತ್ರಜ್ಞಾನದಲ್ಲಿ ಭಾರತ ದೇಶದ ವಿಜ್ಞಾನಿಗಳ ಶಕ್ತಿ ಸಾಬೀತು ಪಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಾಷ್ ಕಂಪನಿ ಗ್ಲೋಬಲ್ ಸಾಫ್ಟವೇರ್ ಸಿಓಓ ರಾಘವೇಂದ್ರ ಕೃಷ್ಣ ಮೂರ್ತಿ, ಐಐಐಟಿ ನಿರ್ದೇಶಕ ಡಾ.ಹರೀಶ ಕುಮಾರ್ ಸರ್ಡಾನಾ, ಐಐಐಟಿ ಸಾರ್ವಜನಿಕ ಸಂಪರ್ಕಾಧಿಕಾರಿ ಸುರೇಶ, ಸೇರಿದಂತೆ. ವಿದ್ಯಾರ್ಥಿಗಳು, ಬೋಧಕ ,ಬೋಧಕೇತರ ಸಿಬ್ಬಂದಿಗಳಿದ್ದರು.