ಐಐಎಸ್‌ಸಿನಲ್ಲಿ ದೇಶದ ಮೊದಲ ಗಣಿತ ಸಂಶೋಧನಾ ಕೇಂದ್ರ ಆರಂಭ

ಬೆಂಗಳೂರು,ಜ.೧೦-ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ)ನಲ್ಲಿ ದೇಶದ ಮೊದಲ ಸಮಗ್ರ ಗಣಿತ ಹಾಗೂ ಕಂಪ್ಯೂಟಿಂಗ್ ಸಂಶೋಧನಾ ಆವಿಷ್ಕಾರ ಕೇಂದ್ರವು ಆರಂಭಗೊಂಡಿದೆ.
ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಹಲವಾರು ಶೈಕ್ಷಣಿಕ,ವೃತ್ತಿಪರ ಅಭಿವೃದ್ಧಿ ಅವಕಾಶಗಳನ್ನು ನೀಡುವ ಸಂಶೋಧನೆ ಮತ್ತು ತಂತ್ರಜ್ಞಾನದ ಭವಿಷ್ಯವನ್ನು ರೂಪಿಸುವಲ್ಲಿ ಕೇಂದ್ರವು ಪ್ರಮುಖ ಪಾತ್ರ ವಹಿಸುತ್ತದೆ.
ಕೇಂದ್ರವು ಅತ್ಯಾಧುನಿಕ ಸೌಲಭ್ಯವು ಈ ಕ್ಷೇತ್ರಗಳಲ್ಲಿ ಮುಂದಿನ ಪೀಳಿಗೆಯ ನಾಯಕರಿಗೆ ತರಬೇತಿ ಮೈದಾನವಾಗಿ ಕಾರ್ಯನಿರ್ವಹಿಸಲಿದೆ.ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಹಲವಾರು ಶೈಕ್ಷಣಿಕ ಮತ್ತು ವೃತ್ತಿಪರ ಅಭಿವೃದ್ಧಿ ಅವಕಾಶಗಳನ್ನು ನೀಡುತ್ತದೆ.
ಸುಮಾರು೧.೬ ಲಕ್ಷ ಚದರ ಅಡಿ ವಿಸ್ತೀರ್ಣದ ಕೇಂದ್ರದಲ್ಲಿ ಅತ್ಯಾಧುನಿಕ ಲ್ಯಾಬ್‌ಗಳು ಮತ್ತು ಐಐಎಸ್‌ಸಿಯ ಇಪ್ಪತ್ತಕ್ಕೂ ಹೆಚ್ಚು ವಿಭಾಗಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಪ್ರಯೋಜನ ನೀಡುವ ಕಾರ್ಯಕ್ರಮಗಳನ್ನು ಹೊಂದಿರುತ್ತದೆ. ಕೇಂದ್ರವು ಗಣಿತಶಾಸ್ತ್ರ ಹಾಗೂ ಕಂಪ್ಯೂಟಿಂಗ್‌ನಲ್ಲಿ ಹೊಸ ಐಐಎಸ್ಸಿ ಬಿಟೆಕ್ ಕೋರ್ಸ್ ಆರಂಭಿಸಲಿದ್ದು ಇದು ಈಗಾಗಲೇ ಚಾಲ್ತಿಯಲ್ಲಿರುವ ಗಣಿತವಿಜ್ಞಾನ ಕ್ಷೇತ್ರದ ಅಂತರ್ ಶಿಸ್ತೀಯ ಪಿಎಚ್‌ಡಿಗೂ ನೆರವಾಗಲಿದೆ.
ಪ್ರತಿ ವರ್ಷ ೫೦೦ ಕ್ಕೂ ಹೆಚ್ಚು ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಈ ಕೇಂದ್ರ ಪ್ರಯೋಜನ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಪ್ರತಿಷ್ಠಿತ ಆಕ್ಸಿಸ್ ಬ್ಯಾಂಕ್ ಕೇಂದ್ರವು ಸಮರ್ಪಣೆ ಮಾಡಿದ್ದು, ಗಣಿತ ಮತ್ತು ಕಂಪ್ಯೂಟಿಂಗ್ ವಿಷಯದಲ್ಲಿ ಭಾರತದ ಮೊದಲ ಸಮಗ್ರ ಶೈಕ್ಷಣಿಕ ಸಂಶೋಧನಾ ಕೇಂದ್ರವಾಗಿದೆ.