ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ದುರಂತ ತನಿಖೆ ಆದೇಶ

ಕಾರವಾರ, ಜು. ೨೧- ಪ್ರಾಯೋಗಿಕ ಕಾರ್ಯಾಚರಣೆ ನಡೆಸುವ ವೇಳೆ ದೇಶದ ಅತಿ ದೊಡ್ಡ ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣ ಕುರಿತು ತನಿಖೆ ಆದೇಶಿಸಲಾಗಿದೆ
ಅಗ್ನಿಶಾಮಕ ವ್ಯವಸ್ಥೆಯ ಸಹಕಾರದಿಂದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ೪೭ ಸಾವಿರ ಟನ್ ತೂಕದ ಐಎನ್‌ಎಸ್ ವಿಕ್ಯಮಾದಿತ್ಯ ಯುದ್ಧ ನೌಕೆ ಅದರ ಮರು ಹೊಂದಾಣಿಕೆ ಕಾರ್ಯದ ನಂತರ ಸಮುದ್ರದಲ್ಲಿ ನಿಗದಿತ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಈ ಸಂದರ್ಭದಲ್ಲಿ ಕೆಲವೊಂದು ಪ್ರಯೋಗಗಳನ್ನು ಕೈಗೊಳ್ಳುತ್ತಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿದೆ ಎಂದು ನೌಕಾ ಪಡೆಗಳು ಅಧಿಕಾರಿಗಳು ತಿಳಿಸಿದ್ದಾರೆ.
ವಿಕ್ರಮಾದಿತ್ಯಯ ನೌಕೆಯಲ್ಲಿ ಕ್ಯಾಪ್ಟನ್ ಸುಶಿಲ್ ಮೆನನ್ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಯುದ್ಧ ನೌಕೆ ಆಳ ಸಮುದ್ರದಲ್ಲಿದ್ದು, ಇಂದು ಕಾರವಾರದ ಸೀಬರ್ಡ್ ನೌಕಾ ನೆಲೆಗೆ ತರಲಾಗುತ್ತಿದೆ.
ಅಗ್ನಿ ಅವಘಡಕ್ಕೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತನಿಖಾ ಸಮಿತಿಗೆ ನೌಕಾಪಡೆ ಆದೇಶಿಸಿದೆ.
ವಿಕ್ರಮಾದಿತ್ಯ ನೌಕೆ ದುರಸ್ತಿ ಕಾರ್ಯ ನಡೆಯುತ್ತಿರುವ ಕಾರಣ ಕೆಲವು ತಿಂಗಳ ಕಾಲ ನೌಕೆ ಬಳಕೆ ಮಾಡುತ್ತಿರಲಿಲ್ಲ. ಈ ಬೆಂಕಿ ಅವಘಡ ಆಘಾತಕಾರಿಯಾಗಿದೆ ಎಂದು ನೌಕಾ ಪಡೆಯ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.
ಎರಡನೇ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ಆಗಸ್ಟ್ ೧೫ ರೊಳಗೆ ಕೇರಳದ ಕೊಚ್ಚಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಮೃತಹಸ್ತದಿಂದ ಸಮುದ್ದಕ್ಕೀಳಿಸಲು ನಾವೆಲ್ಲರೂ ಉತ್ಸಾಹಕರಾಗಿದ್ದಾರೆ ಎಂದರು.