ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತ ಬಾಲೆಔರಾದ್ ಹಣ್ಣಿನ ವ್ಯಾಪಾರಿ ಮಗಳು ಉಜ್ಮಾ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಡಿಸ್ಟಿಂಕ್ಷನ್

(ಸಂಜೆವಾಣಿ ವಾರ್ತೆ)
ಔರಾದ :ಮೇ.10: ಪಟ್ಟಣದ ಹಣ್ಣಿನ ವ್ಯಾಪಾರಿ ಸಲಿಮ ಮತ್ತು ತಬಸುಮ್ ದಂಪತಿ ಮಗಳಾದ ಉಜ್ಮಾ ಅವರು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಪಟ್ಟಣದ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಅಭ್ಯಾಸ ಮಾಡಿದ ಇವರು ಡಿಸ್ಟಿಂಕ್ಷನ್ ಪಡೆದು ಕುಟುಂಬಕ್ಕೆ ಕೀರ್ತಿ ತಂದಿದ್ದಾರೆ.
ವಿದ್ಯೆ ಯಾರಪ್ಪನ ಸೊತ್ತಲ್ಲ, ಸಾಧಕರ ಸೊತ್ತು ಎಂಬುದಕ್ಕೆ ಈ. ಉಜ್ಮಾ ಅವರೇ ನಿದರ್ಶನ. ಪೆÇೀಷಕರು ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೂ ಸಹ ಹೆತ್ತವರಿಗೆ ಹೊರೆಯಾಗಬಾರದು ಎಂದು ಸಿಕ್ಕ ಸರಕಾರಿ ಸೌಲಭ್ಯ ಬಳಸಿಕೊಂಡು ಉತ್ತಮ ಅಂಕಗಳನ್ನು ಪಡೆಸಿದ್ದಾರೆ.
ಮಗಳ ಸಾಧನೆ ಬಗ್ಗೆ ತಾಯಿ ತಬಸುಮ್ ಸಂತೋಷ ವ್ಯಕ್ತಪಡಿಸಿದರು. ಮಗಳು ವಿದ್ಯಾಭ್ಯಾಸ ಮಾಡಲಿ ಎಂದು ನಮ್ಮ ಕಷ್ಟಗಳನ್ನು ತೋರಿಸದೇ ಅವಳಿಗೆ ಬೆಂಬಲವಾಗಿ ನಿಂತಿದೇವೆ. ಉಜ್ಮಾರ ತಂದೆ ಬಿಡಿ ಹಣ್ಣು ವ್ಯಾಪಾರಿಯಾಗಿದ್ದಾರೆ ನಾನು ಅಲ್ಲಿ ಇಲ್ಲಿ ಸಿಕ್ಕ ದಿನ ಕೂಲಿ ಕೆಲಸ ಮಾಡುವೆ ಮಗಳು ಕಷ್ಟ ಪಟ್ಟು ಓದಿದ್ದಾಳೆ ಎಂದು ಖುಷಿಪಟ್ಟರು.
ಸಾಧಕಿ ಉಜ್ಮಾ ಮಾತನಾಡಿ, ನಾನು ಅಂದುಕೊಂಡಂತೆ ನನಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಬಂದಿದೆ ಮುಂದೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುವ ಮೂಲಕ ಐಎಎಸ್ ಅಧಿಕಾರಿ ಯಾಗಬೇಕು ಎನ್ನುವ ಗುರಿ ಹೊಂದಿದ್ದೇನೆ. ಅದಕ್ಕಾಗಿ ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಸಾಧಕಿ ಉಜ್ಮಾ ಅಂಕಗಳೆಷ್ಟು:
ಉರ್ದು -125, ಕನ್ನಡ -99, ಇಂಗ್ಲಿಷ್ -97, ಗಣಿತ – 92, ವಿಜ್ಞಾನ -92, ಸಮಾಜ ವಿಜ್ಞಾನ 93, ಒಟ್ಟು 598 (95.68%) ಅಂಕಗಳನ್ನು ಗಳಿಸಿ ಶಾಲೆಗೆ ತಾಲೂಕಿಗೆ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.