ಐಎಂಎ ವತಿಯಿಂದ ತಾಯಂದಿರ ದಿನಾಚರಣೆ

ಶಿವಮೊಗ್ಗ. ಮೇ.೧೬; ವಿಶ್ವ ಅಮ್ಮಂದಿರ ದಿನಾಚರಣೆ ಪ್ರಯುಕ್ತ ಶಿವಮೊಗ್ಗದ ಭಾರತೀಯ ವೈದ್ಯಕೀಯ ಸಂಘದ ಮಹಿಳಾ ವೈದ್ಯರ ಘಟಕ ಕೋಟೆ ಕುಂಬಾರಗುಂಡಿ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು . ಮಹಿಳಾ ವೈದ್ಯರ ಘಟಕದ ಅಧ್ಯಕ್ಷರಾದ ಡಾ . ವಿನಯಾ ಶ್ರೀನಿವಾಸ್ ಅವರು ತಾಯಂದಿರು ತಮ್ಮ ಕುಟುಂಬದ ನಿರ್ವಹಣೆಯ ಜವಾಬ್ದಾರಿಯ ಒತ್ತಡದಲ್ಲಿ ತನ್ನ ಆರೋಗ್ಯದ ಕಡೆ ನಿರ್ಲಕ್ಷಿಸಬಾರದು ಎಂದು ವಿವರಿಸಿದರು .ಐಎಂಎ ಕಾರ್ಯದರ್ಶಿ ಡಾ . ರಕ್ಷಾ ರಾವ್  ಗರ್ಭಾವಸ್ಥೆಯಲ್ಲಿನ ಆರೈಕೆ , ಆಹಾರ ಹಾಗು ತಪಾಸಣೆಗಳ ಬಗ್ಗೆ ಮಾಹಿತಿ ನೀಡಿದರು .  ಶ್ರೀಮತಿ ಪ್ರತಿಮಾ , ದಾದಿಯಾದ ಜಯಮ್ಮ ಹಾಗು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು . ನೆರೆದಿದ್ದ ಎಲ್ಲ ಮಾತೆಯರಿಗೆ ಹಾಗು ಅಂಗನವಾಡಿ ಮಕ್ಕಳಿಗೆ ಹಣ್ಣುಗಳನ್ನು ವಿತರಿಸಲಾಯಿತು .