ಐಎಂಎ ಆಸ್ತಿ ಮಾರಾಟ ಮಾಡಿ ವಂಚನೆಗೆ ಒಳಗಾದವರ ಖಾತೆಗೆ ಜಮಾ ಮಾಡಲು ಒತ್ತಾಯ

ದಾವಣಗೆರೆ.ಜು.೨೧: ರಾಜ್ಯ ಸರ್ಕಾರ  ಮುಟ್ಟುಗೋಲು ಹಾಕಿಕೊಂಡಿರುವ ಐಎಂಎ ಆಸ್ತಿಯನ್ನು ಮಾರಾಟ ಮಾಡಿ ವಂಚನೆಗೆ  ಒಳಗಾಗಿರುವರ ಬಂಡವಾಳ ಹೂಡಿಕೆದಾರರ ಖಾತೆಗೆ ಜಮೆ ಮಾಡಬೇಕು ಎಂದು ಎಸ್.‌ ಅಬ್ದುಲ್ ಮಜೀದ್ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಮೂಲದ ಐಎಂಎ ಸಂಸ್ಥೆಯಲ್ಲಿ ಅನೇಕರು ಬಂಡವಾಳದ ಹೂಡಿಕೆ ಮಾಡಿದವರು ವಂಚನೆಗೆ ಒಳಗಾಗಿದ್ದಾರೆ. ಅವರಲ್ಲಿ 14 ಸಾವಿರ ಅಲ್ಪಸಂಖ್ಯಾತ ಕುಟುಂಬ ಇದ್ದರು. ವಂಚನೆ ಬಯಲಿಗೆ ಬರುತ್ತಿದ್ದಂತೆ ಪ್ರಧಾನಿ ಅವರಿಗೆ ಪತ್ರ ಬರೆದ ಹತ್ತು ದಿನಗಳಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡ ಕಾರಣ 4 ರಿಂದ 5 ಸಾವಿರ ಕುಟುಂಬಕ್ಕೆ ತಲಾ 50 ಸಾವಿರ ಬಂದಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ತಿಳಿಸಿದರು.ಐಎಂಎ ವಂಚನೆ ಕುರಿತಂತೆ ಪ್ರಕರಣದ ತನಿಖೆ ನಡೆಸಿ ದಾವಣಗೆರೆ ಒಳಗೊಂಡಂತೆ ಕೋಟ್ಯಂತರ ಮೊತ್ತದ ಆಸ್ತಿ ವಶಪಡಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿ ಬಹಿರಂಗ ಹರಾಜು ಮಾಡಿ, ಇತರರ ಖಾತೆಗಳಿಗೆ ನೇರವಾಗಿ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.ದಾವಣಗೆರೆಯಲ್ಲಿ ಮೊದಲ ಬಾರಿಗೆ ಈ ಪ್ರಕರಣದ ವಿರುದ್ಧ ಧ್ವನಿ ಎತ್ತಿದ ಕೀರ್ತಿ ಸಲುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವು ಇಲ್ಲದಿದ್ದರೆ ಅಮಾಯಕ ಕುಟುಂಬಗಳಿಗೆ ಅನುಕೂಲ ಆಗಿದೆ ಎಂದು ತಿಳಿಸಿದರು.ಐಎಂಎ ಸಂಸ್ಥೆಯಲ್ಲಿ ಲಕ್ಷ ಗಟ್ಟಲೆ ಹೂಡಿಕೆ ಮಾಡಿರುವವರಿಗೆ ಹಣ ವಾಪಸ್ ಆಗಿಲ್ಲ.‌ ಹಾಗಾಗಿ ಆಸ್ತಿ ಮಾರಾಟ ಮಾಡಿ ವಾಪಸ್ ನೀಡಬೇಕು ಎಂದು ಒತ್ತಾಯಿಸಿದರು.ತನ್ವೀರ್ ಅಹಮದ್, ಜಬೀವುಲ್ಲ, ಶಂಷುದ್ದೀನ್ ಸುದ್ದಿಗೋಷ್ಠಿಯಲ್ಲಿದ್ದರು.