ಐಎಂಎಸ್ ಚರ್ಚ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮ

(ಸಂಜೆವಾಣಿ ವಾರ್ತೆ)
ಇಂಡಿ :ಜ.11:ಪ್ರತಿಯೊಬ್ಬರ ಮಾನಸಿಕ ನೆಮ್ಮದಿಗೆ ಶ್ರದ್ದಾ ಕೇಂದ್ರಗಳು ಮುಖ್ಯ.ನಮ್ಮ ಮನೆ,ಸಾರ್ವಜನಿಕ ಸ್ಥಳಗಳು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇಡುವುದು ನಮ್ಮೆಲ್ಲರ ಕರ್ತವ್ಯ.ಕೇವಲ ಈ ಕಾರ್ಯ ಒಬ್ಬಿಬ್ಬರಿಂದ ಸಾಧ್ಯವಿಲ್ಲ.ಪ್ರತಿಯೊಬ್ಬರು ಕೈಜೊಡಿಸಿದಾಗ ಬದಲಾವಣೆ ಸಾಧ್ಯ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಮೇಲ್ವಿಚಾರಕ ಮಂಜುನಾಥ ಗೌಡ ಹೇಳಿದರು.

ಅವರು ಶನಿವಾರ ಪಟ್ಟಣದ ಐಎಂಎಸ್ ಚರ್ಚ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಇಂಡಿ ವಲಯದ ಕೆಇಬಿ ತಾಂಡಾ ಕಾರ್ಯಕ್ಷೇತ್ರದ ವತಿಯಿಂದ ಹಮ್ಮಿಕೊಂಡ ಸ್ವಚ್ಚತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿಗೆ ಸಂತಸ ಉಂಟು ಮಾಡುವ ಧಾರ್ಮಿಕ ಕೇಂದ್ರಗಳು ಬೇಕು.ಅಲ್ಲಿಯ ಪರಿಸರ ಉತ್ತಮವಾಗಿರಬೇಕು ಎಂದು ಹೇಳಿದರು.

ಶ್ರದ್ಧಾ ಕೇಂದ್ರಗಳ ಸುತ್ತ ಪರಿಸರ ಸ್ವಚ್ಚತೆಗೆ ಹೆಚ್ಚು ಒತ್ತು ನೀಡಿರುವ ಧರ್ಮಸ್ಥಳದ ಧರ್ಮಾ„ಕಾರಿಗಳಾದ ಡಾ.ವಿರೇಂದ್ರ ಹೆಗಡೆಯವರು ರಾಜ್ಯದ ದೇವಾಲಯ ,ಚರ್ಚ,ಮಸೀದಿ ಸುತ್ತಲಿನ ಸ್ವಚ್ಚತೆಗೆ ಒತ್ತು ನೀಡಿದ್ದಾರೆ ಎಂದು ಹೇಳಿದರು.ಪ್ರತಿಯೊಬ್ಬರು ಸ್ವಚ್ಚತೆಗೆ ಆಧ್ಯತೆ ಕೊಡಬೇಕು.ತಮ್ಮ ಮನೆಯ ಸುತ್ತ ಮುತ್ತಲೂ ಪರಿಸರ ಸ್ವಚ್ಚವಾಗಿಟ್ಟುಕೊಂಡು ಹಸಿಕಸ,ಒಣಕಸ ಬೇರ್ಪಡಿಸಿ ಕಸದ ವಾಹನಗಳಿಗೆ ನೀಡಬೇಕು.ರಸ್ತೆಯ ಬದಿಯಲ್ಲಿ ಒಗೆಯಬಾರದು ಎಂದು ಮನವಿ ಮಾಡಿದರು.