
ಅಫಜಲಪುರ,ಆ 24: ಅಫಜಲಪುರ ತಾಲೂಕಿನ ಆನೂರ ಗ್ರಾಮ ಪಂಚಾಯತ್ ಹಾಗೂ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಐಇಸಿ ಚಟುವಟಿಕೆಗಳ ಕುರಿತು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಉಪನ್ಯಾಸ ಹಾಗೂ ಪ್ರಮಾಣವಚನ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಗ್ರಾಂ. ಪಂ. ಅಧ್ಯಕ್ಷ ನಿಂಗಣ್ಣ ಕಲಶೆಟ್ಟಿ ಚಾಲನೆ ನೀಡಿದರು. ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಮಾತನಾಡಿ, ಮನೆಗೆ ಟಿ.ವಿ, ಹಾಗೂ ಕೈಗೆ ಮೊಬೈಲ್ ಎಷ್ಟೂ ಅವಶ್ಯಕವೋ ಅಷ್ಟೇ ಮನೆಗೊಂದು ಶೌಚಾಲಯ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ತಮ್ಮ ಮನೆಗೊಂದು ಶೌಚಾಲಯ ಕಟ್ಟಿಸಿಕೊಳ್ಳಲು ಸ್ವತಃ ತಾವೇ ಮುಂದಾಳತ್ವವನ್ನು ವಹಿಸಿಕೊಳ್ಳಬೇಕೆಂದು ಮನವಿ ಮಾಡಿದರು. ನಂತರ ಮಾಹಿತಿ, ಶಿಕ್ಷಣ, ಸಂಯೋಜನೆ, ಆರೋಗ್ಯ, ಹಸಿ ಕಸ ಹಾಗೂ ಒಣ ಕಸ, ಘನತ್ಯಾಜ್ಯ ವಸ್ತುಗಳ ವಿಲೇವಾರಿ, ಪ್ಲಾಸ್ಟಿಕ್ ಬಳಕೆಯ ನಿಷೇಧ, ನಮ್ಮ ಗ್ರಾಮ ನಮ್ಮ ಹೆಮ್ಮೆ. ಕ್ಲೀನ್ ವಿಲೇಜ್ ಹಾಗೂ ಗ್ರೀನ್ ವಿಲೇಜ್, ಪರಿಸರ ಸ್ವಚ್ಛತೆ, ಧೂಮಪಾನ ಹಾಗೂ ಮಧ್ಯಪಾನ ಮುಂತಾದ ವಿಷಯಗಳು ಕುರಿತು ಚರ್ಚೆ ಮಾಡಲಾಯಿತು. ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಅನಿಲ್ ಕುಮಾರ್ ಘನಾತೆ ವಹಿಸಿದ್ದರು.ಗ್ರಾಂ.ಪಂ. ಅಭಿವೃದ್ಧಿ ಅಧಿಕಾರಿ ಚಿದಾನಂದ ಆಲೇಗಾಂವ್, ಗ್ರಾಂ.ಪಂ.ಮಾಜಿ ಅಧ್ಯಕ್ಷ ದತ್ತು ಗಾಣೂರ್, ಸದಸ್ಯ ರಾಜು ಸರ್ವೋದಯ, ಗ್ರಾಮದ ಮುಖಂಡರಾದ ದತ್ತು ಕಲಶೆಟ್ಟಿ, ಪುಂಡಲೀಕ್, ಮಲ್ಲಿನಾಥ ಬಳೂಂಡಗಿ, ಸುಭಾಷ್ ಜಮಾದಾರ್,ಸರ್ವ ಶಿಕ್ಷಕರು, ಅಂಗನವಾಡಿಯ ಕಾರ್ಯಕರ್ತೆಯರು, ಟ್ರಸ್ಟ್ ಸಿಬ್ಬಂದಿ ಲಕ್ಷ್ಮಣ ನಾಗರಹಳ್ಳಿ ಸೇರಿದಂತೆ ಅನೇಕರಿದ್ದರು.