ಐಇಸಿ ಚಟುವಟಿಕೆ ಕುರಿತು ಉಪನ್ಯಾಸ

ಕಲಬುರಗಿ,ಆ 12: ಚಿತ್ತಾಪುರ ತಾಲೂಕಿನ ಅಲ್ಲೂರ (ಬಿ) ಗ್ರಾಪಂ. ಹಾಗೂ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಐಇಸಿ ಚಟುವಟಿಕೆಗಳ ಕುರಿತು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಉಪನ್ಯಾಸ ಹಾಗೂ ಪ್ರಮಾಣ ವಚನ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷ ರಾಮಲಿಂಗಪ್ಪ ಮಾತನಾಡಿ,ಕೊನೆಗೇರಿ ಚಾಲನೆ ನೀಡಿದರು. ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಮನೆಗೆ ಟಿ.ವಿ, ಕೈಗೆ ಮೊಬೈಲ್ ಎಷ್ಟು ಅವಶ್ಯಕವೋ, ಮನೆಗೊಂದು ಶೌಚಾಲಯವೂ ಕೂಡ ಅಷ್ಟೇ ಅವಶ್ಯಕವಾದದ್ದು ಎಂದರು. ನಂತರ ಘನತ್ಯಾಜ್ಯ ವಸ್ತುಗಳ ವಿಲೇವಾರಿ, ನಮ್ಮ ಗ್ರಾಮ, ನಮ್ಮ ಹೆಮ್ಮೆ. ಪರಿಸರ, ಆರೋಗ್ಯ ,ಪ್ಲಾಸ್ಟಿಕ್ ಬಳಕೆಯ ನಿಷೇಧ ಮುಂತಾದ ವಿಷಯಗಳು ಕುರಿತು ಚರ್ಚಿಸಿ ಪ್ರಮಾಣವಚನವನ್ನು ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ ಭಜಂತ್ರಿ, ಸದಸ್ಯರಾದ ಮೌನೇಶ್ ಹಲಗಿ, ನಿಂಗಪ್ಪ ಚಮ್ಮ , ಬಿಲ್ ಕಲೆಕ್ಟರ್ ಸಾಬಣ್ಣ ತಳವಾರ್, ಟ್ರಸ್ಟ್ ಸಿಬ್ಬಂದಿ ಶಶಿಕುಮಾರ್, ಶಾಲೆಯ ಶಿಕ್ಷಕರು ಸೇರಿದಂತೆ ಮುಂತಾದವರಿದ್ದರು. ದೇವರಾಜ್ ನಿರೂಪಿಸಿ, ವಂದಿಸಿದರು.