ಐಇಸಿ ಚಟುವಟಿಕೆ ಅರಿವು ಕಾರ್ಯಕ್ರಮ

ಅಫಜಲಪೂರ,ಜೂ 29: ತಾಲೂಕಿನ ಭೈರಾಮಡಗಿ ಗ್ರಾಪಂ ಹಾಗೂ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಐಇಸಿ ಚಟುವಟಿಕೆಗಳ ಕುರಿತು ಭೈರಾಮಡಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಉಪನ್ಯಾಸ ಹಾಗೂ ಪ್ರಮಾಣವಚನ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದಗ್ರಾಮ ಪಂಚಾಯತ್ ಕಾರ್ಯದರ್ಶಿ ವಿಠ್ಠಲ್ ಸುರಪುರ ಗ್ರಾಮದ ಸ್ವಚ್ಛತೆಗೆ ವಿದ್ಯಾರ್ಥಿಗಳು ಮುಂದಾಳತ್ವವನ್ನು ವಹಿಸಬೇಕು, ಅದಕ್ಕೆ ಸರ್ವ ರೀತಿಯಿಂದಲೂ ಸಹಕರಿಸಲಾಗುವದುಎಂದರು. ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಐಇಸಿ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರು ಜುಬ್ರಾಯಿಲ್ ಮುಲ್ಲಾ ವಹಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ರೇಣುಕಾ ಸಿದ್ದಪ್ಪ ಪೂಜಾರಿ, ಪಂಪ್ ಆಪರೇಟರ್ ಅಶೋಕ ಚಾಳೆಕರ್, ಸಹ ಶಿಕ್ಷಕಿಯರಾದ ನಿರ್ಮಲ ದುತ್ತರಗಿ, ವಾಣಿಶ್ರೀ ಕುಲಕರ್ಣಿ,ವಿಜಯಶ್ರೀ ಬನಸೋಡೆ, ಬಿಬಿ ಆಯೇಷಾ ಇಂಡಿಕರ್ , ಅತಿಥಿ ಶಿಕ್ಷಕಿ ಜ್ಯೋತಿ ಭಜಂತ್ರಿ, ಎಸ್‍ಡಿಎಂಸಿ ಅಧ್ಯಕ್ಷ ತುಕಾರಾಂ ಯಳಸಂಗಿ, ಟ್ರಸ್ಟ್ ಸಿಬ್ಬಂದಿ ಲಕ್ಷ್ಮಣ ನಾಗರಹಳ್ಳಿ ಸೇರಿದಂತೆ ಅನೇಕರಿದ್ದರು. ಶಿವಯೋಗಪ್ಪ ಗುಂಜೇಟಿ ನಿರೂಪಿಸಿ, ವಂದಿಸಿದರು.