
ಅಫಜಲಪೂರ :ಆ.30: ತಾಲೂಕಿನ ರಾಮನಗರ ಗ್ರಾಂ.ಪಂ. ಹಾಗೂ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ 2023 – 24ಸಾಲಿನ ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಐಇಸಿ ಚಟುವಟಿಕೆಗಳ ಕುರಿತು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಪನ್ಯಾಸ ಹಾಗೂ ಪ್ರಮಾಣ ವಚನ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗ್ರಾಂ.ಪಂ. ಅಭಿವೃದ್ಧಿ ಅಧಿಕಾರಿ ಭೌರಮ್ಮ ಕುಂಬಾರ ಎಲ್ಲೆಂದರಲಿ ಕಸ ಎಸೆಯದೆ ಗ್ರಾಮದ ಸ್ವಚ್ಛತೆಗೆ ಸಹಕರಿಸಬೇಕು. ಪಂಚಾಯಿತಿ ವತಿಯಿಂದ ಸರ್ಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬರು ಪಡೆಯಬೇಕೆಂದರು. ತದನಂತರ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಕ್ಲೀನ್ ಸಿಟಿ ಹಾಗೂ ಗ್ರೀನ್ ಸಿಟಿಯಂತೆ ನಮ್ಮ ಗ್ರಾಮವನ್ನು ಕ್ಲೀನ್ ಹಾಗೂ ಗ್ರೀನ್ ವಿಲೇಜ್ ಗ್ರಾಮವನ್ನಾಗಿ ಮಾಡಲು ಪ್ರತಿಯೊಬ್ಬ ವಿದ್ಯಾರ್ಥಿಗಳು ಮನಸ್ಸು ಮಾಡಬೇಕೆಂದು ವಿದ್ಯಾರ್ಥಿಗಳಲ್ಲಿ ಕೇಳಿಕೊಂಡರು. ಕೊನೆಯದಾಗಿ ಎಲ್ಲರೂ ವಾಗ್ದಾನ ಮಾಡಿದರು. ಈ ಸಂದರ್ಭದಲ್ಲಿ ಗ್ರಾಂ. ಪಂ. ಕಾರ್ಯದರ್ಶಿ ಗುರಣ್ಣ ಕರಿಗುಡ್ಡಿ, ಮುಖ್ಯಗುರು ನಿಂಗಪ್ಪ ಪೂಜಾರಿ, ಸುರೇಖಾ ಬಿರಾಜದಾರ್, ನಾಗಮ್ಮ ರೂಪನೂರ್, ಪಾರ್ವತಿ ಸೇಜುಳೆ,ಅಂಜು ರೂಪನೂರ, ಟ್ರಸ್ಟ್ ಸಿಬ್ಬಂದಿ ಲಕ್ಷ್ಮಣ ನಾಗರಹಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಹುಸೇನಿ ಮುಜಾವರ್ ನಿರೂಪಿಸಿ, ವಂದಿಸಿದರು.